Asianet Suvarna News Asianet Suvarna News

ಕಜಕಿಸ್ತಾನದಲ್ಲಿ ಕೊರೋನಾಗಿಂತ ಗಂಭೀರ ಸೋಂಕು ಪತ್ತೆ: ಚೀನಾ

ಕಜಕಿಸ್ತಾನದಲ್ಲಿ ಕೊರೋನಾಗಿಂತ ಗಂಭೀರ ಸೋಂಕು ಪತ್ತೆ: ಚೀನಾ| ಇದು ಸುಳ್ಳು: ಕಜಕಿಸ್ತಾನ ಸರ್ಕಾರ ಸ್ಪಷ್ಟನೆ

Fake News Kazakhstan After China Warns Of Pneumonia Worse Than Coronavirus
Author
Bangalore, First Published Jul 11, 2020, 8:48 AM IST

ಬೀಜಿಂಗ್‌(ಜು.11): ನೆರೆಯ ಕಜಕಿಸ್ತಾನದಲ್ಲಿ ಕೊರೋನಾಗಿಂತಲೂ ಭೀಕರ ರೀತಿಯ ನಿಗೂಢ ನ್ಯುಮೋನಿಯಾ ಕಾಣಿಸಿಕೊಂಡಿದ್ದು ಈ ಬಗ್ಗೆ ಎಚ್ಚರದಿಂದ ಇರುವಂತೆ ಆ ದೇಶದಲ್ಲಿರುವ ಮತ್ತು ಆ ರಾಷ್ಟ್ರದೊಂದಿಗೆ ಗಡಿ ಹಂಚಿಕೊಂಡಿರುವ ತನ್ನ ದೇಶದ ನಾಗರಿಕರಿಗೆ ಚೀನಾ ಸರ್ಕಾರ ಎಚ್ಚರಿಕೆ ನೀಡಿದೆ. ಆದರೆ ಕಜಕಿಸ್ತಾನ ಸರ್ಕಾರ ಮಾತ್ರ ಇದೊಂದು ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡಿದೆ.

ಮುಸ್ಲಿಮರ ಸಂತಾನ ಹರಣ: ಚೀನಾಗೆ ಅಮೆರಿಕ ಸಡ್ಡು!

ಗುರುವಾರ ಹೇಳಿಕೆ ಬಿಡುಗಡೆ ಮಾಡಿರುವ ಕಜಕಿಸ್ತಾನದಲ್ಲಿನ ಚೀನಾದ ರಾಯಭಾರ ಕಚೇರಿ ‘ನ್ಯುಮೋನಿಯಾ ಸೋಂಕು ಕಳೆದ 6 ತಿಂಗಳಲ್ಲಿ ಕಜಕಿಸ್ತಾನದಲ್ಲಿ 1772 ಜನರನ್ನು ಬಲಿ ಪಡೆದಿದೆ. ಈ ಪೈಕಿ 628 ಜನ ಜೂನ್‌ ತಿಂಗಳೊಂದರಲ್ಲೇ ಸಾವನ್ನಪ್ಪಿದ್ದಾರೆ. ಸೋಂಕಿನಿಂದ ಬಲಿಯಾಗುವವರ ಪ್ರಮಾಣ ಕೊರೋನಾಕ್ಕಿಂತಲೂ ಹೆಚ್ಚಿದೆ. ಸಾವನ್ನಪ್ಪಿದವರಲ್ಲಿ ಚೀನಿ ಪ್ರಜೆಗಳು ಕೂಡಾ ಸೇರಿದ್ದಾರೆ. ಈ ಸೋಂಕಿನ ಕುರಿತು ಕಜಕಿಸ್ತಾನದ ಆರೋಗ್ಯ ಸಚಿವಾಲಯ ಅಧ್ಯಯನ ಆರಂಭಿಸಿದೆ. ಹೀಗಾಗಿ ಕಜಕಿಸ್ತಾನದಲ್ಲಿನ ಚೀನಿಯರು ಸೋಂಕು ತಗುಲದಂತೆ ಎಚ್ಚರಿಕೆ ವಹಿಸಬೇಕು. ಆ ದೇಶದೊಂದಿಗೆ ಗಡಿ ಹಂಚಿಕೊಂಡಿರುವ ಚೀನಾ ಗಡಿಭಾಗದ ಜನರೂ ಎಚ್ಚರಿಕೆ ವಹಿಸಬೇಕು’ ಎಂದು ಕರೆ ಕೊಟ್ಟಿದೆ.

ಆದರೆ ಈ ಸುದ್ದಿ ಭಾರೀ ಆತಂಕಕ್ಕೆ ಕಾರಣವಾಗುತ್ತಲೇ ಸ್ಪಷ್ಟನೆ ನೀಡಿರುವ ಕಜಕಿಸ್ತಾನದ ಆರೋಗ್ಯ ಸಚಿವಾಲಯ, ಚೀನಾ ಮಾಧ್ಯಮಗಳಲ್ಲಿ ಪ್ರಕಟವಾಗಿರುವುದು ಸುಳ್ಳು ಸುದ್ದಿ. ದೇಶದಲ್ಲಿ ಬ್ಯಾಕ್ಟೀರಿಯಾ, ಫಂಗಲ್‌ ಮತ್ತು ವೈರಲ್‌ ನ್ಯುಮೋನಿಯಾ ಸೋಂಕಿಗೆ ತುತ್ತಾದವರು ಮತ್ತು ಸಾವಿನ ಪ್ರಮಾಣ ವಿಶ್ವ ಆರೋಗ್ಯ ಸಂಸ್ಥೆ ಗೊತ್ತುಪಡಿಸಿದ ಮಾರ್ಗಸೂಚಿ ವ್ಯಾಪ್ತಿಯೊಳಗೇ ಇದೆ ಎಂದು ಸ್ಪಷ್ಟಪಡಿಸಿದೆ.

ವಿಶ್ವಸಂಸ್ಥೆಯಲ್ಲಿ ಭಾರತದಿಂದ ಮತ್ತೆ ಪಾಕ್‌ ಮಾನ ಹರಾಜು!

ಅಲ್ಲದೆ ತನ್ನ ಹೇಳಿಕೆಗೆ ಸ್ಥಳೀಯ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳನ್ನು ಆಧರಿಸಿರುವುದಾಗಿ ಹೇಳಿದೆ. ಈ ಹೇಳಿಕೆ ಆಧರಿಸಿ ಚೀನಾ ಸರ್ಕಾರದ ಮುಖವಾಣಿ ಪತ್ರಿಕೆ ಗ್ಲೋಬಲ್‌ ಟೈಮ್ಸ್‌ ಸುದ್ದಿಯನ್ನೂ ಪ್ರಕಟಿಸಿದೆ.

Follow Us:
Download App:
  • android
  • ios