ಮನೆಯಲ್ಲಿ ರಹಸ್ಯ ಶಾಲೆ ತೆರೆದ ಫೇಸ್‌ಬುಕ್ ಸಿಇಒ, ಸ್ಥಳೀಯರಿಂದ ದೂರಿನಿಂದ ಸ್ಕೂಲ್ ಬಂದ್, 30 ರಿಂದ 40 ವಿದ್ಯಾರ್ಥಿಗಳು ಈ ಶಾಲೆಗೆ ಸೇರಿಕೊಂಡಿದ್ದರು. ನಿಯಮ ಉಲ್ಲಂಘಿಸಿದ ಮಾರ್ಕ್ ಜುಕರ್‌ಬರ್ಗ್ ಹಾಗೂ ಮಾರ್ಕ್ ಪತ್ನಿ ವಿರುದ್ದ ದೂರು ದಾಖಲಾಗಿದೆ.
ಪಾಲೋ ಅಲ್ಟೋ (ನ.08) ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಹಾಗೂ ಜುಕರ್‌ಬರ್ಗ್ ಪತ್ನಿ ಪ್ರಸಿಲ್ಲಾ ಚಾನ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಕ್ರಮವಾಗಿ ಶಾಲೆ ತೆರೆದು, 30 ರಿಂದ 40 ವಿದ್ಯಾರ್ಥಿಗಳನ್ನು ಅಡ್ಮಿಷನ್ ಮಾಡಿಸಿಕೊಂಡು ನಿಯಮ ಉಲ್ಲಂಘಿಸಿದ ಗಂಭೀರ ಆರೋಪ ಕೇಳಿಬಂದಿದೆ. ಪರಿಣಾಮ ಈ ಶಾಲೆಯನ್ನೇ ಬಂದ್ ಮಾಡಲಾಗಿದೆ. ಜುಕರ್‌ಬರ್ಗ್ ಪಾಲೋ ಅಲ್ಟೋದಲ್ಲಿರುವ ಮನೆಯ ಒಳಗೆ ಈ ರಹಸ್ಯ ಶಾಲೆ ತೆರೆಯಲಾಗಿತ್ತು. 30 ರಿಂದ 40 ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತಿತ್ತು. ಆದರೆ ಈ ಅಕ್ರಮ ಶಾಲೆ ವಿರುದ್ದ ಸ್ಥಳೀಯರ ಸತತ ದೂರು ಹೋರಾಟ ಮಾಡಿದ ಪರಿಣಾಮ ಇದೀಗ ಶಾಲೆ ಬಂದ್ ಮಾಡಲಾಗಿದೆ.
ಬಿಕೆನ್ ಬೆನ್ ಸ್ಕೂಲ್ ಬಂದ್
ಮಾರ್ಕ್ ಜುಕರ್‌ಬರ್ಗ್ ಹಾಗೂ ಪತ್ನಿ ಇಬ್ಬರು ಸೇರಿ ಐಷಾರಾಮಿ ಮನೆ ಒಳಗೆ ಬಿಕೆನ್ ಬೆನ್ ಶಾಲೆ ಆರಂಭಿಸಿದ್ದರು. ಮಾಂಟೆಸರಿ ರೀತಿಯ ಶಾಲೆ ಇದಾಗಿತ್ತು. 30 ರಿಂದ 40 ವಿದ್ಯಾರ್ಥಿಗಳ ಅಡ್ಮಿಷನ್ ಕೂಡ ಮಾಡಿ ಪಾಠ ಮಾಡಲಾಗುತ್ತಿತ್ತು. ಅಮೆರಿಕದ ಪಾಲೋ ಅಲ್ಟೋದಲ್ಲಿರುವ ಜುಕರ್‌ಬರ್ಗ್ ನಿವಾಸದ ಬಳಿಕ ಪೋಷಕರು ತಮ್ಮ ಪುಟಾಣಿ ಮಕ್ಕಳನ್ನು ಶಾಲೆಗೆ ಬಿಡುವುದು, ಬಳಿಕ ಕರೆದುಕೊಂಡು ಹೋಗುತ್ತಿರುವುದು ಗಮನಿಸಿದ ಸ್ಥಳೀಯರು ಅಕ್ರಮವಾಗಿ ಶಾಲೆ ತೆರೆದಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. 2022ರಿಂದ ಈ ಶಾಲೆ ಆರಂಭಗೊಂಡಿದೆ. ರಹಸ್ಯವಾಗಿ ಶಾಲೆ ನಡೆಸಿಕೊಂಡು ಬರಲಾಗುತ್ತಿತ್ತು. ಸ್ಥಳೀಯರ ಗಂಭೀರ ಆರೋಪದ ನಡುವೆಯೂ ಶಾಲೆ ನಡೆದುಕೊಂಡು ಬಂದಿತ್ತು. ಹಲವು ನಿಯಮಗಳ ಉಲ್ಲಂಘನೆ ಆರೋಪವಿದ್ದರೂ ಶಾಲೆ ನಡೆಸಲಾಗಿತ್ತು. ಸ್ಥಳೀಯರ ಹೋರಾಟದ ಫಲವಾಗಿದೆ ಇದೀಗ ಶಾಲೆಯನ್ನು ಮಾರ್ಕ್ ಜುಕರ್‌ಬರ್ಗ್ ಬಂದ್ ಮಾಡಿದ್ದಾರೆ.
ಶಾಲೆಗೆ ಇರಲಿಲ್ಲ ಲೈಸೆನ್ಸ್
ಕ್ರೆಸೆಂಟ್ ಪಾರ್ಕ್ ನಿವಾಸಿಗಳು ಮಾರ್ಕ್ ಜುಕರ್‌ಬರ್ಗ್ ಶಾಲೆ ವಿರುದ್ದ ಹಲವು ಆರೋಪ ಮಾಡಿದ್ದರು. ಈ ಪೈಕಿ ಶಾಲೆಗೆ ಸೂಕ್ತ ಲೈಸೆನ್ಸ್ ಇಲ್ಲ ಅನ್ನೋದು ಪ್ರಮುಖ. ಕ್ರೆಸೆಂಟ್ ಪಾರ್ಕ್ ನಿವಾಸಿಗಳು ಶಾಲೆಯಿಂದ ಸಮಸ್ಯೆ ಅನುಭವಿಸಿದ್ದಾರೆ ಎಂದು ಆರೋಪಿಸಲಾಗಿದೆ. ಶಾಲೆಗಾಗಿ ಪ್ರತಿ ದಿನ ಕಟ್ಟಡ ನಿರ್ಮಾಣ, ಶಬ್ದ ಸೇರಿದಂತೆ ಹಲವು ಸಮಸ್ಯೆ ಎದುರಿಸಿದ್ದಾರೆ. ಯಾವುದೇ ಅನುಮತಿ ಇಲ್ಲದೆ ಶಾಲೆ ನಡೆಸುತ್ತಿದ್ದಾರೆ. ಈ ವಲಯದಲ್ಲಿ 11 ನಿಷೇಷನ ಹೊಂದಿರುವ ಮಾರ್ಕ್ ಜುಕರ್‌ಬರ್ಗ್ ಅತೀ ದೊಡ್ಡ ಕೌಂಪೌಂಡ್ ನಿರ್ಮಾಣ ಮಾಡಿದ್ದರು. ಈ ಪ್ರದೇಶದಲ್ಲಿ ಸುರಕ್ಷತಾ ಸಮಸ್ಯೆಗಳು ಎದುರಾಗುತ್ತಿದೆ. ಮಾರ್ಕ್ ಜುಕರ್‌ಬರ್ಗ್ ನಿಯಮ ಉಲ್ಲಂಘನೆ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕಳೆ ಕೆಲ ವರ್ಷಗಳಿಂದ ಹೋರಾಟ ಮಾಡುತ್ತಲೇ ಬಂದಿದ್ದರೆ.
ಸ್ಥಳೀಯ ಆಡಳಿತದಿಂದ ವಾರ್ನಿಂಗ್
ಮಾರ್ಕ್ ಜುಕರ್‌ಬರ್ಗ ಶಾಲೆ ವಿರುದ್ದ ಸತತ ದೂರು ಕೇಳಿಬರುತ್ತಿದ್ದ ಹಿನ್ನಲೆಯಲ್ಲಿ ಸ್ಥಳೀಯ ಆಡಳಿತ ಪರಿಶೀಲನೆ ನಡೆಸಿತ್ತು. ಈ ವೇಳೆ ಕೆಲ ನಿಯಮಗಳ ಉಲ್ಲಂಖನೆ ಸ್ಪಷ್ಟವಾಗಿತ್ತು. ಹೀಗಾಗಿ 2025ರ ಆರಂಭದಲ್ಲಿ ಶಾಲೆ ಬಂದ್ ಮಾಡುವಂತೆ ಸೂಚನೆ ನೀಡಿತ್ತು. ಇಲ್ಲದಿದ್ದರೆ, ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು. ಈ ಎಚ್ಚರಿಕೆಯಿಂದ ಇದೀಗ ಮಾರ್ಕ್ ಜುಕರ್‌ಬರ್ಗ್ ಶಾಲೆ ಬಂದ್ ಮಾಡಿದ್ದಾರೆ.
