ಕೊರೋನಾ ಲಸಿಕೆ ಪಡೆದಿದ್ದ ಮಹಿಳೆ| ಜನ್ಮ ನೀಡಿದ ಮಗುವವಿನಲ್ಲಿ ಕೊರೋನಾ ವಿರುದ್ಧ ಹೋರಾಡುವ ಪ್ರತಿಕಾಯ ಶಕ್ತಿ ಪತ್ತೆ| ಆಕೆ ಪಡೆದ ವ್ಯಾಕ್ಸಿನ್ ಯಾವುದು?
ಫ್ಲೋರಿಡಾ(ಮಾ.18): ಕೊರೋನಾ ಲಸಿಕೆಯ ಮೊದಲ ಡೋಸ್ ಲಸಿಕೆ ಪಡೆದ ಗರ್ಭಿಣಿ ಮಹಿಳೆಯೊಬ್ಬಳು ವೈರಸ್ ವಿರುದ್ಧದ ಪ್ರತಿಕಾಯಗಳನ್ನು ಹೊಂದಿರುವ ಮಗುವಿಗೆ ಜನ್ಮ ನೀಡಿದ್ದಾರೆ ಎಂದು ವರದಿಯಾಗಿದೆ. ಅಮೆರಿಕದ ಫ್ಲೋರಿಡಾ ಅಟ್ಲಾಂಟಿಕ್ ಯೂನಿವರ್ಸಿಟಿಯಲ್ಲಿ ಇಂತಹುದ್ದೊಂದು ಅಚ್ಚರಿ ಸಂಭವಿಸಿದೆ.
ಮಹಹಿಳೆ ಗರ್ಭಿಣಿಯಾಗಿ 36ನೇ ವಾರದಲ್ಲಿ ಮಾಡೆರ್ನಾ ಲಸಿಕೆಯನ್ನು ಪಡೆದಿದ್ದರು. ಇದಾದ ಮೂರು ವಾರದ ಬಳಿಕ ಈ ಮಹಿಳೆ ಪುಟ್ಟ ಕಂದನಿಗೆ ಜನ್ಮ ನೀಡಿದ್ದಾರೆ. ಆರೋಗ್ಯಯುತ ಮಗು ಜನಿಸಿದ ಕೆಲವೇ ಕ್ಷಣಗಳಲ್ಲಿ ರಕ್ತದ ಮಾದರಿಯನ್ನು ಕೊರೊನಾ ಪರೀಕ್ಷೆಗೆ ಕಳುಹಿಸಲಾಗಿದೆ. ಈ ವರದಿಯಲ್ಲಿ ಮಗುವಿನ ದೇಹದಲ್ಲಿ ಕೊರೋನಾ ವಿರುದ್ಧ ಹೋರಾಡಲು ಅಗತ್ಯವಾದ ಪ್ರತಿಕಾಯ ಶಕ್ತಿ ವಿಕಾಸಗೊಂಡಿರುವುದು ಪತ್ತೆಯಾಗಿದೆ.
ಕೋವಿಡ್ ಗರ್ಭಿಣಿಗೆ ಜನಿಸಿದ ಮಗುವಿನಲ್ಲಿ ಪ್ರತಿಕಾಯ ಪತ್ತೆ!
ಕಳೆದ ವರ್ಷ ನವೆಂಬರ್‌ನಲ್ಲೂ ಇಂತಹುದೇ ಅಚ್ಚರಿಯ ಸುದ್ದಿಯೊಂದು ಸಿಂಗಾಪುರದಲ್ಲಿ ವರದಿಯಾಗಿತ್ತು. ಗರ್ಭಿಣಿ ಮಹಿಳೆ ಜನ್ಮ ನೀಡಿದ್ದ ಮಗುವಿನ ದೇಹದಲ್ಲಿ ಕೊರೋನಾ ವಿರುದ್ಧ ಹೋರಾಡುವ ಪ್ರತಿಕಾಯವಿದ್ದ ಸುದ್ದಿ ಇದಾಗಿತ್ತು. ಅದಕ್ಕೂ ಅಚ್ಚರಿಯ ವಿಚಾರವೆಂದರೆ ಅಂದು ಆ ಮಹಿಳೆ ಕೊರೋನಾ ಲಸಿಕೆ ಸ್ವೀಕರಿಸಿರಲಿಲ್ಲ.
