Asianet Suvarna News Asianet Suvarna News

ಭಾರತದ ಮೇಲೆ ಕಣ್ಣಿಡಲು ಚೀನಾದಿಂದ ಉಪಗ್ರಹ ಚಿತ್ರ ಖರೀದಿಸಿದ ಪಾಕ್‌!

ಚೀನಾ, ಪಾಕ್‌ ಮಸಲತ್ತು| ಭಾರತದ ಮೇಲೆ ಕಣ್ಣಿಡಲು ಚೀನಾದಿಂದ ಉಪಗ್ರಹ ಚಿತ್ರ ಖರೀದಿಸಿದ ಪಾಕ್‌| ಗಡಿ ನಿಯಂತ್ರಣ ರೇಖೆಯಲ್ಲಿನ ಸೇನಾ ಕ್ಯಾಂಪ್‌ಗಳ ಮೇಲೆ ನಿಗಾಕ್ಕೆ ಯತ್ನ

Eye on Jammu Kashmir Pakistan buys China Jilin 1 satellite data
Author
Bangalore, First Published Sep 1, 2020, 8:16 AM IST

ನವದೆಹಲಿ(ಸೆ.01): ಭಾರತದ ವಿರುದ್ಧ ಒಟ್ಟಾಗಿ ಕತ್ತಿ ಮಸೆಯುತ್ತಿರುವ ಪಾಕಿಸ್ತಾನ ಹಾಗೂ ಚೀನಾ ಈಗ ಇಂಥದ್ದೇ ಒಂದು ಹೊಸ ಪ್ರಯೋಗಕ್ಕೆ ಮುಂದಾಗಿವೆ. ಚೀನಾದ ಜಿಲಿನ್‌-1 ಉಪಗ್ರಹದ ದತ್ತಾಂಶವನ್ನು ಪಾಕಿಸ್ತಾನ ಖರೀದಿಸಿದ್ದು, ಈ ಮೂಲಕ ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತದ ಸೇನಾ ಕ್ಯಾಂಪ್‌ಗಳು ಎಲ್ಲಿವೆ ಎಂಬುದನ್ನು ಗುರುತಿಸಲು ಮುಂದಾಗಿದೆ.

ಜಿಲಿನ್‌-1 ಉಪಗ್ರಹವು ಅತ್ಯಂತ ಸ್ಪಷ್ಟ(ಹೈ ಡೆಫಿನಿಶನ್‌) ವಿಡಿಯೋ ಹಾಗೂ ಚಿತ್ರಗಳನ್ನು ಸೆರೆ ಹಿಡಿಯುವ ಸಾಮರ್ಥ್ಯ ಹೊಂದಿದೆ. ಈ ಉಪಗ್ರಹದ ದತ್ತಾಂಶವನ್ನು 2020ನೇ ಸಾಲಿನಲ್ಲಿ ಖರೀದಿಸಲು ಚೀನಾ ಜತೆ ಪಾಕಿಸ್ತಾನ ಒಪ್ಪಂದ ಮಾಡಿಕೊಂಡಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.

ಜಿಲಿನ್‌ ಉಪಗ್ರಹ ಜಾಲದಲ್ಲಿ 10 ಉಪಗ್ರಹಗಳಿವೆ. ಇಡೀ ಜಗತ್ತಿನ ಮೇಲೆ ನಿಗಾ ಇಡುವ ಸಾಮರ್ಥ್ಯ ಈ ಉಪಗ್ರಹ ಜಾಲಕ್ಕಿದೆ. ಯಾವುದೇ ಸ್ಥಳ ಇರಲಿ ದಿನಕ್ಕೆ 2 ಬಾರಿ ಅದರ ಚಿತ್ರ ತೆಗೆಯುವ ಕ್ಷಮತೆಯನ್ನು ಅದು ಹೊಂದಿದೆ.

ಆದರೆ ‘ಭಾರತದ ಸೇನಾ ನೆಲೆಗಳ ಮೇಲೆ ಕಣ್ಣಿಡಲು ದತ್ತಾಂಶ ಖರೀದಿಸಲಾಗಿದೆ’ ಎಂಬ ಆರೋಪವನ್ನು ಪಾಕಿಸ್ತಾನ ನಿರಾಕರಿಸಿದೆ. ‘ಪಾಕಿಸ್ತಾನದಲ್ಲಿನ ಭೂ ಸಂಪತ್ತು, ದೇಶದಲ್ಲಿನ ನೈಸರ್ಗಿಕ ಪ್ರಕೋಪಗಳ ಪರಿಣಾಮ ವೀಕ್ಷಣೆ, ಕೃಷಿ ಸಂಶೋಧನೆ, ನಗರ ನಿರ್ಮಾಣ ಹಾಗೂ ಇತರ ಚಟುವಟಿಕೆಗಳಿಗಾಗಿ ಖರೀದಿಸಲಾಗಿದೆ’ ಎಂದು ಹೇಳಿಕೊಂಡಿದೆ.

Follow Us:
Download App:
  • android
  • ios