ಲೈಂಗಿಕ ಕಿರುಕುಳ ಆರೋಪ: ಗಗನಸಖಿಗೆ ಸವಾಲೆಸೆದ ಎಲಾನ್ ಮಸ್ಕ್!
ಖಾಸಗಿ ಜೆಟ್ ಫ್ಲೈಟ್ ಅಟೆಂಡೆಂಟ್‌ನಿಂದ ಲೈಂಗಿಕ ಕಿರುಕುಳ ವಿವಾದ ಮುಚ್ಚಿಡಲು ಮಸ್ಕ್‌ನ ಸ್ಪೇಸ್‌ಎಕ್ಸ್ 2018 ರಲ್ಲಿ $250,000 ಪಾವತಿಸಿದೆ ಎಂದು ಬ್ಯುಸಿನೆಸ್ ಇನ್‌ಸೈಡರ್ ಗುರುವಾರ ವರದಿ ಮಾಡಿದೆ.
Elon Musk Latest News: 2016 ರಲ್ಲಿ ಖಾಸಗಿ ಜೆಟ್‌ನಲ್ಲಿ ಫ್ಲೈಟ್ ಅಟೆಂಡೆಂಟ್‌ಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಸಂಪೂರ್ಣ ಸುಳ್ಳು ಎಂದು ಬಿಲಿಯನೇರ್ ಎಲಾನ್ ಮಸ್ಕ್ ಹೇಳಿದ್ದಾರೆ. ಈ ಬಗ್ಗೆ ಟೆಸ್ಲಾ ಸಿಇಓ ಎಲಾನ್ ಮಸ್ಕ್ ಟ್ವೀಟ್ ಮಾಡಿದ್ದು ಆರೋಪ ಮಾಡಿದ ಗನಸಖಿಗೆ ಸವಾಲೊಂದನ್ನು ಹಾಕಿದ್ದಾರೆ. ಈ ಆರೋಪವು ಟ್ವಿಟರ್ ಸ್ವಾಧೀನಕ್ಕೆ ಅಡ್ಡಿಪಡಿಸುವ ಉದ್ದೇಶವನ್ನು ಹೊಂದಿದೆ ಎಂದು ಮಸ್ಕ್ ಹೇಳಿದ್ದಾರೆ. "ದಾಖಲೆಗಾಗಿ, ಆ ಆರೋಪಗಳು ಸಂಪೂರ್ಣವಾಗಿ ಸುಳ್ಳು" ಎಂದು ಮಸ್ಕ್ ಟ್ವೀಟ್‌ವೊಂದರಲ್ಲಿ ಹೇಳಿದ್ದಾರೆ.
ಹೆಸರಿಸದ ಖಾಸಗಿ ಜೆಟ್ ಫ್ಲೈಟ್ ಅಟೆಂಡೆಂಟ್ ಲೈಂಗಿಕ ಕಿರುಕುಳದ ನೀಡಿದ ಪ್ರಕರಣವನ್ನು ಮುಚ್ಚಿಹಾಕಲು ಮಸ್ಕ್‌ನ ಸ್ಪೇಸ್‌ಎಕ್ಸ್ 2018 ರಲ್ಲಿ $250,000 ((ಸುಮಾರು ₹1.95 ಕೋಟಿ) ಪಾವತಿಸಿದೆ ಎಂದು ವರದಿ ತಿಳಿಸಿತ್ತು. ಮಸ್ಕ್ ಗಗನಸಖಿ ಜತೆ ಅನುಚಿತವಾಗಿ ವರ್ತಿಸಿದ್ದು, ಕಾಮ ಪ್ರಚೋದಕ ಮಸಾಜ್ ಮಾಡುವಂತೆ ಹೇಳಿದ್ದಾರೆ ಎಂದು ಬ್ಯುಸಿನೆಸ್ ಇನ್‌ಸೈಡರ್ ವರದಿಯಲ್ಲಿ ಹೇಳಲಾಗಿತ್ತು.
ಗಗನಸಖಿಯ ಅನಾಮಧೇಯ ಸ್ನೇಹಿತೆಯನ್ನು ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ಆಕೆ ಯುವತಿ ಬಳಿ ದುಃಖ ತೋಡಿಕೊಂಡಿದ್ದಾಳೆ ಎನ್ನಲಾಗಿದೆ. 2016 ರಲ್ಲಿ ಮಸ್ಕ್ ಹಾರಾಟದ ಸಮಯದಲ್ಲಿ ಫುಲ್ ಬಾಡಿ ಮಸಾಜ್ ಮಾಡಲು ತನ್ನ ಕೋಣೆಗೆ ಬರುವಂತೆ ಕೇಳಿಕೊಂಡಿದ್ದರು. ಗಗನಸಖಿ ಮಸ್ಕ್ (Elon Musk) ಕೋಣೆಗೆ ಬಂದಾಗ ಮಸ್ಕ್ ಬೆತ್ತಲೆಯಾಗಿದ್ದರು. ಮಸ್ಕ್ ದೇಹದ ಕೆಳಗಿನ ಅರ್ಧವನ್ನು ಮಾತ್ರ ಆವರಿಸುವ ಬಟ್ಟೆಯನ್ನು ಧರಿಸಿದ್ದರು.
ಇದನ್ನೂ ಓದಿ: ಸಾವಿನ ಬಗ್ಗೆ ಎಲಾನ್ ಮಸ್ಕ್ ಟ್ವೀಟ್: ತಾಯಿಯ ಬುದ್ಧಿವಾದದ ಬಳಿಕ 'Sorry' ಎಂದ ಟೆಸ್ಲಾ ಸಿಇಓ
ಮಸಾಜ್ ಸಮಯದಲ್ಲಿ ಮಸ್ಕ್ ಅವರ ಜನನಾಂಗಗಳನ್ನು ಬಹಿರಂಗಪಡಿಸಿದ್ದು ನಂತರ ಅವಳ ತೊಡೆಯನ್ನು ಸವರಿದ್ದರು ಮತ್ತು ಅವಳು ಮತ್ತಷ್ಟು ಸಹಕಾರ ನೀಡಿದರೆ ಅವಳಿಗೆ ಕುದುರೆಯನ್ನು ಖರೀದಿಸುವುದಾಗಿ ಹೇಳಿದ್ದರು ಎಂದು ಆರೋಪಿಸಲಾಗಿದೆ.
ಗಗನಸಖಿಗೆ ಸವಾಲು: ಈ ಬಗ್ಗೆ ಪ್ರತಿಕ್ರಿಯಿಸಿರುವ ಮಸ್ಕ್ ಆರೋಪವನ್ನು ತಳ್ಳಿಹಾಕಿದ್ದಾರೆ. "ನನ್ನ ವಿರುದ್ಧ ಆರೋಪ ಮಾಡುತ್ತಿರುವ ಆಕೆಯ ಸುಳ್ಳುಗಾರ ಸ್ನೇಹಿತೆಗೆ ಸವಾಲವೊಂದನ್ನು ಹೊಂದಿದ್ದೇನೆ. ಅವಳು ನನ್ನನ್ನು ಬೆತ್ತಲೆಯಾಗಿ ನೋಡಿದ್ದರೆ, ಸಾರ್ವಜನಿಕರಿಗೆ ತಿಳಿದಿಲ್ಲದ ಯಾವುದಾದರೊಂದು ಗುರುತನ್ನು ವಿವರಿಸಲಿ (ಗಾಯಗಳು, ಟ್ಯಾಟೂಗಳು, ...). ಅವಳು ಇದನ್ನು ಮಾಡಲು ಸಾಧ್ಯವಾಗುವುದಿಲ್ಲ, ಏಕೆಂದರೆ ಈ ಘಟನೆ ಸಂಭವಿಸಿಲ್ಲ" ಎಂದು ಮಸ್ಕ್ ಟ್ವೀಟ್ ಮಾಡಿದ್ದಾರೆ.
ಫ್ಲೈಟ್ ಅಟೆಂಡೆಂಟ್ ಮಸ್ಕ್ ಅವರ ಪ್ರಸ್ತಾಪವನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದರಿಂದ ಸ್ಪೇಸ್‌ಎಕ್ಸ್‌ನಲ್ಲಿ (SpaceX) ಕೆಲಸ ಮಾಡುವ ಅವಕಾಶಕ್ಕೂ ತೊಂದರೆಯಾಗಿತ್ತು. ಈ ಬೆನ್ನಲ್ಲೇ 2018 ರಲ್ಲಿ ಯುವತಿ ವಕೀಲರನ್ನು ನೇಮಿಸಿಕೊಂಡಿದ್ದಳು ಎಂದು ಬಿಸಿನೆಸ್ ಇನ್ಸೈಡರ್ ವರದಿ ಹೇಳಿದೆ
ರಾಕೆಟ್ ಕಂಪನಿಯು ನ್ಯಾಯಾಲಯದ ಹೊರಗೆ ಈ ಪ್ರಕರಣವನ್ನು ಇತ್ಯರ್ಥ ಮಾಡಿದ್ದು, ಬಹಿರಂಗಪಡಿಸದ ಒಪ್ಪಂದವನ್ನು ಒಳಗೊಂಡಿತ್ತು. ಹೀಗಾಗಿ ಈ ಒಪ್ಪಂದ ಫ್ಲೈಟ್ ಅಟೆಂಡೆಂಟ್ ಈ ಬಗ್ಗೆ ಮಾತನಾಡದಂತೆ ತಡೆಹಿಡಿದಿತ್ತು ಎಂದು ಬಿಸಿನೆಸ್ ಇನ್ಸೈಡರ್ ಹೇಳಿದೆ. ಈ ವರದಿಯೂ ಫ್ಲೈಟ್ ಅಟೆಂಡೆಂಟ್ ಅಥವಾ ಅವರ ಸ್ನೇಹಿತರನ್ನು ಹೆಸರಿಸಿಲ್ಲ.
ರಾಜಕೀಯ ದ್ವೇಷ?: ಟೆಸ್ಲಾ ಇಂಕ್‌ನ ಮುಖ್ಯ ಕಾರ್ಯನಿರ್ವಾಹಕ ಮತ್ತು ಟ್ವಿಟರ್ ಇಂಕ್ (Twiitter) ಖರೀದಿಸುವ ವಿವಾದಾತ್ಮಕ ಪ್ರಯತ್ನದ ಮಧ್ಯೆ ಇರುವ ಮಸ್ಕ್ ಅವರು ಡೆಮೋಕ್ರಾಟ್ ಬದಲಿಗೆ ರಿಪಬ್ಲಿಕನ್ ಮತ ಚಲಾಯಿಸುವುದಾಗಿ ಬುಧವಾರ ಹೇಳಿದ್ದರು, "ನನ್ನ ವಿರುದ್ಧ ಕೀಳು ರಾಜಕೀಯ ಅಭಿಯಾನ" ಆರಂಭವಾಗಬಹುದು ಎಂದು ಮಸ್ಕ್ ಭವಿಷ್ಯ ನುಡಿದ್ದರು
ಬ್ಯುಸಿನೆಸ್ ಇನ್‌ಸೈಡರ್ ವರದಿಯಲ್ಲಿನ, ಫ್ಲೈಟ್ ಅಟೆಂಡೆಂಟ್‌ನ ಕಥೆಯು ರಾಜಕೀಯವಾಗಿ ಪ್ರೇರೇಪಿತವಾದದ್ದು ಮತ್ತು ಈ ಕಥೆಯಲ್ಲಿ ಇನ್ನೂ ಬಹಳಷ್ಟು ಇದೆ ಎಂದು ಮಸ್ಕ್ ಹೇಳಿದ್ದಾರೆ. ಗುರುವಾರ ಸಂಜೆ, ಮಸ್ಕ್ ಮೊದಲು ಟ್ವೀಟ್ ಮಾಡಿದ್ದಾರೆ. "ನನ್ನ ವಿರುದ್ಧದ ದಾಳಿಗಳನ್ನು ರಾಜಕೀಯ ಮಸೂರದ ಮೂಲಕ ನೋಡಬೇಕು - ಇದು ಅವರ ಪ್ರಮಾಣಿತ ಪ್ಲೇಬುಕ್ - ಆದರೆ ಉತ್ತಮ ಭವಿಷ್ಯಕ್ಕಾಗಿ ಮತ್ತು ನಿಮ್ಮ ವಾಕ್ ಸ್ವಾತಂತ್ರ್ಯಕ್ಕಾಗಿ ಹೋರಾಡುವುದರಿಂದ ಯಾವುದೂ ನನ್ನನ್ನು ತಡೆಯುವುದಿಲ್ಲ." ಎಂದು ಆರಂಭಿಕ ಟ್ವೀಟ್‌ನಲ್ಲಿ ಅವರು ಹೇಳಿದ್ದಾರೆ. ಆದರೆ ಅವರು ಬಿಸಿನೆಸ್ ಇನ್ಸೈಡರ್ ಲೇಖನದಲ್ಲಿನ ಆರೋಪಗಳನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿಲ್ಲ.
ಇದನ್ನೂ ಓದಿ: ನಕಲಿ ಖಾತೆಗಳ ಬಗ್ಗೆ ಸ್ಪಷ್ಟತೆ ಇಲ್ಲದೆ ಟ್ವೀಟರ್ ಒಪ್ಪಂದ ಇಲ್ಲ: ಎಲಾನ್ ಮಸ್ಕ್