ನವದೆಹಲಿ(ಮಾ.06): ಅಮೆರಿಕದ ಪ್ರತಿಷ್ಠಿತ ಟೈಮ್‌ ನಿಯತಕಾಲಿಕೆಯು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಈ ಬಾರಿಯ ತನ್ನ ಮುಖಪುಟ ಲೇಖನವನ್ನು ಭಾರತದ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟದಲ್ಲಿ ಭಾಗಿಯಾಗಿರುವ ಮಹಿಳೆಯರಿಗೆ ಮೀಸಲಿಟ್ಟಿದೆ.

ಭಾರತದಲ್ಲಿ ನಡೆಯುತ್ತಿರುವ ಕೃಷಿ ಕಾಯ್ದೆ ವಿರೋಧಿ ರೈತ ಹೋರಾಟದ ಮುಂದಾಳತ್ವ ವಹಿಸಿರುವ ಕೆಲ ಮಹಿಳಾ ನಾಯಕಿಯರ ಕುರಿತ ಲೇಖನ ಮತ್ತು ಫೋಟೋವನ್ನು ಮುಖಪುಟದಲ್ಲಿ ಪ್ರಕಟಿಸಲಾಗಿದೆ. ಮುಖಪುಟವು ‘ಬೆದರಿಸಲೂ ಸಾಧ್ಯವಿಲ್ಲ, ಕೊಂಡುಕೊಳ್ಳಲೂ ಸಾಧ್ಯವಿಲ್ಲ’ ಶೀರ್ಷಿಕೆ ಮತ್ತು ಟೆಕ್ರಿ ಗಡಿಯಲ್ಲಿ ಪ್ರತಿಭಟಿಸುತ್ತಿರುವ ಸುಮಾರು 20 ಮಹಿಳೆಯ ಫೋಟೋ ಒಳಗೊಂಡಿದೆ.

ಲೇಖನದಲ್ಲಿ ಕಳೆದ ನವೆಂಬರ್‌ನಿಂದಲೂ ದೆಹಲಿಯ ಗಡಿಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ರೈತರು ಒಗ್ಗೂಡಿ ಹೇಗೆ ಪ್ರತಿಭಟಿಸುತ್ತಿದ್ದಾರೆ, ಕಳೆದ ಜನವರಿಯಲ್ಲಿ ಏನಾಯಿತು ಮತ್ತಿತರ ಅಂಶಗಳ ಬಗ್ಗೆ ವಿವರಿಸಲಾಗಿದೆ.