ವಾಷಿಂಗ್ಟನ್(ಜೂ.15)‌: ಪೊಲೀಸರ ದೌರ್ಜನ್ಯಕ್ಕೆ ಜಾಜ್‌ರ್‍ ಫ್ಲಾಯ್ಡ್‌ ಬಲಿಯಾದ್ದನ್ನು ವಿರೋಧಿಸಿ ಅಮೆರಿಕದಾದ್ಯಂತ ಜನಾಂಗೀಯ ವಿರುದ್ಧದ ಹೋರಾಟವಾಗಿ ರೂಪುಗೊಂಡಿರುವ ಬೆನ್ನಲ್ಲೇ, ಪೊಲೀಸರ ಗುಂಡಿಗೆ ಮತ್ತೋರ್ವ ಕಪ್ಪು ವರ್ಣೀಯ ವ್ಯಕ್ತಿ ಬಲಿಯಾಗಿದ್ದಾನೆ. ಮೃತ ವ್ಯಕ್ತಿಯನ್ನು 4 ಮಕ್ಕಳ ತಂದೆ ರಾಯ್‌ಶಾರ್ಡ್‌ ಬ್ರೂಕ್ಸ್‌ ಎಂದು ಎಂದು ಗುರುತಿಸಲಾಗಿದೆ. ಘಟನೆ ಬೆನ್ನಲ್ಲೇ ಅಟ್ಲಾಂಟಾದಲ್ಲಿ ಸಣ್ಣಮಟ್ಟದಲ್ಲಿ ಹಿಂಸಾಚಾರ ಆರಂಭವಾಗಿದೆ.

ವ್ಯಕ್ತಿ ಕುತ್ತಿಗೆಯನ್ನು ಮಂಡಿಯಿಂದ ಅದುಮಿದ ಪೊಲೀಸ್ ಪೇದೆ!

ಶುಕ್ರವಾರ(ಅಮೆರಿಕ ಕಾಲಮಾನ) ತನ್ನ 8 ವರ್ಷದ ಮಗಳ ಹುಟ್ಟಹಬ್ಬ ಆಚರಿಸಿದ್ದ ಬ್ರೂಕ್ಸ್‌ ಪ್ರಸಿದ್ಧ ವೆಂಡಿ ರೆಸ್ಟೋರೆಂಟ್‌ಗೆ ಬಂದಿದ್ದ. ಆದರೆ, ಈ ವೇಳೆ ರೆಸ್ಟೋರೆಂಟ್‌ ಮುಂಭಾಗದಲ್ಲೇ ಕಾರಿನಲ್ಲಿ ನಿದ್ರೆಗೆ ಜಾರಿದ್ದ. ಈ ಸಂಬಂಧ ದೂರು ಪಡೆದು ವಿಚಾರಣೆಗಾಗಿ ಸ್ಥಳಕ್ಕೆ ಬಂದ ಪೊಲೀಸರು ಮತ್ತು ಬ್ರೂಕ್ಸ್‌ ಜೊತೆ ತಳ್ಳಾಟ ಮತ್ತು ನೂಕಾಟ ನಡೆದಿದೆ. ಕೊನೆಗೆ, ಪೊಲೀಸರ ಬಂದೂಕು ಕಸಿದು ಓಡಿ ಹೋಗಲು ಯತ್ನಿಸಿದ್ದು, ಈ ವೇಳೆ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಬ್ರೂಕ್ಸ್‌ ಮಡಿದಿದ್ದಾನೆ. ಬ್ರೂಕ್ಸ್‌ ಪೊಲೀಸರಿಂದ ಹತ್ಯೆಗೀಡಾಗಿದ್ದಾನೆ ಎಂಬ ವಿಚಾರ ಹಬ್ಬುತ್ತಿದ್ದಂತೆ ನಾನಾ ಭಾಗಗಳಿಂದ ಅಟ್ಲಾಂಟಾಕ್ಕೆ ದಾಳಿಯಿತ್ತ ಸಾವಿರಾರು ಮಂದಿ ಕಪ್ಪು ಜನಾಂಗೀಯರು ವೆಂಡಿ ರೆಸ್ಟೋರೆಂಟ್‌ಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಅಮೆರಿಕದಲ್ಲಿ ನಡೆಯುತ್ತಿರುವ ಕಪ್ಪು ವರ್ಣೀಯರ ಜನಾಂಗೀಯ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದೆ.

ಜನಾಂಗೀಯ ಸಮಾನತೆಗೆ ಪಣತೊಟ್ಟ ಬಾಸ್ಕೆಟ್ ಬಾಲ್ ಪಟು ಜೋರ್ಡನ್; $100 ಮಿಲಿಯನ್ ಹಣ ದೇಣಿಗೆ!

ಈ ಘಟನೆ ಬೆನ್ನಲ್ಲೇ, ಗುಂಡಿನ ದಾಳಿ ನಡೆಸಿ ವ್ಯಕ್ತಿಯ ಸಾವಿಗೆ ಕಾರಣನಾದ ಪೊಲೀಸ್‌ ಮುಖ್ಯಸ್ಥೆ ಎರಿಕಾ ಶೀಲ್ಡ್‌$್ಸ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಮತ್ತೊಂದೆಡೆ, ಮತ್ತೋರ್ವ ಕಪ್ಪು ಜನಾಂಗದ ವ್ಯಕ್ತಿಯ ಶವವು ನಿಗೂಢ ರೀತಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅಮೆರಿಕದಲ್ಲಿ ನಡೆಯುತ್ತಿರುವ ಜನಾಂಗೀಯ ಹೋರಾಟಗಳು ಮತ್ತಷ್ಟುತೀವ್ರತೆ ಪಡೆಯುವ ಸಾಧ್ಯತೆ ದಟ್ಟವಾಗಿದೆ.