ಹೆಣ್ಣಿಗೆ ಅತಿ ಉದ್ದದ ಗಡ್ಡ, ಗಿನ್ನೆಸ್‌ ವಿಶ್ವದಾಖಲೆ ನಿರ್ಮಿಸಿದ ಅಮೆರಿಕ ಮಹಿಳೆ!

ಅತಿಯಾದ ಗಡ್ಡದ ಕಾರಣದಿಂದಾಗಿ ಮುಜುಗರಕ್ಕೆ ಒಳಗಾಗುತ್ತಿದ್ದ ಈಕೆ, ಇದನ್ನು ತಪ್ಪಿಸಿಕೊಳ್ಳುವ ಸಲುವಾಗಿ, ಶೇವಿಂಗ್‌, ವ್ಯಾಕ್ಸಿಂಗ್‌ ಮತ್ತು ಕೂದಲನ್ನು ತೆಗೆಯುವ ಉತ್ಪನ್ನಗಳನ್ನು ಬಳಸಲು ಆರಂಭಿಸಿದ್ದರು.

Erin Honeycutt US Woman Creates Guinness World Record For Longest Female Beard san

ನವದೆಹಲಿ (ಆ.12): ಸಮಾಜದ ಸವಾಲು, ಆರೋಗ್ಯ ಸಮಸ್ಯೆ ಇವೆಲ್ಲವನ್ನೂ ಧಿಕ್ಕರಿಸಿದ ಅಮೆರಿಕದ ಮಿಚಿಗನ್‌ನ ಎರಿನ್ ಹನಿಕಟ್, ಹೆಣ್ಣಿಗೆ ಅತಿ ಉದ್ದದ ಗಡ್ಡದ ಗಿನ್ನೆಸ್‌ ವಿಶ್ವದಾಖಲೆ ನಿರ್ಮಾಣ ಮಾಡಿದ್ದಾರೆ. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ, ಪ್ರಸ್ತುತ ಬದುಕಿರುವ ಮಹಿಳೆಯರ ಪೈಕಿ ಅತೀ ಉದ್ದದ ಗಡ್ಡ ಹೊಂದಿರುವ ವ್ಯಕ್ತಿಯ ಗಿನ್ನೆಸ್‌ ವಿಶ್ವದಾಖಲೆಯನ್ನು ಎರಿನ್ ಹನಿಕಟ್ ನಿರ್ಮಿಸಿದ್ದಾರೆ. 38 ವರ್ಷದ ಹನಿಕಟ್‌ ಸುಮಾರು ಎರಡು ವರ್ಷಗಳಿಂದ ತಮ್ಮ ಗಡ್ಡವನ್ನು ಬೋಳಿಸಿಲ್ಲ. ಇಂದು ಅವರ ಗಡ್ಡ 11.81 ಇಂಚು ಹೊಂದಿದೆ ಎಂದು ಗಿನ್ನೆಸ್‌ ಸಂಸ್ಥೆ ತಿಳಿಸಿದೆ. ಆಕೆಯ ಮುಖದ ಮೇಲಿನ ಅತಿಯಾದ ಕೂದಲಿನ ಬೆಳವಣಿಗೆಯು ಪಾಲಿಸಿಸ್ಟಿಕ್ ಓವೆರಿಯನ್ ಸಿಂಡ್ರೋಮ್‌ನ ಪರಿಣಾಮವಾಗಿದೆ, ಇದು ಗಿನ್ನೆಸ್ ವಿಶ್ವ ದಾಖಲೆಗಳ ಪ್ರಕಾರ ಹಾರ್ಮೋನುಗಳ ಅಸಮತೋಲನವನ್ನು ಉಂಟುಮಾಡುವ ಸ್ಥಿತಿಯಾಗಿದೆ. ಹನಿಕಟ್ ಗಡ್ಡದ ಬೆಳವಣಿಗೆಯನ್ನು ಹೆಚ್ಚಿಸಲು ಯಾವುದೇ ಹಾರ್ಮೋನುಗಳು ಅಥವಾ ಪೂರಕಗಳನ್ನು ತೆಗೆದುಕೊಳ್ಳುವುದಿಲ್ಲ ಎಂದೂ ಗಿನ್ನೆಸ್‌ ತಿಳಿಸಿದೆ.

ಎರಿನ್‌ ಹನಿಕಟ್‌ ಅವರ ಗಡ್ಡ 11.81 ಇಂಜು ಇರುವುದರೊಂದಿಗೆ 75 ವರ್ಷದ ವಿವಿಯನ್ ವೀಲರ್ ಅವರ 25.5 cm (10.04 in) ದಾಖಲೆಯನ್ನು ಮುರಿದು ಗಿನ್ನೆಸ್ ವಿಶ್ವದಾಖಲೆ ಮಾಡಿದ್ದಾರೆ.  ಹನಿಕಟ್ ಕೇವಲ 13 ವರ್ಷದವಳಿದ್ದಾಗ ಅತಿಯಾದ ಕೂದಲು ಬೆಳವಣಿಗೆಯ ಸಮಸ್ಯೆಯು ಪ್ರಾರಂಭವಾಯಿತು. ಇದರಿಂದಾಗಿ ಸಮಾಜದ ಎದುರು ಹೋಗಲು ಅವರು ಮುಜುಗರ ಪಡಲು ಆರಂಭಿಸಿದ್ದರು, ಅದಕ್ಕಾಗಿ  ಶೇವಿಂಗ್, ವ್ಯಾಕ್ಸಿಂಗ್ ಮತ್ತು ಕೂದಲು ತೆಗೆಯುವ ಉತ್ಪನ್ನಗಳನ್ನು ಬಳಸಲು ಆರಂಭಿಸಿದ್ದರು.

ತನ್ನ ಇಡೀ ಹದಿಹರೆಯದ ವಯಸ್ಸಿನಿಂದ ಹಿಡಿದು, ವಯಸ್ಕ ಜೀವನದವರೆಗೂ ಗಡ್ಡವನ್ನು ಶೇವಿಂಗ್ ಮಾಡಿಕೊಳ್ಳೋದು ಮುಂದುವರಿಸಿದ್ದರು. ಆದರೆ, ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡ ಬಳಿಕ, ಪ್ರತಿದಿನ ಶೇವಿಂಗ್‌ ಮಾಡಿಕೊಳ್ಳುವುದು ನನಗೆ ಆಯಾಸ ನೀಡುತ್ತಿತ್ತು ಎಂದು ಹೇಳಿದ್ದಾರೆ. ಈ ವೇಳೆ ಈಕೆಯ ಪತ್ನಿ ಜೆನ್‌, ಗಡ್ಡವನ್ನು ಬೆಳೆಸುವಂತೆ ಪ್ರೋತ್ಸಾಹ ನೀಡಿದ್ದರು ಎಂದು ಗಿನ್ನೆಸ್‌ ಸಂಸ್ಥೆ ತಿಳಿಸಿದೆ.

 

1 ನಿಮಿಷ ಬರೀ ತಲೆಯಿಂದ 273 ವಾಲ್ನಟ್‌ ಉಡೀಸ್: ಪಾಕಿಸ್ತಾನಿ ಹೆಸರಿನಲ್ಲಿದ್ದ ದಾಖಲೆ ಮುರಿದ ಭಾರತೀಯ

ಕೋವಿಡ್‌-19 ಸಂದರ್ಭದಲ್ಲಿ ರಾಷ್ಟ್ರವ್ಯಾಪಿ ಲಾಕ್‌ಡೌನ್‌ ಆದಾಗ ಹಾಗೂ ಜೆನ್‌ ನೀಡಿದ ಬೆಂಬಲದಿಂದ ನಾನು ಗಡ್ಡವನ್ನು ಬೆಳೆಸಲು ಆರಂಭಿಸಿದೆ ಎಂದು ಹನಿಕಟ್‌ ಹೇಳಿದ್ದಾರೆ.
"ಇದು ನಿಜವಾಗಿಯೂ ಗಡ್ಡವನ್ನು ಬೆಳೆಸುವಲ್ಲಿ ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಲು ನನಗೆ ಅವಕಾಶವನ್ನು ನೀಡಿತು" ಎಂದು ಅವರು ಹೇಳಿದ್ದಾರೆ. 'ಮಾಸ್ಕ್‌ ಧರಿಸಿಕೊಂಡು ಧರಿಸುವುದು ಸಾರ್ವಜನಿಕವಾಗಿ ಹೊರಗೆ ಹೋಗುವುದರಲ್ಲಿ ನನ್ನ ವಿಶ್ವಾಸವನ್ನು ಬೆಳೆಸಲು ನಿಜವಾಗಿಯೂ ಸಹಾಯ ಮಾಡಿದೆ" ಎಂದು ಹನಿಕಟ್ ತಿಳಿಸಿದ್ದಾರೆ. ಹನಿಕಟ್ ಅವರ ತಾಯಿ ಜಿಲ್ ರೋಚ್ ಕೂಡ ತನ್ನ ಮಗಳ  ನಿರ್ಧಾರವನ್ನು ಬೆಂಬಲಿಸಿದ್ದಾರೆ.

ಅಬ್ಬಬ್ಬಾ.. ದುಬೈ ಶೇಖ್‌ನ ಈ 46 ಅಡಿ ಎತ್ತರದ ಹಮ್ಮರ್ ನೋಡಿ: ಇದ್ರ ಮುಂದೆ ಇತರ ವಾಹನಗಳು ಕುಬ್ಜವಾಗೇ ಕಾಣ್ಸುತ್ತೆ!

Latest Videos
Follow Us:
Download App:
  • android
  • ios