ಟ್ರಂಪ್ ಸರ್ಕಾರದ ಭಾಗವಾಗಿ, ಶ್ವೇತಭವನದ ಸಲಹೆಗಾರರಾಗಿದ್ದ ಎಲಾನ್ ಮಸ್ಕ್ ಇದೀಗ ಡೋನಾಲ್ಡ್ ಟ್ರಂಪ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಟ್ರಂಪ್ ತೆರಿಗೆ ಮಸೂದೆ ಸೇರಿದಂತೆ ಹಲವು ಬಿಲ್ ವಿರೋಧಿ ಇದೀಗ ಟ್ರಂಪ್ ಹಾಗೂ ಮಸ್ಕ್ ಸಂಬಂಧ ಹಳಸಿದೆ. ಇದರ ಪರಿಣಾಮ ಟೆಸ್ಲಾ ಷೇರುಗಳ ಮೇಲೆ ಹೊಡೆತ ಬಿದ್ದಿದೆ.
ನ್ಯೂಯಾರ್ಕ್(ಜೂ.06) ಅಮೆರಿಕ ಅಧ್ಯಕ್ಷ ಡೋನಾಲ್ಡ್ ಹಾಗೂ ಉದ್ಯಮಿ ಎಲಾನ್ ಮಸ್ಕ್ ನಡುವಿನ ಗುದ್ದಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಇಬ್ಬರು ಬಹಿರಂಗವಾಗಿ ವಿರುದ್ಧ ಹೇಳಿಕೆ ನೀಡಿದ್ದಾರೆ. ಇಷ್ಟೇ ಅಲ್ಲ ಆತ್ಮೀಯ ಸಂಬಂಧ ಮುಂದುವರಿಯುವುದಿಲ್ಲ ಎಂದು ಡೋನಾಲ್ಡ್ ಟ್ರಂಪ್ ಹೇಳಿದ್ದಾರೆ. ಟ್ರಂಪ್ ಸರ್ಕಾರದ ತೆರಿಗೆ ನೀತಿ ಸೇರಿದಂತೆ ಪ್ರಮುಖ ಬಿಲ್ ವಿರೋಧಿಸಿ ಹೇಳಿಕೆ ನೀಡಿರುವ ಎಲಾನ್ ಮಸ್ಕ್ ವಿರುದ್ದ ಟ್ರಂಪ್ ಸರ್ಕಾರ ತಿರುಗಿ ಬಿದ್ದಿದೆ.ಇವರಿಬ್ಬರ ಜಗಳ ಮಸ್ಕ್ ಅವರ ಟೆಸ್ಲಾ ಕಂಪನಿಗೆ ತೀವ್ರ ಹೊಡೆತ ನೀಡಿದೆ.
ಟೆಸ್ಲಾ ಷೇರು ಶೇಕಡಾ 14 ರಷ್ಟು ಕುಸಿತ
ಟ್ರಂಪ್ ತೆರಿಗೆ ನೀತಿ ನೇರವಾಗಿ ಎಲಾನ್ ಮಸ್ಕ್ ಟೆಸ್ಲಾ ಕಂಪನಿಯ ಎಲೆಕ್ಟ್ರಿಕ್ ಕಾರು ಹಾಗೂ ಸೌರ ಶಕ್ತಿ ಎನರ್ಜಿ ಮೇಲೆ ಹೊಡೆತ ನೀಡುತ್ತಿದೆ. ಟ್ರಪ್ ಬಿಗ್ ಬ್ಯೂಟಿಫುಲ್ ಮಸೂದೆ ಎಂದು ವ್ಯಂಗ್ಯವಾಡಿರುವ ಎಲಾನ್ ಮಸ್ಕ್, ಈ ಮಸೂದೆ ಇವಿ ಹಾಗೂ ಸೌರಶಕ್ತಿ ಇಧನಕ್ಕೆ ನೀಡಿರುವ ಪ್ರೋತ್ಸಾಹವನ್ನು ತೆಗೆದುಹಾಕಲಿದೆ ಎಂದಿದ್ದಾರೆ. ಇವರಿಬ್ಬರ ಜಗಳ ತಾರಕ್ಕೇರಿದ ಬೆನ್ನಲ್ಲೇ ಟೆಸ್ಲಾ ಷೇರುಗಳು ಮೌಲ್ಯ ಶೇಕಡಾ 14.26 ರಷ್ಟು ಕುಸಿತ ಕಂಡಿದೆ. ಇದು ಎಲಾನ್ ಮಸ್ಕ ಒಡೆತದನ ಟೆಸ್ಲಾಗೆ ತೀವ್ರ ಹಿನ್ನಡೆ ತಂದಿದೆ.
EV ಪ್ರೋತ್ಸಾಹ ಕಡಿತದ ಬಗ್ಗೆ ಜೆಪಿಮಾರ್ಗನ್ ವರದಿ
ಬ್ಲೂಮ್‌ಬರ್ಗ್ ವರದಿಯ ಪ್ರಕಾರ, EV ಪ್ರೋತ್ಸಾಹ ಕಡಿತವು ಟೆಸ್ಲಾಗೆ ಪೂರ್ಣ ವರ್ಷದ ನಿವ್ವಳ ಲಾಭದಲ್ಲಿ $1.2 ಶತಕೋಟಿ ವರೆಗೆ ವೆಚ್ಚವಾಗಬಹುದು ಎಂದು ಜೆಪಿಮಾರ್ಗನ್ ನಲ್ಲಿ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕ್ಯಾಲಿಫೋರ್ನಿಯಾದ EV ಪ್ರೋತ್ಸಾಹವನ್ನು ತೆಗೆದುಹಾಕುವ ಸೆನೆಟ್ ಶಾಸನವು ಟೆಸ್ಲಾಗೆ ಹೆಚ್ಚುವರಿ $2 ಶತಕೋಟಿ ವೆಚ್ಚವಾಗಬಹುದು ಎಂದು ಬ್ರೋಕರೇಜ್ ಸೇರಿಸಿದೆ. ಒಟ್ಟಾಗಿ, ಈ ವರ್ಷ ವಾಲ್ ಸ್ಟ್ರೀಟ್ ನಿರೀಕ್ಷಿಸಿದ $6 ಶತಕೋಟಿ ಬಡ್ಡಿ ಮತ್ತು ತೆರಿಗೆಗಳ ಮೊದಲು ಟೆಸ್ಲಾ ಗಳಿಕೆಯ (EBIT) ಅರ್ಧಕ್ಕಿಂತ ಹೆಚ್ಚು ಇದು ಪರಿಣಾಮಕಾರಿಯಾಗಿ ಕಡಿಮೆಯಾಗುತ್ತದೆ ಎಂದು ವರದಿ ಸೇರಿಸಿದೆ. TSLA ಸ್ಟಾಕ್ ವರ್ಷದಿಂದ ಇಲ್ಲಿಯವರೆಗೆ 24% ಕ್ಕಿಂತ ಹೆಚ್ಚು ಕುಸಿದಿದೆ, ಆದರೆ ಕಳೆದ 12 ತಿಂಗಳುಗಳಲ್ಲಿ 74% ಕ್ಕಿಂತ ಹೆಚ್ಚಾಗಿದೆ.
ತೆರೆಗಿ ನೀತಿ, ಎಲಾನ್ ಮಸ್ಕ್ ಆಕ್ರೋಶಕ್ಕೆ ಡೋನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿದ್ದಾರೆ. ನಾನು ಯಾವಾಗಲೂ ಎಲಾನ್ ಅವರನ್ನು ಇಷ್ಟಪಡುತ್ತಿದ್ದೆ. ಅವರ ಕಾರ್ಯವೈಖರಿ ಕುರಿತು ತುಂಬಾ ಆಶ್ಚರ್ಯಪಟ್ಟಿದ್ದೇನೆ. ಮಸೂದೆಗಿಂತ ನನ್ನನ್ನು ಟೀಕಿಸುವುದು ನನಗೆ ಇಷ್ಟ, ಇದು ನಮ್ಮ ದೇಶದ ಇತಿಹಾಸದಲ್ಲಿ ಅತಿ ದೊಡ್ಡ ಕಡಿತವಾಗಿದೆ. ನಾವು ಎಂದಿಗೂ ಕಡಿತಗೊಳಿಸಿಲ್ಲ. ಇದು ಸುಮಾರು 1.6 ಟ್ರಿಲಿಯನ್ ಕಡಿತಗಳ ಬಗ್ಗೆ. ಇದು ಅತಿ ದೊಡ್ಡ ತೆರಿಗೆ ಕಡಿತ. ತೆರಿಗೆ, ಜನರ ತೆರಿಗೆಗಳು ಕಡಿಮೆಯಾಗುತ್ತವೆ ಎಂದು ನೀವು ಹೇಳುತ್ತೀರಿ, ಆದರೆ ಇದು ಇತಿಹಾಸದಲ್ಲಿ ಅತಿ ದೊಡ್ಡ ತೆರಿಗೆ ಕಡಿತವಾಗಿದೆ. ಆ ಮಸೂದೆಯಲ್ಲಿ ನಾವು ನಂಬಲಾಗದ ಕೆಲಸಗಳನ್ನು ಮಾಡುತ್ತಿದ್ದೇವೆ. ಮತ್ತು ನಾವು ಸಣ್ಣ ವ್ಯವಹಾರಗಳಿಗೆ, ಜನರಿಗೆ, ಮಧ್ಯಮ-ಆದಾಯದ ಜನರಿಗೆ ಏನು ಮಾಡುತ್ತಿದ್ದೇವೆ ಎಂಬುದನ್ನು ನೀವು ನೋಡಿದಾಗ, ನಾವು ಮಾಡುತ್ತಿರುವ ಎಲ್ಲಾ ವಿಷಯಗಳು ಅರ್ಥವಾಗುತ್ತದೆ ಎಂದು ಟ್ರಂಪ್ ಹೇಳಿದ್ದಾರೆ.
EV ಆದೇಶವನ್ನು ತೆಗೆದುಕೊಂಡಿದ್ದರಿಂದ ಎಲಾನ್ ಅಸಮಾಧಾನಗೊಂಡಿದ್ದಾರೆ, ಇದು ವಿದ್ಯುತ್ ವಾಹನಗಳಿಗೆ ಬಹಳಷ್ಟು ಹಣವಾಗಿತ್ತು. ಅವರು ನಮಗೆ ಶತಕೋಟಿ ಡಾಲರ್‌ಗಳ ಸಬ್ಸಿಡಿಯನ್ನು ಪಾವತಿಸಬೇಕೆಂದು ಬಯಸುತ್ತಾರೆ. ಎಲಾನ್ ಇದನ್ನು ಆರಂಭದಿಂದಲೂ ತಿಳಿದಿದ್ದರು ಎಂದು ಮಸ್ಕ್ ಹೇಳಿದ್ದಾರೆ.
