ಅಫ್ಘಾನಿಸ್ತಾನದ ಮಾಜಿ ಸಂಸದೆ ಮುರ್ಸಲ್‌ ನಬಿಝಾದಾ ಹಾಗೂ ಅವರ ಓರ್ವ ಅಂಗರಕ್ಷಕ ದುಷ್ಕರ್ಮಿಯೊಬ್ಬನ ಗುಂಡೇಟಿಗೆ ಶನಿವಾರ ತಡರಾತ್ರಿ ಬಲಿಯಾಗಿದ್ದಾರೆ. ಈ ದುರ್ಘಟನೆಯಲ್ಲಿ ಮುರ್ಸಲ್‌ ಅವರ ಸೋದರನಿಗೂ ಗಾಯಗಳಾಗಿವೆ.

ಕಾಬೂಲ್‌: ಅಫ್ಘಾನಿಸ್ತಾನದ ಮಾಜಿ ಸಂಸದೆ ಮುರ್ಸಲ್‌ ನಬಿಝಾದಾ ಹಾಗೂ ಅವರ ಓರ್ವ ಅಂಗರಕ್ಷಕ ದುಷ್ಕರ್ಮಿಯೊಬ್ಬನ ಗುಂಡೇಟಿಗೆ ಶನಿವಾರ ತಡರಾತ್ರಿ ಬಲಿಯಾಗಿದ್ದಾರೆ. ಈ ದುರ್ಘಟನೆಯಲ್ಲಿ ಮುರ್ಸಲ್‌ ಅವರ ಸೋದರನಿಗೂ ಗಾಯಗಳಾಗಿವೆ. ಅಫ್ಘಾನಿಸ್ತಾನವನ್ನು ತಾಲಿಬಾನ್‌ ವಶಕ್ಕೆ ಪಡೆದುಕೊಳ್ಳುವವರೆಗೂ ಮುರ್ಸಲ್‌ ಸಂಸದೆಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇದಾದ ಬಳಿಕವೂ ದೇಶ ತೊರೆಯದೇ ಆಫ್ಘನ್‌ ಜನರಿಗಾಗಿ ಹೋರಾಟ ನಡೆಸುತ್ತಿದ್ದರು. ಶನಿವಾರ ತಡರಾತ್ರಿ ಮುರ್ಸಲ್‌ ಅವರ ಮನೆಗೆ ನುಗ್ಗಿದ ದುಷ್ಕರ್ಮಿ ಗುಂಡಿನ ದಾಳಿ ನಡೆಸಿದ್ದಾನೆ. ಈ ವೇಳೆ ಮುರ್ಸಲ್‌ ಹಾಗೂ ಓರ್ವ ಅಂಗರಕ್ಷಕ ಮೃತಪಟ್ಟಿದ್ದು, ಅವರ ಸೋದರ ಗಾಯಗೊಂಡಿದ್ದಾರೆ. ಈ ಪ್ರಕರಣವನ್ನು ತಾಲಿಬಾನ್‌ ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ನಡೆಸುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

1971ರ ಶರಣಾಗತಿ ಫೋಟೋ ತೋರ್ಸಿ ಪಾಕ್‌ಗೆ ತಾಲಿಬಾನ್‌ ಎಚ್ಚರಿಕೆ

ಅಫ್ಘಾನಿಸ್ತಾನದಲ್ಲಿ ವಿದ್ಯಾರ್ಥಿನಿಯರ ಓದಿಗೆ ಕೊಳ್ಳಿ: ಇರಾನಿನಲ್ಲಿ ಹಿಜಾಬ್ ವಾರ್