ಎಲಾನ್ ಮಸ್ಕ್ ಪತ್ನಿ, ಗೆಳತಿ ಸೇರಿ ನಾಲ್ವರು ಮಹಿಳೆಯರಿಂದ 14 ಮಕ್ಕಳ ತಂದೆಯಾಗಿರುವ ಶ್ರೀಮಂತ ಉದ್ಯಮಿ ಇದೀಗ  15ನೇ ಮಗು ಪಡೆಯಲು ಪ್ಲಾನ್ ಮಾಡಿದ್ದಾರೆ. ಈ ಬಾರಿ ಮಸ್ಕ್ ಹೊಸ ಪ್ಲಾನ್ ಮಾಡಿದ್ದಾರೆ. ಜಪಾನ್ ಮಹಿಳೆಗೆ ತನ್ನ ವೀರ್ಯ ಕಳುಹಿಸಿದ್ದಾರೆ. 

ನ್ಯೂಯಾರ್ಕ್(ಏ.17) ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಹಲವು ಕ್ಷೇತ್ರದಲ್ಲಿ ಹೂಡಿಕೆ ಮಾಡಿದ್ದಾರೆ. ಹಲವು ಮೂಲಗಳಿಂದ ಪ್ರತಿ ದಿನ ಸಾವಿರಾರು ಕೋಟಿ ರೂಪಾಯಿ ಆದಾಯಗಳಿಸುತ್ತಿದ್ದಾರೆ. ಇದರ ಜೊತೆಗೆ ಹಲವರಿಂದ ಎಲಾನ್ ಮಸ್ಕ್ 14 ಮಕ್ಕಳ ತಂದೆಯಾಗಿದ್ದಾರೆ. ಮಾಜಿ ಪತ್ನಿ, ಹಾಲಿ ಗೆಳತಿ, ಕಚೇರಿ ನಿರ್ದೇಶಕಿ ಸೇರಿದಂತೆ ನಾಲ್ವರು ಮಹಿಳೆಯರು ಎಲಾನ್ ಮಸ್ಕ್ ಮಕ್ಕಳ ತಾಯಿಯಾಗಿದ್ದಾರೆ. ಇದೀಗ ಹಾಲಿ, ಮಾಜಿ ಗೆಳತಿ, ಹೊಸ ಗೆಳತಿ, ಮಾಜಿ ಪತ್ನಿಯಿಂದ ಮಗು ಪಡೆಯುವ ಬದಲು ಇದೀಗ ಒಪ್ಪಿಕೊಂಡವರಿಗೆ ವೀರ್ಯ ನೀಡಿ ಮಕ್ಕಳ ಪಡೆಯಲು ಮುಂದಾಗಿದ್ದಾರೆ.ಈ ಪ್ಲಾನ್ ಪ್ರಕಾರ ಇನ್ನೊಂದಷ್ಟು ಮಕ್ಕಳನ್ನು ಪಡೆಯಲು ಎಲಾನ್ ಮಸ್ಕ್ ಪ್ಲಾನ್ ಮಾಡಿದ್ದಾರೆ. ಇದರಂತೆ ಎಲಾನ್ ಮಸ್ಕ್, ಜಪಾನ್ ಮಹಿಳೆಯೊಬ್ಬರಿಗೆ ವೀರ್ಯ ಕಳುಹಿಸಿದ್ದಾರೆ.

15ನೇ ಮಗು ಪಡೆಯುವ ಕಸರತ್ತು
ಎಲಾನ್ ಮಸ್ಕ್ 15ನೇ ಮಗು ಪಡೆಯಲು ಪ್ಲಾನ್ ಮಾಡಿದ್ದಾರೆ. ಎಲಾನ್ ಮಸ್ಕ್ ತನ್ನ 14ನೇ ಮಗುವನ್ನು ಇನ್‌ಫ್ಲುಯೆನ್ಸರ್ ಆ್ಯಶ್ಲೆ ಸೈಂಟ್ ಕ್ಲೇರ್‌ನಿಂದ ಪಡೆದಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ ಎಲಾನ್ ಮಸ್ಕ್ 14ನೇ ಮಗುವಿನ ತಂದೆಯಾಗಿದ್ದರು. ಇದಾಗ ಐದು ತಿಂಗಳಿಗೆ ಎಲಾನ್ ಮಸ್ಕ್ , ಇದೇ ಆ್ಯಶ್ಲೆ ಸೈಂಟ್ ಕ್ಲೇರ್‌ನಿಂದ ಮತ್ತೊಂದು ಮಗು ಪಡೆಯಲು ಬಯಸಿದ್ದಾರೆ. ಇದಕ್ಕಾಗಿ ಕ್ಲೇರ್ ಜೊತೆಗೆ ಮಾತನಾಡಿದ್ದಾರೆ. ಮತ್ತೊಂದು ಮಗು ಹೆತ್ತುಕೊಡುವಂತೆ ಕೇಳಿದ್ದಾರೆ. ಆದರೆ ಮಗು ಹೆತ್ತು 6 ತಿಂಗಳಾಗಿದ್ದ ಕಾರಣ ಸೈಂಟ್ ನಿರಾಕರಿಸಿದ್ದಾರೆ. ಹೀಗಾಗಿ ಇದೀಗ ಎಲಾನ್ ಮಸ್ಕ್ ಜಪಾನ್ ಮಹಿಳೆಯನ್ನು ಸಂಪರ್ಕಿಸಿ 15ನೇ ಮಗು ಪಡೆಯಲು ನಿರ್ಧರಿಸಿದ್ದಾರೆ.

ಎಲಾನ್ ಮಸ್ಕ್ ಏಲಿಯನ್ ಅನ್ನೋದಕ್ಕೆ ಇಲ್ಲಿದೆ ಸಾಕ್ಷಿ, ಟ್ರಂಪ್ ಡಿನ್ನರ್ ಪಾರ್ಟಿ ವಿಡಿಯೋ ಸಂಚಲನ

ಜಪಾನ್ ಮಹಿಳೆಗೆ ವೀರ್ಯ
ಜಪಾನ್ ಮಹಿಳೆಯನ್ನು ಸಂಪರ್ಕಿಸಿ ಮಾತುಕತೆ ನಡೆಸಿದ್ದಾರೆ. ಸರೋಗೆಟೀವ್ ಮದರ್ ಕುರಿತು ಜಪಾನ್ ನಿಯಮದ ಪ್ರಕಾರ ಎಲ್ಲಾ ಪ್ರಕ್ರಿಯೆ ಮುಗಿಸಿದ್ದಾರೆ. ಮಗು ಹೆತ್ತು ಕೊಡಲು ಜಪಾನ್ ಮಹಿಳೆಗೆ ಹಣ ಕೂಡ ಆಫರ್ ಮಾಡಿದ್ದಾರೆ. ಆದರೆ ಎಷ್ಟು ಹಣ ನೀಡಲಾಗಿದೆ ಅನ್ನೋದು ಬಹಿರಂಗವಾಗಿಲ್ಲ. ಮಗುವನ್ನು ಹೆತ್ತು ಬೆಳೆಸಲು ಒಪ್ಪಂದ ಮಾಡಿಕೊಂಡಿದ್ದಾರೆ ಎನ್ನಾಲಾಗಿದೆ. ಪ್ರತಿ ತಿಂಗಳು ಇಂತಿಷ್ಟು ಮೊತ್ತ ಖರ್ಚಿಗೆ ನೀಡಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಎಲ್ಲಾ ಒಪ್ಪಂದ ಬಳಿಕ ಎಲಾನ್ ಮಸ್ಕ್ ವೀರ್ಯವನ್ನು ಜಪಾನ್ ಮಹಿಳೆಗೆ ಕಳುಹಿಸಿದ್ದಾರೆ ಎಂದು ಹೇಳಲಾಗಿದೆ.

14 ಮಕ್ಕಳ ತಾಯಿಂದಿರು
ಸೈಂಟ್ ಕ್ಲೇರ್, ಸಿಂಗರ್ ಗ್ರಿಮ್ಸ್, ನ್ಯೂರೋ ಲಿಂಕ್ ಕಾರ್ಯನಿರ್ವಾಹಿ ಶಿವೊನ್ ಝಿಲ್ಲಿಸ್ ಹಾಗೂ ಮಾಜಿ ಪತ್ನಿ ಜಸ್ಟಿನ್ ಮಸ್ಕ್, ಇವರು ಎಲಾನ್ ಮಸ್ಕ್ 14 ಮಕ್ಕಳ ತಾಯಂದಿರು. ಈ ಪೈಕಿ ಶಿವೋನ್ ಝಿಲ್ಲಿಸ್ ನಾಲ್ಕು ಮಕ್ಕಳ ತಾಯಿಯಾಗಿದ್ದಾರೆ. ಇಷ್ಟೇ ಅಲ್ಲ ಸದ್ಯ ಎಲಾನ್ ಮಸ್ಕ್ ಜೊತೆಗಿದ್ದಾರೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಭೇಟಿ ವೇಳೆ, ಎಲಾನ್ ಮಸ್ಕ್, ಶಿವೋನ್ ಜಿಲ್ಲಿಸ್ ಹಾಗೂ ಮಕ್ಕಳು ಮೋದಿ ಭೇಟಿಯಾಗಿದ್ದರು.

ಅಧಿಕೃತ ಸಂಖ್ಯೆ 14
ಎಲಾನ್ ಮಸ್ಕ್ ಅಧಿಕೃತವಾಗಿ 14 ಮಕ್ಕಳ ತಂದೆ. ಆದರೆ ಮೂಲಗಳ ಪ್ರಕಾರ ಎಲಾನ್ ಮಸ್ಕ್ ಮಕ್ಕಳ ಸಂಖ್ಯೆ ಹೆಚ್ಚಿದೆ ಎಂದಿದ್ದಾರೆ. ಹಲವರ ಜೊತೆ ರಹಸ್ಯ ಸಂಬಂಧ ಹೊಂದಿದ್ದ ಎಲಾನ್ ಮಸ್ಕ್ ಮಕ್ಕಳನ್ನು ಪಡೆದಿದ್ದಾರೆ. ಇಷ್ಟೇ ಅಲ್ಲ ಸಂಬಂಧ ಬಹಿರಂಗಪಡಿಸದಂತೆ ಸೂಚಿಸಿದ್ದರು ಅನ್ನೋ ಮಾಹಿತಿಯೂ ಬಯಲಾಗಿದೆ. ಎಲಾನ್ ಹಾಗೂ ಸೈಂಟ್ ಕ್ಲೇರ್ ಜೊತೆಗಿನ ಸಂಬಧವೂ ಇದೇ ರೀತಿ ಆಗಿತ್ತು. ಆದರೆ ಕ್ಲೇರ್ ಸಂಬಂಧ ಬಹಿರಂಗಪಡಿಸಿದ್ದರು. ಇಷ್ಟೇ ಅಲ್ಲ ಎಲಾನ್ ಮಸ್ಕ್ ಎಲ್ಲಾ ಷರತ್ತುಗಳನ್ನು ಒಪ್ಪಿಕೊಂಡಿಲ್ಲ.