ಪ್ರಾಣದ ಹಂಗು ತೊರೆದು ಕರಡಿ ಬಾಯಿಯಿಂದ ಶ್ವಾನವನ್ನು ರಕ್ಷಿಸಿದ ವ್ಯಕ್ತಿ

  • ಕರಡಿಯಿಂದ ಶ್ವಾನವನ್ನು ರಕ್ಷಿಸಿದ ವ್ಯಕ್ತಿ 
  • ಅಮೆರಿಕಾದ ಫ್ಲೋರಿಡಾದಲ್ಲಿ ಘಟನೆ
  • ವ್ಯಕ್ತಿಯ ಸಾಹಸಕ್ಕೆ ನೆಟ್ಟಿಗರ ಮೆಚ್ಚುಗೆ
Florida man saves pet dogs from deadly bear attack watch viral video akb

ಫ್ಲೋರಿಡಾ(ಜ.25):  ಕರಡಿ ಬಾಯಿಯಿಂದ ವ್ಯಕ್ತಿಯೊಬ್ಬ ತನ್ನ ಸಾಕು ನಾಯಿಯನ್ನು ರಕ್ಷಣೆ ಮಾಡಿದ್ದು, ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಒಂದು ಲಕ್ಷಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. 

ಫ್ಲೋರಿಡಾದ ವಾಲ್ಟರ್ ಹಿಕಾಕ್ಸ್ ( Walter Hickox) ಎಂಬುವವರು  ಸಾಕು ನಾಯಿಯ ರಕ್ಷಿಸಲು ಪ್ರಾಣದ ಹಂಗನ್ನು ತೊರೆದು ಅಪಾಯಕಾರಿಯಾದ ಕಪ್ಪು ಕರಡಿಯೊಂದಿಗೆ ಹೋರಾಡಿದ್ದಾರೆ. ಇವರು ಕರಡಿಯೊಂದಿಗೆ ಹೋರಾಡುವ ದೃಶ್ಯ ಅಲ್ಲೇ ಇದ್ದ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಅಲ್ಲದೇ ಈ ವಿಡಿಯೋ ವೈರಲ್‌ ಹಗ್‌ನ ಇನ್ಸ್ಟಾಗ್ರಾಮ್‌ ಖಾತೆಯಲ್ಲೂ ವೈರಲ್‌ ಆಗಿದ್ದು ಎಲ್ಲರೂ  ಹಿಕಾಕ್ಸ್  ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.  ಫ್ಲೋರಿಡಾದ ಡೇಟೋನಾ (Daytona) ಬೀಚ್‌ ಸಮೀಪವಿರುವ ಹಿಕಾಕ್ಸ್ ಮನೆಯಲ್ಲಿ ಈ ಘಟನೆ ನಡೆದಿದೆ.

 
 
 
 
 
 
 
 
 
 
 
 
 
 
 

A post shared by ViralHog (@viralhog)

 

ಕಪ್ಪು ಕರಡಿ ಮನೆಯ ಮುಂಭಾಗದ ಹಾಲ್‌ಗೆ ಪ್ರವೇಶಿಸಲು ಪ್ರಯತ್ನಿಸಿದಾಗ ಹಿಕಾಕ್ಸ್ ತನ್ನ ಸಾಕು ನಾಯಿಯ ರಕ್ಷಣೆಗೆ ಜಿಗಿಯುತ್ತಿರುವುದನ್ನು ಈ ವಿಡಿಯೋ ತುಣುಕಿನಲ್ಲಿ ಕಾಣಬಹುದು. ಹಿಕಾಕ್ ಅವರು ಮಾರಣಾಂತಿಕ ಕರಡಿಯನ್ನು ಮನೆಯಿಂದ ಆಚೆಗೆ ತಳ್ಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ವೇಳೆ ಅದು ಅವರಿಗೂ ಕಚ್ಚಿದ್ದು, ಹಿಕಾಕ್ಸ್‌ಗೆ ಕೆಲವು ಗೀರಿದಂತಹ ಗಾಯಗಳಾಗಿದೆ ಎಂದು ಡೈಲಿ ಮೇಲ್ ವರದಿ ಮಾಡಿದೆ. ಅಲ್ಲದೇ ಕರಡಿ ಮತ್ತೆ  ಹಾಲ್‌ಗೆ ಬಾರದಂತೆ ತಡೆಯಲು ಹಿಕಾಕ್ಸ್ ಅಲ್ಲೇ ಇದ್ದ ಸೋಫಾದಂತಹ ಪಿಠೋಪಕರಣವನ್ನು ಬಾಗಿಲಿಗೆ ಅಡ್ಡ ಇಡುವುದು ವಿಡಿಯೋದಲ್ಲಿ ರೆಕಾರ್ಡ್‌ ಆಗಿದೆ.

ಶ್ವಾನಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಮನೆ ಇಲ್ಲದ ನಿರ್ಗತಿಕ... ಭಾವುಕ ವಿಡಿಯೋ ವೈರಲ್‌

 ಓ ಮೈ ಗಾಡ್, ನನ್ನ ಮೇಲೆ ಕರಡಿ ದಾಳಿ ಮಾಡಿತ್ತು ಎಂದು ಹಿಕಾಕ್ಸ್‌  ತನ್ನ ಹೆಂಡತಿ ಕೆರ್ರಿ ( Kerry) ಜೊತೆ ಕೂಗಿ ಹೇಳುವುದನ್ನು ವಿಡಿಯೋದಲ್ಲಿ ಕೇಳಬಹುದು. ಕರಡಿಯೂ ದಾಳಿ ಮಾಡಿದ ವೇಳೆ, ನನ್ನ ಉಳಿದ ನಾಯಿಗಳು ಮತ್ತು ನನ್ನ ಹೆಂಡತಿ ಇರುವ ಸ್ಥಳಕ್ಕೆ ಕರಡಿ ಹೋದರೆ ಏನಾಗಬಹುದು ಎಂಬುದನ್ನು ಹೊರತುಪಡಿಸಿ ಬೇರೇನೂ ನನ್ನ ತಲೆಯಲ್ಲಿ ಇರಲಿಲ್ಲ ಎಂದು ಹಿಕಾಕ್ಸ್‌ ಘಟನೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಮೊದಲಿಗೆ ನಾಯಿಗಳ ಸದ್ದು ಕೇಳಿ ಬಂದಾಗ, ಹಿಕಾಕ್ಸ್‌ ತನ್ನ ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡಿದ್ದು ನೆರೆಹೊರೆಯವರ ನಾಯಿ ಎಂದು ಭಾವಿಸಿದ್ದರಂತೆ. ಬಳಿಕ ಬಂದು ನೋಡಿದ ಮೇಲೆ ಇದು ಕರಡಿ ಎಂದು ಗೊತ್ತಾಗಿದ್ದು, ಕೂಡಲೇ ಸಮಯಪ್ರಜ್ಞೆ ಮೆರೆದ ಅವರು ನಾಯಿಗಳ ರಕ್ಷಣೆಗೆ ಧಾವಿಸಿ ಬಂದಿದ್ದಾರೆ. 

ನೀರಿನಲ್ಲಿ ಮುಳುಗುತ್ತಿದ್ದ ಜಿಂಕೆಮರಿಯನ್ನು ರಕ್ಷಿಸಿದ ಮುದ್ದು ಶ್ವಾನ

ಈ ಮಧ್ಯೆ ತನ್ನ ಸಾಕು ನಾಯಿಗಳನ್ನು ಉಳಿಸಲು ತನ್ನ ಪ್ರಾಣವನ್ನೇ ಪಣಕ್ಕಿಟ್ಟ ಹಿಕಾಕ್ಸ್‌ಗೆ  ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ. ಕೆಲವು ಇಂಟರ್‌ನೆಟ್ ಬಳಕೆದಾರರು ಅವನನ್ನು ನಾಯಿಯ ವರ್ಷದ ತಂದೆ (dog dad of the year) ಎಂದು ಕರೆದರು., ಇತರರು ಅವನ ಮತ್ತು ಅವನ ಕುಟುಂಬದ ಯೋಗಕ್ಷೇಮದ ಬಗ್ಗೆ ಕಾಳಜಿ ವಹಿಸಿದರು. 

ಕಳೆದ ವಾರದಲ್ಲಿ ಈ ಪ್ರದೇಶದಲ್ಲಿ ನಡೆದ ಎರಡನೇ ಕರಡಿ ದಾಳಿ ಇದು ಎಂದು ಡೇಟೋನಾ ಬೀಚ್ ಪೊಲೀಸರು ಖಚಿತಪಡಿಸಿದ್ದಾರೆ. ಇದಕ್ಕೂ ಮೊದಲು ಡಿಬಾರಿಯಲ್ಲಿ (DeBary) ಮಹಿಳೆಯೊಬ್ಬರು ತನ್ನ ನಾಯಿಯನ್ನು ವಾಕಿಂಗ್ ಕರೆದುಕೊಂಡು ಹೊರಟಿದ್ದಾಗ ಕರಡಿಯೊಂದು ದಾಳಿ ನಡೆಸಿತ್ತು.

Latest Videos
Follow Us:
Download App:
  • android
  • ios