Asianet Suvarna News Asianet Suvarna News

ಪಾರ್ಟಿ ಮಾಡಿದ್ದ ಪ್ರಧಾನಿಗೆ ದಂಡ. ತಮ್ಮ ಮೇಲೆ ತನಿಖೆ ಮಾಡಿ ಎಂದ ಇನ್ಫಿ ಮೂರ್ತಿ ಅಳಿಯ!

* ಲಾಕ್ಡೌನ್‌ ಸಮಯದಲ್ಲಿ ಕೋವಿಡ್‌ ನಿಯಮ ಮೀರಿದ್ದ ಪ್ರಧಾನಿ

* ಬೋರಿಸ್‌ ಜಾನ್ಸನ್‌ ತಲೆದಂಡ ಇಲ್ಲ, ದಂಡ!

* ಪಾರ್ಟಿಗೇಟ್‌ ಹಗರಣದಲ್ಲಿ ರಿಷಿ ಸುನಾಕ್‌ಗೂ ದಂಡ

Fined by police Boris Johnson and Rishi Sunak apologise for partygate pod
Author
Bangalore, First Published Apr 13, 2022, 8:57 AM IST | Last Updated Apr 13, 2022, 4:49 PM IST

ಲಂಡನ್‌(ಏ.13): ಕೋವಿಡ್‌ ಲಾಕ್ಡೌನ್‌ ಸಮಯದಲ್ಲಿ ಹುಟ್ಟುಹಬ್ಬದ ಪಾರ್ಟಿ ಮಾಡುವ ಮೂಲಕ ನಿಯಮಗಳನ್ನು ಮುರಿದಿದ್ದ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಮತ್ತು ಇಸ್ಫೋಸಿಸ್‌ ಮುಖ್ಯಸ್ಥ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಾಕ್‌ ಅವರಿಗೆ ಬ್ರಿಟನ್‌ ಪೊಲೀಸರು ದಂಡ ವಿಧಿಸಿದ್ದಾರೆ.

ಲಾಕ್ಡೌನ್‌ ನಿಯಮಗಳನ್ನು ಮುರಿದಿದ್ದರಿಂದ ಜಾನ್ಸನ್‌ ಅವರು ರಾಜೀನಾಮೆ ನೀಡಬೇಕಾಗಬಹುದು ಎಂದು ಹೇಳಲಾಗುತ್ತಿತ್ತು. ಆದರೆ ಪೊಲೀಸರು ಕೇವಲ ದಂಡ ವಿಧಿಸುವ ಮೂಲಕ ಈ ಪ್ರಕರಣಕ್ಕೆ ಅಂತ್ಯ ಹಾಡಿದ್ದಾರೆ.

ಬ್ರಿಟನ್ ರಾಣಿಗಿಂತಲೂ ಶ್ರೀಮಂತೆ ಇನ್ಫಿ ಮೂರ್ತಿ ಮಗಳು, ಇಲ್ಲಿದೆ ಅವರ ಆಸ್ತಿ ವಿವರ!

ಕೋವಿಡ್‌ ಸಾಂಕ್ರಾಮಿಕದ ಸಮಯದಲ್ಲಿ ಬ್ರಿಟನ್‌ನಾದ್ಯಂತ ಕಠಿಣ ಲಾಕ್ಡೌನ್‌ ವಿಧಿಸಲಾಗಿತ್ತು. ಜನ ಗುಂಪು ಸೇರುವುದನ್ನು ನಿರ್ಬಂಧಿಸಲಾಗಿತ್ತು. ಆದರೆ ಜಾನ್ಸನ್‌ ಅವರ ಹುಟ್ಟುಹಬ್ಬದ ಪ್ರಯುಕ್ತ ಸುಮಾರು 50ಕ್ಕೂ ಹೆಚ್ಚು ಜನರು ಪ್ರಧಾನಿ ಅಧಿಕೃತ ನಿವಾಸದಲ್ಲಿ ಪಾರ್ಟಿ ಮಾಡಿದ್ದರು. ಈ ವಿಷಯ ಬಹಿರಂಗವಾಗುತ್ತಿದ್ದಂತೆ ಪ್ರಧಾನಿ ರಾಜೀನಾಮೆಗೆ ವಿಪಕ್ಷಗಳು ಒತ್ತಾಯಿಸಿದ್ದವು. ತನಿಖೆ ಆರಂಭಿಸಿ 100ಕ್ಕೂ ಹೆಚ್ಚು ಜನರನ್ನು ವಿಚಾರಣೆ ನಡೆಸಿದ ಪೊಲೀಸರು, ಪಾರ್ಟಿಯಲ್ಲಿ ಭಾಗಿಯಾಗಿದ್ದ ಎಲ್ಲರಿಗೂ ದಂಡ ವಿಧಿಸಿದ್ದಾರೆ.

ಅಕ್ಷತಾ ಮೂರ್ತಿ ತೆರಿಗೆ ವಿನಾಯಿತಿ ವಿವಾದ: ಸ್ವತಂತ್ರ ತನಿಖೆ ನಡೆಸಲು ಪತಿ ರಿಷಿ ಆಗ್ರಹ

 

ತಮ್ಮ ಪತ್ನಿ ಅಕ್ಷತಾ ಮೂರ್ತಿ ಅವರ ತೆರಿಗೆ ವ್ಯವಹಾರಗಳು ಬ್ರಿಟನ್‌ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿರುವ ಹಿನ್ನೆಲೆಯಲ್ಲಿ ಪ್ರಧಾನಿ ಬೋರಿಸ್‌ ಜಾನ್ಸನ್‌ (Boris Johnson) ಅವರಿಗೆ ಇಸ್ಫೋಸಿಸ್‌ ಕಂಪನಿಯ ಸಂಸ್ಥಾಪಕ ನಾರಾಯಣಮೂರ್ತಿ (Narayana Moorthy) ಅವರ ಅಳಿಯ ರಿಷಿ ಸುನಾಕ್‌ ಪತ್ರ ಬರೆದಿದ್ದಾರೆ. ಸಚಿವರಾಗಿ ತಾವು ಮಾಡಿರುವ 'ಹಿತಾಸಕ್ತಿ ಘೋಷಣೆ'ಗಳನ್ನು ಸ್ವತಂತ್ರ ಪರಿಶೀಲನೆಗೆ ಒಳಪಡಿಸುವಂತೆ ಬ್ರಿಟನ್‌ನ ಹಣಕಾಸು ಸಚಿವರೂ ಆಗಿರುವ ಅವರು ಆಗ್ರಹಪಡಿಸಿದ್ದಾರೆ.

ಬ್ರಿಟನ್‌ ಸಂಸತ್ತಿನ ಮೇಲ್ಮನೆಯಾಗಿರುವ ಹೌಸ್‌ ಆಫ್‌ ಲಾರ್ಡ್ಸ್‌ (House of Lord) ಸದಸ್ಯ ಕ್ರಿಸ್ಟೋಫರ್‌ ಗೈಟ್‌ (Christopher Gait)ಅವರಿಂದ ತಾವು ಸಚಿವರಾಗಿ ಘೋಷಣೆ ಮಾಡಿರುವ ಹಿತಾಸಕ್ತಿಗಳನ್ನು ವಿಶ್ಲೇಷಣೆಗೆ ಒಳಪಡಿಸಬೇಕು. ಗೈಟ್‌ ಅವರು ತಮ್ಮ ಪರಿಶೀಲನೆಯ ಫಲಿತಾಂಶವನ್ನು ಸಾರ್ವಜನಿಕವಾಗಿ ಹೇಳಬೇಕು. ಹೀಗಾದಲ್ಲಿ ನಾನು ಮಾಡಿರುವ ಘೋಷಣೆಗಳು ಸರಿಯಾಗಿವೆ ಎಂಬುದು ಜನತೆಗೂ ಗೊತ್ತಾಗುತ್ತದೆ ಎಂದು ಅವರು ಮನವಿ ಮಾಡಿದ್ದಾರೆ.

ಅಕ್ಷತಾ ಮೂರ್ತಿ ತೆರಿಗೆ ಸ್ಥಾನಮಾನ ಸೋರಿಕೆ: ತನಿಖೆಗೆ ಬ್ರಿಟನ್‌ ಆದೇಶ

‘ಸಚಿವನಾದಾಗಿನಿಂದಲೂ ಆಸ್ತಿ ಹಾಗೂ ಘೋಷಣೆಗೆ ಸಂಬಂಧಿಸಿದಂತೆ ಅಧಿಕಾರಿಗಳು ನೀಡಿರುವ ಸಲಹೆಯನ್ನು ಪಾಲಿಸಿಕೊಂಡು ಬಂದಿದ್ದೇನೆ. ಅದನ್ನು ಮುಂದುವರಿಸುತ್ತೇನೆ ಎಂದು ಹೇಳಿದ್ದಾರೆ. ರಿಷಿ ಸುನಾಕ್‌ ಆಗ್ರಹದ ಹಿನ್ನೆಲೆಯಲ್ಲಿ ಬೋರಿಸ್‌ ಜಾನ್ಸನ್‌ ಅವರು ಗೈಟ್‌ ಅವರಿಗೆ ವಿಚಾರಣೆ ನಡೆಸಲು ಸೂಚಿಸುವ ನಿರೀಕ್ಷೆ ಇದೆ. ಈ ಪ್ರಕ್ರಿಯೆ ಮುಗಿಯಲು ಹಲವು ತಿಂಗಳುಗಳು ಬೇಕಾಗುತ್ತವೆ ಎಂದು ಹೇಳಲಾಗಿದೆ.

ಬ್ರಿಟನ್‌ ಹಾಗೂ 15 ಕಾಮನ್‌ವೆಲ್ತ್‌ ರಾಷ್ಟ್ರಗಳಿಗೆ ರಾಣಿಯಾಗಿರುವ ಕ್ವೀನ್‌ ಎಲಿಜಬೆತ್‌ ಅವರಿಗಿಂತ ಬೆಂಗಳೂರಿನ ಇಸ್ಫೋಸಿಸ್‌ ಕಂಪನಿ ಸಂಸ್ಥಾಪಕ ಎನ್‌.ಆರ್‌. ನಾರಾಯಣಮೂರ್ತಿ ಅವರ ಪುತ್ರಿ, ಬ್ರಿಟನ್‌ನ ಹಣಕಾಸು ಸಚಿವ ರಿಶಿ ಸುನಾಕ್‌ ಅವರ ಪತ್ನಿ ಅಕ್ಷತಾ ಮೂರ್ತಿ ಅವರು ಅಧಿಕ ಆಸ್ತಿ ಹೊಂದಿರುವ ಸಂಗತಿ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಆದರೆ ಪತ್ನಿಯ ಹೆಸರಿನಲ್ಲಿರುವ ಆಸ್ತಿಯನ್ನು ಘೋಷಣೆ ಮಾಡಿಕೊಳ್ಳದ ಕಾರಣ ರಿಶಿ ಸುನಾಕ್‌ ಅವರು ಬ್ರಿಟನ್‌ನಲ್ಲಿ ವಿವಾದಕ್ಕೆ ಸಿಲುಕಿದ್ದಾರೆ.

Latest Videos
Follow Us:
Download App:
  • android
  • ios