ಫಿನ್ಲೆಂಡ್‌ ಪ್ರಧಾನಿ ಪಾರ್ಟಿ ವಿಡಿಯೋ ವೈರಲ್‌: ಡ್ರಗ್ಸ್ ತೆಗೆದುಕೊಂಡಿದ್ದರೇ ಜಗತ್ತಿನ ಕಿರಿಯ ಪಿಎಂ..?

ಫಿನ್ಲೆಂಡ್‌ ಪ್ರಧಾನಿ ಸನ್ನಾ ಮರಿನ್‌ ಡ್ಯಾನ್ಸ್‌ ಹಾಗೂ ಪಾರ್ಟಿ ಮಾಡುತ್ತಿರುವ ವಿಡಿಯೋ ವೈರಲ್‌ ಆಗಿದೆ. ಈ ವೇಳೆ ಅವರು ಡ್ರಗ್ಸ್‌ ತೆಗೆದುಕೊಂಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. 

finland prime minister sanna marin partying video viral her reaction on taking drugs ash

ಫಿನ್ಲೆಂಡ್‌ ಪ್ರಧಾನಿ ಸನ್ನಾ ಮರಿನ್ ಜಗತ್ತಿನ ಅತಿ ಕಿರಿಯ ಪ್ರಧಾನಿ ಹಾಗೂ ಮಹಿಳೆ. ಆದರೆ, ಇತ್ತೀಚೆಗೆ ಇವರು ಪಾರ್ಟಿ ಮಾಡುತ್ತಿರುವ ವಿಡಿಯೋವೊಂದು ವೈರಲ್‌ (Viral Video) ಆಗಿದ್ದು, ಈ ಹಿನ್ನೆಲೆ ಮಹಿಳಾ ಪ್ರಧಾನಿ ವಿರುದ್ಧ ನಾನಾ ಟೀಕೆಗಳು ಕೇಳಿಬರುತ್ತಿವೆ. ಲೀಕ್‌ ಆದ ವಿಡಿಯೋದಲ್ಲಿ ತನ್ನ ಸೆಲೆಬ್ರಿಟಿ ಸ್ನೇಹಿತರೊಂದಿಗೆ ಸನ್ನಾ ಮರಿನ್‌ ಡ್ಯಾನ್ಸ್ (Dance) ಮಾಡಿದ್ದಾರೆ ಮತ್ತು ಪಾರ್ಟಿ ಮಾಡಿದ್ದಾರೆ. 36 ವರ್ಷದ ನಾಯಕಿ ಮೊಬೈಲ್ ಫೋನ್ ಕ್ಯಾಮೆರಾಕ್ಕಾಗಿ ಗುಂಪು ನೃತ್ಯ ಮಾಡುವಾಗ ನಶೆಯಲ್ಲಿರುವ ಹಾಗೆ ಕಾಣುತ್ತಾರೆ ಎಂದೂ ಹಲವರು ಹೇಳಿಕೊಂಡಿದ್ದಾರೆ.

ಫಿನ್ಲೆಂಡ್‌ನ ಖಾಸಗಿ ಅಪಾರ್ಟ್‌ಮೆಂಟ್‌ವೊಂದರಲ್ಲಿ (Apartment) ಈ ಪಾರ್ಟಿ ನಡೆದಿದೆ ಎಂದು ತೋರುತ್ತದೆ. ಈ ವಿಡಿಯೋವನ್ನು ಯಾವಾಗ ಚಿತ್ರೀಕರಿಸಲಾಗಿದೆ ಅಥವಾ ಮರಿನ್ ಮತ್ತು ಆಕೆಯ ಸ್ನೇಹಿತರು ಸೆಲೆಬ್ರೇಟ್‌ ಮಾಡುತ್ತಿದ್ದರಾ ಎಂಬುದು ಸ್ಪಷ್ಟವಾಗಿಲ್ಲ. ಫಿನ್ನಿಷ್ ಗಾಯಕಿ ಅಲ್ಮಾ ಮತ್ತು ಅವರ ಸಹೋದರಿ ಅನ್ನಾ, ರ‍್ಯಾಪರ್ ಪೆಟ್ರಿ ನೈಗಾರ್ಡ್, ಟಿವಿ ನಿರೂಪಕಿ ಟಿನ್ನಿ ವಿಕ್ಸ್‌ಟ್ರೋಮ್, ಛಾಯಾಗ್ರಾಹಕಿ ಮತ್ತು ಪ್ರಭಾವಿ ಜನಿತಾ ಆಟಿಯೊ, ರೇಡಿಯೊ ಹೋಸ್ಟ್ ಕರೋಲಿನಾ ಟುಮಿನೆನ್ ಮತ್ತು ಮರಿನ್ ಅವರ ಸೋಶಿಯಲ್ ಡೆಮಾಕ್ರಟಿಕ್ ಪಕ್ಷದ ಸಂಸದರು ಈ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.

ಬುಲೆಟ್ ಏರಿ ಬಂದಳು ನಾರಿ: ವಧುವಿನ ವಿಡಿಯೋ ಸಖತ್ ವೈರಲ್

ಇನ್ನು, ಈ ವಿಡಿಯೋದಲ್ಲಿ ಪ್ರಧಾನಿ ಮರಿನ್‌ ಅವರನ್ನೊಳಗೊಂಡ ಪಾರ್ಟಿ ಮಾಡುತ್ತಿರುವ ಗುಂಪು 'f*** ತುಂಬಾ ಚೆನ್ನಾಗಿದೆ' ಎಂದು ಹಾಡುವುದು ಮತ್ತು 'ಜೌಹೋಜೆಂಗಿ' (jauhojengi) ಎಂದು ಕೂಗುವುದು ಕೇಳಿಸುತ್ತದೆ, ಇದರರ್ಥ ಫಿನ್ನಿಷ್ ಭಾಷೆಯಲ್ಲಿ 'ಫ್ಲೋರ್‌’. ಇದು ಕೊಕೇನ್‌ಗೆ (Cocaine) ಗ್ರಾಮ್ಯ ಪದವಾಗಿದೆ ಎಂದು ಫಿನ್ಲೆಂಡ್‌ ಮಾಧ್ಯಮಗಳು ವರದಿ ಮಾಡಿವೆ. ಈ ಹಿನ್ನೆಲೆ ಫಿನ್ಲೆಂಡ್‌ ಮಹಿಳಾ ಪ್ರಧಾನಿ ಹಾಗೂ ಆ ಗುಂಪು ಡ್ರಗ್ಸ್ (Drugs) ತೆಗೆದುಕೊಂಡಿದ್ದಾರೆ ಎಂಬ ಆರೋಪ ಸಹ ಕೇಳಿಬರುತ್ತಿದೆ. 

ಡ್ರಗ್ಸ್ ತೆಗೆದುಕೊಂಡಿಲ್ಲ ಎಂದ ಫಿನ್ಲೆಂಡ್‌ ಪ್ರಧಾನಿ
ಇನ್ನು, ಫಿನ್ಲೆಂಡ್‌ ಮಹಿಳಾ ಪ್ರಧಾನಿ ಹಾಗೂ ಅವರ ಗುಂಪಿನ ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಸನ್ನಾ ಮರಿನ್ ಗುರುವಾರ ಬೆಳಗ್ಗೆ ಸುದ್ದಿಗೋಷ್ಠಿ ನಡೆಸುವ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ತಾನು ಡ್ರಗ್ಸ್ ತೆಗೆದುಕೊಂಡಿರುವುದನ್ನು ನಿರಾಕರಿಸಿದ ಮರಿನ್‌, ಮತ್ತು "ಮರೆಮಾಚಲು ಅಥವಾ ಮರೆಮಾಡಲು ಏನೂ ಇಲ್ಲ" ಎಂದು ಹೇಳಿದ್ದಾರೆ. ಅಲ್ಲದೆ, ತಾನು ಹೆಚ್ಚು ಕುಡಿಯುತ್ತಿರಲಿಲ್ಲ ಎಂದೂ 36 ವರ್ಷದ ಪ್ರಧಾನಿ ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ, ಈ ವಿಡಿಯೋವನ್ನು ವೈರಲ್‌ ಮಾಡಿದ ವ್ಯಕ್ತಿಯ ವಿರುದ್ಧ ತಿರುಗೇಟು ನೀಡಿದ ಪ್ರಧಾನಿ, ‘’ವಿಡಿಯೋಗಳು ಖಾಸಗಿಯಾಗಿರುವುದರಿಂದ (Private) ಮತ್ತು ಖಾಸಗಿ ಸಮಾರಂಭದಲ್ಲಿ ಪ್ರಕಟಿಸಲಾಗುವುದಿಲ್ಲ ಎಂದು ನಾನು ನಂಬಿದ್ದೆ’’ ಎಂದು ಟೀಕಿಸಿದ್ದಾರೆ.

ಮದುವೆ ಮಂಟಪದಲ್ಲೇ ಹೊಡೆದಾಡಿಕೊಂಡ ಗಂಡು ಹೆಣ್ಣು: ಹೀಗೂ ಇರುತ್ತೆ..!

ಈ ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಅನೇಕ ಜನರು ವಿಡಿಯೋದ ವಿರುದ್ಧ ಟೀಕೆ ಮಾಡಿದ್ದು, ಅಲ್ಲದೆ, ಅನೇಕ ಯುವಕರು ಅಥವಾ ಯುವತಿಯರು ವರ್ತಿಸುವ ರೀತಿಯಲ್ಲಿ ಬದಲಾವಣೆ ಕಾಣಲಿದ್ದು, ಹಾಗೂ ವರ್ತನೆಯ ಸಂಭಾವ್ಯ ಜನಪ್ರಿಯತೆಯನ್ನು ಹೆಚ್ಚಿಸಿದೆ ಎಂದೂ ಹೇಳಿದ್ದಾರೆ. ಹಾಗೂ, ಈಕೆಗೆ ಪ್ರಧಾನಿಯಾಗುವ ಅರ್ಹತೆ ಇಲ್ಲ ಎಂದೂ ಹಲವು ನೆಟ್ಟಿಗರು ಕಿಡಿ ಕಾರಿದ್ದಾರೆ.

ಈ ಹಿಂದೆ ಕೋವಿಡ್ -19 (COVID - 19) ಸೋಂಕಿತ ವ್ಯಕ್ತಿಯೊಬ್ಬರ ಜತೆಗೆ ಸಂಪರ್ಕಕ್ಕೆ ಬಂದ ನಂತರವೂ ಬೆಳಗ್ಗೆ 4 ಗಂಟೆಯವರೆಗೆ ಕ್ಲಬ್‌ನಲ್ಲಿ ಇದ್ದದ್ದಕ್ಕಾಗಿ ಪ್ರಧಾನಿ ಸನ್ನಾ ಮರಿನ್‌ ಕ್ಷಮೆ ಅವರನ್ನು ಕ್ಷಮೆ ಕೋರುವಂತೆ ಒತ್ತಾಯಿಸಲಾಗಿತ್ತು. ನಂತರ, ಆಕೆ ಕ್ಷಮಾಪಣೆ ಕೋರಿದ್ದರು. ಇನ್ನು, 2019 ರಲ್ಲಿ 34 ನೇ ವಯಸ್ಸಿನಲ್ಲಿ ವಿಶ್ವದ ಅತ್ಯಂತ ಕಿರಿಯ ಪ್ರಧಾನಿ ಎನಿಸಿಕೊಂಡಿದ್ದರು ಸನ್ನಾ ಮರಿನ್‌.

Latest Videos
Follow Us:
Download App:
  • android
  • ios