Asianet Suvarna News Asianet Suvarna News

ವ್ಯಕ್ತಿ ಕುತ್ತಿಗೆಯನ್ನು ಮಂಡಿಯಿಂದ ಅದುಮಿದ ಪೊಲೀಸ್ ಪೇದೆ!

ರಾಜಸ್ಥಾನದಲ್ಲೂ ಫ್ಲೋಯ್ಡ್‌ ರೀತಿ ಹಿಂಸೆ|  ವ್ಯಕ್ತಿ ಕುತ್ತಿಗೆಯನ್ನು ಮಂಡಿಯಿಂದ ಅದುಮಿದ ಪೇದೆ| ವ್ಯಾಪಕ ಆಕ್ರೋಶ

Police does a near repeat of George Floyd case Pins man down with knee on neck Vishnu Vasisht
Author
Bangalore, First Published Jun 6, 2020, 8:41 AM IST

ಜೈಪುರ(ಜೂ.06): ಜಾರ್ಜ್ ಫ್ಲೋಯ್ಡ್‌ ಎಂಬ ಕಪ್ಪು ವರ್ಣೀಯ ವ್ಯಕ್ತಿಯ ಕುತ್ತಿಗೆ ಮೇಲೆ ಅಮೆರಿಕದ ಬಿಳಿಯ ಪೊಲೀಸ್‌ ಅಧಿಕಾರಿಯೊಬ್ಬ ಮಂಡಿ ಇಟ್ಟು ಅದುಮಿದ, ಆ ಬಳಿಕ ಫ್ಲೋಯ್ಡ್‌ ಸಾವಿಗೀಡಾದ ಘಟನೆ ವ್ಯಾಪಕ ಹಿಂಸಾಚಾರಕ್ಕೆ ಕಾರಣವಾದ ಬೆನ್ನಲ್ಲೇ, ಅದನ್ನು ಹೋಲುವಂತಹ ಘಟನೆ ರಾಜಸ್ಥಾನದ ಜೋಧಪುರದಲ್ಲಿ ನಡೆದಿದೆ.

ಮಾಸ್ಕ್‌ ಧರಿಸದೆ ಓಡಾಡುತ್ತಿದ್ದ ಎಂಬ ಕಾರಣಕ್ಕೆ ಮುಕೇಶ್‌ ಕುಮಾರ್‌ (40) ಎಂಬ ವ್ಯಕ್ತಿಗೆ ಪೊಲೀಸರು ಗುರುವಾರ ಸಂಜೆ ದಂಡ ವಿಧಿಸಿದ್ದಾರೆ. ಸಿಟ್ಟಾದ ಆತ ಪೊಲೀಸರ ಮೇಲೆಯೇ ಹಲ್ಲೆ ಮಾಡಿ ಮೊಬೈಲ್‌ ಕಸಿದುಕೊಂಡಿದ್ದಾನೆ. ಈ ವೇಳೆ ಪೊಲೀಸ್‌ ಪೇದೆಗಳಿಬ್ಬರು ಮುಕೇಶ್‌ ಜತೆ ಕಿತ್ತಾಟಕ್ಕಿಳಿಯುತ್ತಾರೆ. ಕೆಳಕ್ಕೆ ಬೀಳಿಸಿ ಕುತ್ತಿಗೆ ಮೇಲೆ ಪೇದೆಯೊಬ್ಬ ಮಂಡಿ ಅದುಮುತ್ತಾನೆ. ಬಳಿಕ ಮುಕೇಶ್‌ನನ್ನು ಬಂಧಿಸುತ್ತಾನೆ. ಈ ವಿಡಿಯೋ ವೈರಲ್‌ ಆಗಿದೆ. ಅದೃಷ್ಟವಶಾತ್‌ ಮುಕೇಶ್‌ಗೆ ಪ್ರಾಣಾಪಾಯವಾಗಿಲ್ಲ.

Police does a near repeat of George Floyd case Pins man down with knee on neck Vishnu Vasisht

ಆದರೆ ಪೊಲೀಸ್‌ ಪೇದೆ ಮಂಡಿಯಿಂದ ಕುತ್ತಿಗೆ ಅದುಮಿದ್ದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಮುಕೇಶ್‌ನನ್ನು ಬಂಧಿಸಲಾಗಿದೆ. ಅದೇ ರೀತಿ ಪೇದೆ ವಿರುದ್ಧವೂ ಕ್ರಮ ಜರುಗಿಸಬೇಕು ಎಂದು ಜಾಲತಾಣಗಳಲ್ಲಿ ವ್ಯಾಪಕ ಬೇಡಿಕೆ ವ್ಯಕ್ತವಾಗಿದೆ. ಅದು ಆ ಕ್ಷಣಕ್ಕೆ ನಡೆದ ಘಟನೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

Follow Us:
Download App:
  • android
  • ios