Asianet Suvarna News Asianet Suvarna News

30 ವರ್ಷದ ಬಳಿಕ ವಿಮಾನದಲ್ಲಿ ನೆಚ್ಚಿನ ಶಿಕ್ಷಕಿ ಭೇಟಿಯಾದ ಸಿಬ್ಬಂದಿ, ವಿಡಿಯೋ ವೈರಲ್!

ಪ್ರತಿಯೊಬ್ಬರ ಜೀವನದಲ್ಲಿ ಶಿಕ್ಷರ ಪಾತ್ರ ಅತ್ಯಂತ ಪ್ರಮುಖವಾಗಿದೆ. ಹೀಗೆ ವಿಮಾನ ಸಿಬ್ಬಂದಿ ತನ್ನ ಜೀವನದ ಯಶಸ್ಸಿಗೆ ಧಾರೆ ಎರೆದ ಶಿಕ್ಷಕಿಯನ್ನು ಬರೋಬ್ಬರಿ 30 ವರ್ಷದ ಬಳಿಕ ವಿಮಾನದಲ್ಲಿ ಭೇಟಿಯಾದ ಘಟನೆ ನಡೆದಿದೆ. ತನ್ನ ಶಿಕ್ಷಕಿ ಇದೇ ವಿಮಾನದಲ್ಲಿದ್ದಾರೆ ಎಂದು ಅನೌನ್ಸ್ ಮಾಡಿ ಶಿಕ್ಷಕಿಯ ಬಳಿ ಬಂದು ಬಿಗಿದಪ್ಪಿದ ವಿಡಿಯೋ ವೈರಲ್ ಆಗಿದೆ.

Flight attendant emotional after meet her favorite teacher on Airplane almost 30 years later  in Canada ckm
Author
First Published Oct 26, 2022, 6:33 PM IST

ಕೆನಡ(ಅ.26):  ವಿದ್ಯಾರ್ಥಿಯನ್ನು ಸರಿದಾರಿಯಲ್ಲಿ ಮುನ್ನಡೆಸಿ, ವಿದ್ಯೆ, ಬುದ್ಧಿ, ಶಿಸ್ತು ಕಲಿಸಿ ಉನ್ನತ ವ್ಯಕ್ತಿಯನ್ನಾಗಿ ಮಾಡುವ ಸಾಮರ್ಥ್ಯ ಇರುವುದು ಶಿಕ್ಷಕನಿಗೆ ಮಾತ್ರ. ಜೀವನ ರೂಪಿಸಿದ ಶಿಕ್ಷಕ ಅಥವಾ ಶಿಕ್ಷಕಿ ಎದುರಿಗೆ ಸಿಕ್ಕಾಗ ಆಗುವ ಆನಂದ ಅಷ್ಟಿಷ್ಟಲ್ಲ. ಹೀಗೆ ವಿಮಾನ ಸಿಬ್ಬಂದಿಗೆ ತನ್ನ ಶಿಕ್ಷಕಿ ಇದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾರೆ ಅನ್ನೋದು ಗೊತ್ತಾಗಿದೆ. ತಕ್ಷಣವೇ ಸಿಬ್ಬಂದಿ ವಿಮಾನದಲ್ಲಿ ಅನೌನ್ಸ್ ಮಾಡಿದ್ದಾರೆ. ನನಗೆ ವಿದ್ಯೆ ಕಲಿಸಿದ, ತಿದ್ದಿ ತೀಡಿದ ಶಿಕ್ಷಕಿ ಇದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾರೆ. 30 ವರ್ಷಗಳ ಬಳಿಕ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿದೆ ಎಂದಿದ್ದಾರೆ. ಬಳಿಕ ನೇರವಾಗಿ ಶಿಕ್ಷಕಿ ಕುಳಿತ ಜಾಗಕ್ಕೆ ತೆರಳಿ ಬಿಗಿದಪ್ಪಿದ್ದಾರೆ. ಶುಭಾಶಯ ವಿನಿಮಯ ಮಾಡಿದ್ದಾರೆ. ಈ ವಿಡಿಯೋ ಭಾರಿ ವೈರಲ್ ಆಗಿದೆ.

ಕೆನಡಾದ YYZ/LAX ವಿನಾನದಲ್ಲಿ ಈ ಸಮಾಗಮ ನಡೆದಿದೆ. ವೆಸ್ಟ್ ಜೆಟ್ ಸಿಬ್ಬಂದಿ ಲೋರಿ ವಿಮಾನದ ಒಳ ಬಂದು ಘೋಷಣೆ ಮಾಡಿದ್ದಾರೆ. ಆರಂಭದಲ್ಲಿ ಈ ಘೋಷಣೆ ಯಾರಿಗೂ ಅಚ್ಚರಿ ತಂದಿಲ್ಲ. ಕಾರಣ ವಿಮಾನದ ನಿಯಮಗಳು ಸೇರಿದಂತೆ ಇತರ ಮಾಹಿತಿಗಳ ಘೋಷಣೆ ಎಂದು ತಿಳಿದಿದ್ದಾರೆ. ಆದರೆ ಲೋರಿ ಮಾತು ಆರಂಭಿಸಿದಾಗ ಎಲ್ಲರ ಕುತೂಹಲ ಹೆಚ್ಚಾಯಿತು. ಇಂದು ಅಂತಾರಾಷ್ಟ್ರೀಯ ಶಿಕ್ಷಕರ ದಿನ. ನಮ್ಮ ಜೀವನ ಬದಲಿಸಿದ, ನೆಚ್ಚಿನ ಶಿಕ್ಷಕರನ್ನು ಗೌರವಿಸುವ ದಿನ. ಹೀಗೆ ನನ್ನ ಜೀವನದಲ್ಲಿ ಅತೀ ಹೆಚ್ಚು ಇಷ್ಟಪಟ್ಟ ನೆಚ್ಚಿನ ಶಿಕ್ಷಕಿಯನ್ನು ಬೇಟಿಯಾಗುವ ಅವಕಾಶ ಸಿಕ್ಕಿದೆ. ನಾನು ಭಾವುಕಳಾಗಿದ್ದೇನೆ. 1990ರ ದಶಕದಲ್ಲಿ ನನಗೆ ವಿದ್ಯೆ ಕಲಿಸಿದ ಮಿಸ್ ಒ ಕೊನೆಲ್ ಶಿಕ್ಷಕಿ ಇದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾರೆ. 30 ವರ್ಷದ ಬಳಿಕ ಅವರನ್ನು ಭೇಟಿಯಾಗುತ್ತಿದ್ದೇನೆ ಎಂದು ಲೋರಿ ಅನೌನ್ಸ್ ಮಾಡಿದ್ದಾರೆ.

 

 

ಗಾಡಿ ನಿಲ್ಸ್ರೋ... ಬಸ್ ಅಡ್ಡ ಹಾಕಿ ಏರಲು ಬಂದ ಆನೆ : ವಿಡಿಯೋ ವೈರಲ್

1990ರ ಬಳಿಕ ನಾನು ನೆಚ್ಚಿನ ಶಿಕ್ಷಕಿಯನ್ನು ಭೇಟಿಯಾಗಿಲ್ಲ. ಈ ಟೀಚರ್ ಶೇಕ್ಸ್‌ಪಿಯರ್ ಮೇಲೆ ಪ್ರೀತಿ ಮೂಡುವಂತೆ ಮಾಡಿದರು. ಪಿಯಾನೋ ನುಡಿಸಲು ಕಲಿಸಿದರು. ನಾನು ಪಿಯಾನೋದಲ್ಲಿ ಮಾಸ್ಟರ್ ಮಾಡಿದ್ದೇನೆ. ನಿಮಗೆ ಧನ್ಯವಾದ ಎಂದು ಹೇಳಿದ ಲೋರಿ ಬಳಿಕ ನೇರವಾಗಿ ಟೀಚರ್ ಬಳಿ ತೆರಳಿದ್ದಾರೆ. ಈ ವೇಳೆ ವಿಮಾನದಲ್ಲಿದ್ದ ಪ್ರಯಾಣಿಕರು ಚಪ್ಪಾಳೆ ಮೂಲಕ ಅಭಿನಂದಿಸಿದ್ದಾರೆ. ಶಿಕ್ಷಕಿಯನ್ನು ಅಪ್ಪಿಕೊಂಡು ಭಾವುಕರಾಗಿದ್ದಾರೆ. ಈ ವೇಳೆ ಶಿಕ್ಷಕಿ ಕೊನೆಲ್ ಕೂಡ ಭಾವುಕರಾಗಿದ್ದಾರೆ. 

ಈ ವಿಡಿಯೋ ಭಾರಿ ವೈರಲ್ ಆಗಿದೆ. 10 ಲಕ್ಷಕ್ಕೂ ಹೆಚ್ಚಿನ ವೀವ್ಸ್ ಕಂಡಿದೆ. ಶಿಕ್ಷಕರನ್ನು ಗುರುತಿಸುವುದು, ಅವರನ್ನು ಗೌರವಿಸುವುದು ಅತೀ ಮುಖ್ಯ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಈ ಸಮಾಗಮ ಸಂಭ್ರಮದಲ್ಲಿ ನಾವು ಪಾಲುದಾರಿಗಳಾಗುತ್ತೇವೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. 

ಪುಟ್ಟ ಬಾಲಕನ ಕಿತಾಪತಿಗೆ ಅಪ್ಪನ ಕಾರು ಅಮ್ಮನ ಲಿಪ್‌ಸ್ಟಿಕ್ ಎರಡೂ ಢಮಾರ್

Follow Us:
Download App:
  • android
  • ios