ಮದುವೆ ಮಂಟಪದಲ್ಲೇ ಹೊಡೆದಾಡಿಕೊಂಡ ಗಂಡು ಹೆಣ್ಣು: ಹೀಗೂ ಇರುತ್ತೆ..!
ಇಲ್ಲೊಂದು ಕಡೆ ವಧು ವರರು ಪರಸ್ಪರ ಮದುವೆ ಮಂಟಪದಲ್ಲೇ ರಸ್ಲಿಂಗ್ ತರ ಒಬ್ಬರ ಮೇಲೆ ಒಬ್ಬರು ಬಿದ್ದು ಹೊಡೆದಾಡಿಕೊಂಡಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇತ್ತೀಚೆಗೆ ಮದುವೆ ಸಂಭ್ರಮದ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಮದುವೆ ಎಂದ ಮೇಲೆ ಅಲ್ಲಿ ತುಂಟಾಟ ತರಲೆಗಳಿಗೆ ಯಾವುದೇ ಮಿತಿ ಇರುವುದಿಲ್ಲ. ವಧು ವರನ ಸ್ನೇಹಿತರು, ಸಿಕ್ಕಿದೆ ಛಾನ್ಸ್ ಅಂತ ವಧು ವರರ ಕಾಲೆಳೆಯುವ ಜೊತೆ ಇನ್ನಿಲ್ಲದ ಕಿತಾಪತಿ ಮಾಡುತ್ತಾರೆ. ಇನ್ನು ಅಣ್ಣ ತಮ್ಮಂದಿರು ಅಕ್ಕಂದಿರು, ಕಸಿನ್ಸ್‌ಗಳು ಎಲ್ಲರಿಗೂ ಕುಟುಂಬದ ಮದುವೆಯೊಂದು ಎಂಜಾಯ್ ಮಾಡಲು ಇರುವ ಒಂದು ಅಪರೂಪದ ಅವಕಾಶ, ಇದನ್ನು ಯಾರೂ ಮಿಸ್ ಮಾಡುವುದಿಲ್ಲ. ಆದರೆ ಇಂತಹ ಮದುವೆಗಳಲ್ಲೇ ಕೆಲವೊಮ್ಮ ಆಘಾತಕಾರಿ ಘಟನೆಗಳು ನಡೆಯುತ್ತವೆ. ಇದರಿಂದ ಕೆಲವೊಮ್ಮ ಮದುವೆಯೇ ಮುರಿದು ಬೀಳುವವರೆಗೂ ಹೋಗುತ್ತವೆ. ಅದೇ ರೀತಿ ಇಲ್ಲೊಂದು ಕಡೆ ವಧು ವರರು ಪರಸ್ಪರ ಮದುವೆ ಮಂಟಪದಲ್ಲೇ ರಸ್ಲಿಂಗ್ ತರ ಒಬ್ಬರ ಮೇಲೆ ಒಬ್ಬರು ಬಿದ್ದು ಹೊಡೆದಾಡಿಕೊಂಡಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಎಲ್ಲರಿಗೂ ಮದುವೆ ತಮ್ಮ ಬದುಕಿನ ಸುಂದರ ಕ್ಷಣ ಆಗಿರಲು ಸಾಧ್ಯವಿಲ್ಲ. ಬಹುತೇಕರು ಮದುವೆಯನ್ನು ಸ್ವಾತಂತ್ರ್ಯವನ್ನು ಕಳೆದುಕೊಳ್ಳುವ ದಿನ ಎಂದು ಭಾವಿಸಿದರೆ ಮತ್ತೆ ಕೆಲವರು ಹೊಸ ಬದುಕಿಗೆ ಅಡಿ ಇಡುವ ಕ್ಷಣ ಎಂದು ಸಂತಸದಿಂದಲೇ ತಮ್ಮ ಮದುವೆಯ ಸಿದ್ಧತೆಯಲ್ಲಿ ತೊಡಗುತ್ತಾರೆ. ಇನ್ನು ಮದುವೆಯ ಸಂಪ್ರದಾಯಗಳು ಊರಿಂದ ಊರಿಗೆ ರಾಜ್ಯದಿಂದ ರಾಜ್ಯಕ್ಕೆ ಪ್ರದೇಶಗಳಿಂದ ಪ್ರದೇಶಕ್ಕೆ ಒಂದು ಸಮುದಾಯದಿಂದ ಮತ್ತೊಂದು ಸಮುದಾಯಕ್ಕೆ ವಿಭಿನ್ನವಾಗಿರುತ್ತವೆ. ದಕ್ಷಿಣ ಭಾರತದ ಮದುವೆಗಳು ಒಂದು ರೀತಿ ಇದ್ದರೆ, ಉತ್ತರ ಭಾರತದ ಮದುವೆಗಳ ಶೈಲಿಯೇ ಬೇರೆ ಈಶಾನ್ಯ ಭಾರತದ ಮದುವೆ ಇನ್ನೂ ವಿಭಿನ್ನ, ಹಾಗೆಯೇ ಪಶ್ಚಿಮ ಬಂಗಾಳ, ಅಸ್ಸಾಂ ಕಡೆಯೂ ಮದುವೆಯ ರೀತಿ ವಿಭಿನ್ನ ಹಾಗೂ ವೈವಿಧ್ಯಪೂರ್ಣವಾಗಿರುತ್ತವೆ. ಕೆಲವು ಸಂಪ್ರದಾಯಗಳಂತೂ ಸಂಪೂರ್ಣ ತದ್ವಿರುದ್ಧವಾಗಿರುತ್ತವೆ. ಹಾಗೆಯೇ ನಾವಿಲ್ಲಿ ತೋರಿಸುತ್ತಿರುವ ವಿಡಿಯೋ ನೆರೆಯ ರಾಷ್ಟ್ರ ನೇಪಾಳದ್ದಾಗಿದೆ.
ಈ ವಿಡಿಯೋ ಈಗ ಇಂಟರ್‌ನೆಟ್‌ನಲ್ಲಿ ಬಿರುಗಾಳಿ ಎಬ್ಬಿಸಿದೆ. ವಿಡಿಯೋದಲ್ಲಿ ಕಾಣಿಸುವಂತೆ ವಧು ಹಾಗೂ ವರ ಮದುವೆ ಮಂಟಪದಲ್ಲಿ ಕುಳಿತುಕೊಂಡಿದ್ದು, ಮದುವೆ ಸಂಪ್ರದಾಯದ ಭಾಗವಾಗಿರುವ ಆಟದಲ್ಲಿ ತೊಡಗಿದ್ದಾರೆ. ಈ ಆಟದಲ್ಲಿ ತಾನು ಗೆಲ್ಲಬೇಕು ಎಂದು ವಧು ಹಾಗೂ ತಾನೇ ಗೆಲ್ಲಬೇಕು ಎಂದು ವರ ಇಬ್ಬರೂ ಪರಸ್ಪರ ಆಕ್ರಮಣಕಾರಿಯಾಗಿ ಆಟವಾಡುತ್ತಿದ್ದಾರೆ ಎಂದರೆ ನೋಡುಗರಿಗೆ ಇವರೇನೋ ಮುಂದೆ ಮದುವೆಯಾಗಿ ಒಟ್ಟಿಗೆ ಬಾಳುತ್ತಾರೋ ಇಲ್ಲವೋ ಎಂದು ಸಂಶಯ ಮೂಡುವಷ್ಟು ರೋಷವೇಷದಿಂದ ಹೊಡೆದಾಡುತ್ತಿದ್ದಾರೆ. ಇವರು ಪರಸ್ಪರ ಗೆಲ್ಲಲು ಹೀಗೆ ಹೊಡೆದಾಡುತ್ತಿರುವುದನ್ನು ನೋಡಿದ ಅಲ್ಲೇ ಇದ್ದ ಹಿರಿಯ ಮಹಿಳೆಯೊಬ್ಬರು ಇವರಿಬ್ಬರ ಹೊಡೆದಾಟವನ್ನು ಬಿಡಿಸಲು ನೋಡುತ್ತಾರೆ. ಆದರೆ ಗೆಲ್ಲಬೇಕೆಂಬ ಛಲದಲ್ಲಿರುವ ಇಬ್ಬರೂ ನೆಲಕ್ಕೆ ಬಿದ್ದರೂ ಹೊಡೆದಾಡಿಕೊಳ್ಳುವುದನ್ನು ಮಾತ್ರ ಬಿಡುತ್ತಿಲ್ಲ.
Wedding Preparation: ಮಾಡೋ ಕೆಲಸ ಬಿಟ್ಟು ಈ ವಿಷ್ಯಕ್ಕೆ ಜಗಳ ಆಡ್ಕೊಂಡು ಕೂತಿದೆ ಈ ಜೋಡಿ
ಈ ವಿಡಿಯೋ ನೋಡಿದ ಅನೇಕರು ಇದೇನಾಗುತ್ತಿದೆ ಎಂದು ಅಚ್ಚರಿಯಿಂದ ಕೇಳುತ್ತಿದ್ದಾರೆ. ಇದು ಭೂಮಿ ಮೇಲೆ ನಡೆಯುತ್ತಿದೆಯೇ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಇದು ಸ್ಪರ್ಧೆ ಎನ್ನುವುದಕ್ಕಿಂತ ಇದೊಂದು ವಧು ಹಾಗೂ ವರನ ನಡುವೆ ನಡೆಯುವ ಸಂಪ್ರದಾಯ ಯಾರು ಯಾರಿಗೆ ಮೊದಲು ವೇಗವಾಗಿ ತಿನ್ನಿಸುತ್ತಾರೆ ಎಂಬುದು ಸ್ಪರ್ಧೆಯ ವಿಚಾರ. ಆದರೆ ಈ ಜೋಡಿ ಆ ಸಂಪ್ರದಾಯವನ್ನು ಒಂದು ಹಂತ ಮುಂದಕ್ಕೆ ಕೊಂಡೊಯ್ದಿದ್ದಾರೆ ಎಂದು ವಿವರಿಸಿದ್ದಾರೆ. ಮತ್ತೊಬ್ಬರು ಜೀವನಪೂರ್ತಿ ಬದ್ಧತೆಗೆ ಕಟಿಬದ್ಧವಾಗಿರುವುದು ಎಂದರೆ ಇದು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಈ ಜೋಡಿ ಕನಿಷ್ಠ ಎಲ್ಲರೂ ಹೊರಟು ಹೋಗುವವರೆಗೆ ಕಾಯಬೇಕಿತ್ತು ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.
ಊ ಅಂಟಾವಾ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ನವಜೋಡಿ...