Asianet Suvarna News Asianet Suvarna News

ಫೈಝರ್, ಮಾಡೆರ್ನಾ ಶೀಘ್ರದಲ್ಲಿ ಭಾರತ ತಲುಪಲು ಮಹತ್ವದ ಹೆಜ್ಜೆ!

* ಮಾಡೆರ್ನಾ, ಫೈಝರ್ ವಿಚಾರದಲ್ಲಿ ಮಹತ್ವದ ಹೆಜ್ಜೆ ಇರಿಸಿದ ಸರ್ಕಾರ

* ಪ್ರಯೋಗ ನಡೆಸದೇ ತುರ್ತು ಬಳಕೆಗೆ ಅನುಮತಿ

* ಶೀಘ್ರದಲ್ಲೇ ಭಾರತಕ್ಕೆ ತಲುಪಪಲಿದೆ ವ್ಯಾಕ್ಸಿನ್

Foreign Vaccines Like Pfizer Moderna A Step Closer With Key India Waiver pod
Author
Bangalore, First Published Jun 2, 2021, 1:27 PM IST

ನವದೆಹಲಿ(ಜೂ.02): ಭಾರತದಲ್ಲಿ ಫೈಝರ್ ಹಾಗೂ ಮಾಡೆರ್ನಾದಂತಹ ವಿದೇಶೀ ವ್ಯಾಕ್ಸಿನ್‌ಗಳನ್ನು ಶೀಘ್ರದಲ್ಲೇ ಭಾರತಕ್ಕೆ ತರುವ ಯತ್ನ ನಡೆಸಲಾಗುತ್ತಿದ್ದು, ಸದ್ಯ ಈ ವಿಚಾರವಾಗಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯೊಂದನ್ನಿರಿಸಿದೆ. ಭಾರತದ ಔಷಧ ನಿಯಂತ್ರಣ ಮಂಡಳಿಯು ಈ ವ್ಯಾಕ್ಸಿನ್‌ಗಳಿಗೆ ದೇಶದಲ್ಲಿ ಪ್ರತ್ಯೇಕ ಪ್ರಯೋಗ ನಡೆಸುವ ಷರತ್ತನ್ನು ತೆಗೆದು ಹಾಕಿದೆ. ಇತರ ದೇಶಗಳು ಹಾಗೂ ವಿಶ್ವ ಆರೋಗ್ಯ ಸಂಸ್ಥೆ ತುರ್ತು ಬಳಕೆಗೆ ಅನುಮತಿ ನೀಡಿದೆ. ಇಂತಹ ಲಸಿಕೆಗಳು ಈಗ ಭಾರತದಲ್ಲಿ ಪ್ರಯೋಗದ ಹಂತ ದಾಟಬೇಕಿಲ್ಲ.

ಆರೋಗ್ಯ ಸಚಿವಾಲಯದ ಮೂಲದಿಂದ ಲಭ್ಯವಾದ ಮಾಹಿತಿ ಅನ್ವಯ ಫೈಝರ್ ಹಾಗೂ ಮಾಡೆರ್ನಾ ಬಳಕೆ ವಿಚಾರದಲ್ಲಿ indemnity against liability ಬಗ್ಗೆ ನಮಗೆ ಯವುದೇ ತಕರಾರಿಲ್ಲ. ಇತರ ದೇಶಗಳು ಬಳಕೆಗೆ ಅವಕಾಶ ನೀಡಿವೆ ಎಂದಾದರೆ, ನಾವು ಕೂಡಾ ಇದಕ್ಕೆ ತಯಾರಿದ್ದೇವೆ. ಈ ಕಂಪನಿಗಳು ದೇಶದಲ್ಲಿ ತುರ್ತು ಬಳಕೆಗೆ ಅವಕಾಶ ನೀಡಲು ಕೋರಿದರೆ, ನಾವು ಒಪ್ಪಿಗೆ ನಿಡುತ್ತೇವೆ. ಇನ್ನು ಭಾರತ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆಯನ್ನು ಆರ್ಡರ್‌ ಮಾಡಿದೆ ಹೀಗಾಗಿ ಲಸಿಕೆ ತಲುಪಲು ವಿಳಂಬವಾಗುತ್ತಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ ಎನ್ನಲಾಗಿದೆ.

ಫೈಝರ್ ಹಾಗು ಮಾಡೆರ್ನಾ ಕಂಪನಿಗಳು ಭಾರತದಲ್ಲಿ ಲಸಿಕೆ ಪ್ರಯೋಗದಿಂದ ತಮಗೆ ರಿಯಾಯಿತಿ ನಿಡಲು ಮನವಿ ಮಾಡಿದ್ದವು. ಹೀಗಿದ್ದರೂ ಸರ್ಕಾರ ಈವರೆಗೆ ಈ  ವಿಚಾರವಾಗಿ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. 

Follow Us:
Download App:
  • android
  • ios