ತೀವ್ರ ಆರ್ಥಿಕ ಸಂಕಷ್ಟದ ನಡುವೆಯೇ ಶ್ರೀಲಂಕಾದಲ್ಲಿ ನೂತನ ಅಧ್ಯಕ್ಷರಿಗಾಗಿ ಚುನಾವಣೆ ನಡೆದಿದ್ದು, ಮಾಜಿ ಪ್ರಶಾನಿ ರಾನಿಲ್ ವಿಕ್ರಮಸಿಂಘೆ ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕೊಲಂಬೊ (ಜುಲೈ 20): ಶ್ರೀಲಂಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ರಾನಿಲ್ ವಿಕ್ರಮಸಿಂಘೆ ಭರ್ಜರಿ ಗೆಲುವು ಕಾಣುವ ಮೂಲಕ ದೇಶದ ಮುಂದಿನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮಾಜಿ ಪ್ರಧಾನಿಯಾಗಿರುವ ರಾನಿಲ್ ವಿಕ್ರಮಸಿಂಘೆಗೆ 134 ಸಂಸದರು ಮತ ಹಾಕಿದ್ದಾರೆ. 44 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಶ್ರೀಲಂಕಾ ಸಂಸತ್ತು ನೇರವಾಗಿ ತನ್ನ ಅಧ್ಯಕ್ಷರನ್ನು ಆಯ್ಕೆ ಮಾಡಿದೆ. ಇವರು ಶ್ರೀಲಂಕಾ ದೇಶದ 8ನೇ ಅಧ್ಯಕ್ಷರಾಗಿರಲಿದ್ದಾರೆ. 2005ರಲ್ಲಿ ಅಧ್ಯಕ್ಷರಾಗುವ ಸನಿಹ ಬಂದಿದ್ದ ರಾನಿಲ್ ವಿಕ್ರಮಸಿಂಘೆಗೆ ಅಂದು ತಮಿಳರು ಬೆಂಬಲ ನೀಡಿರಲಿಲ್ಲ. ಚುನಾವಣೆಯನ್ನು ಅವರು ಬಾಯ್ಕಾಟ್ ಮಾಡಿದ್ದರಿಂದ ಮಹಿಂದಾ ರಾಜಪಕ್ಷೆ ಎದುರು ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ರಾನಿಲ್ ವಿಕ್ರಮಸಿಂಘೆ ಪರವಾಗಿ 134 ಸಂಸದರು ಮತ ಹಾಕಿದರೆ, ಅವರ ಎದುರಾಳಿಯಾಗಿದ್ದ ಡಲ್ಲಾಸ್ ಅಲಹಪ್ಪೆರುಮೆ 82 ಮತಗಳು ಹಾಗೂ ಅನುರ ಕುಮಾರ ಡಿಸ್ಸಾನಾಯಕ ಕೇವಲ 3 ಮತಗಳನ್ನು ಪಡೆದುಕೊಂಡರು. ಗೆಲುವು ಕಂಡ ಬಳಿಕ ಮಾತನಾಡಿರುವ ರಾನಿಲ್ ವಿಕ್ರಮಸಿಂಘೆ, "ದೇಶವು ಅತ್ಯಂತ ಕಷ್ಟಕರ ಪರಿಸ್ಥಿತಿಯಲ್ಲಿದೆ, ನಮ್ಮ ಮುಂದೆ ದೊಡ್ಡ ಸವಾಲುಗಳಿವೆ" ಎಂದು ಹೇಳಿದ್ದಾರೆ.
ವಿಕ್ರಮಸಿಂಘೆ (Ranil Wickremesinghe) ಪ್ರಸ್ತುತ ಶ್ರೀಲಂಕಾದ (Sri Lanka) ಹಂಗಾಮಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಂದು ಶ್ರೀಲಂಕಾ ಸಂಸತ್ತಿನಲ್ಲಿ ನೂತನ ಅಧ್ಯಕ್ಷರ ಆಯ್ಕೆಗೆ ಎಲ್ಲಾ ಸಂಸದರು ಹಾಜರಾಗಿದ್ದರು. ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸೆ ಕೂಡ ಇಂದು ಸಂಸತ್ತಿನಲ್ಲಿ ಹಾಜರಿದ್ದರು. ಅಧ್ಯಕ್ಷೀಯ ಚುನಾವಣೆಗೂ ಮುನ್ನ ಶ್ರೀಲಂಕಾ ಸಂಸತ್ತಿನ ( Sri Lankan Parliament) ಹೊರಗೆ ಭದ್ರತೆಯನ್ನು ಹೆಚ್ಚಿಸಲಾಗಿತ್ತು.
ಎಲ್ಲಾ ಪಕ್ಷಗಳು ತಮ್ಮ ಮತಗಳ ಚಿತ್ರಗಳನ್ನು ಕ್ಲಿಕ್ ಮಾಡುವಂತೆ ತಮ್ಮ ಸಂಸದರಿಗೆ ಆದೇಶ ನೀಡಿದ್ದವು. ಅದರ ನಂತರ ಸಂಸತ್ತಿನಲ್ಲಿ ಫೋನ್ ತರದಂತೆ ಆದೇಶ ಹೊರಡಿಸಲಾಯಿತು. ಇಂದು ಚುನಾವಣೆ ನಡೆಯುವಾಗ ಯಾವುದೇ ಸಂಸದರು ಸದನಕ್ಕೆ ಮೊಬೈಲ್ ತರಲು ಬಿಡುವುದಿಲ್ಲ ಎಂದು ಸ್ಪೀಕರ್ ಹೇಳಿದ್ದರು. ಮಂಗಳವಾರ. ಕೆಲವು ಪಕ್ಷದ ನಾಯಕರು ರಹಸ್ಯ ಮತದಾನದಲ್ಲಿ ಅಡ್ಡ ಮತದಾನವನ್ನು ಪರಿಶೀಲಿಸಲು ತಮ್ಮ ಮತಪತ್ರಗಳ ಫೋಟೋಗಳನ್ನು ತೆಗೆದುಕೊಳ್ಳುವಂತೆ ತಮ್ಮ ಸಂಸದರನ್ನು ಕೇಳಿದ್ದರು ಎಂದು ವರದಿಯಾಗಿದೆ.
ಅಲಹಪ್ಪರುಮಾರನ್ನು ಬೆಂಬಲಿಸಿದ ಟಿಎನ್ಎ: ಅಧ್ಯಕ್ಷೀಯ ಚುನಾವಣೆಯಲ್ಲಿ ಟಿಎನ್‌ಎ, ಡಲ್ಲಾಸ್ ಅಲ್ಹಪ್ಪರುಮಾ (Dullas Alhapparuma) ಅವರಿಗೆ ಮತ ಹಾಕಲಿದೆ ಎಂದು ಟಿಎನ್‌ಎಯ ಜಾಫ್ನಾ ಜಿಲ್ಲೆಯ ಸಂಸದ ಸುಮಂತ್ರನ್ ಹೇಳಿದ್ದರು. ಮತ್ತೊಂದೆಡೆ, ಸಿಡಬ್ಲ್ಯೂಸಿ ಸಂಸದ ಜೀವನ್ ಥೋಂಡಮಾನ್ ಅವರು ಸಾಕಷ್ಟು ಚರ್ಚೆಯ ನಂತರ ಸಿಲೋನ್ ವರ್ಕರ್ಸ್ ಕಾಂಗ್ರೆಸ್ ಇಂದು ಚುನಾವಣೆಯಲ್ಲಿ ರನಿಲ್ ವಿಕ್ರಮಸಿಂಘೆ ಅವರನ್ನು ಬೆಂಬಲಿಸಲು ನಿರ್ಧರಿಸಿದೆ ಎಂದು ಹೇಳಿದ್ದರು. ಮತ್ತೊಂದೆಡೆ, ಶ್ರೀಲಂಕಾ ಸಂಸದ ಅನುರ ಕುಮಾರ ಡಿಸ್ಸಾನಾಯಕ ಅವರು ಅಧ್ಯಕ್ಷರ ಆಯ್ಕೆಯಾದರೆ ಮಧ್ಯಂತರ ಸರ್ಕಾರವನ್ನು ರಚಿಸುವಂತೆ ಮತ್ತು ಆರು ತಿಂಗಳೊಳಗೆ ಚುನಾವಣೆ ನಡೆಸುವಂತೆ ಕೇಳಿಕೊಂಡಿದ್ದಾರೆ.
ಇಂದು ಲಂಕಾ ಅಧ್ಯಕ್ಷರ ಚುನಾವಣೆ: ತ್ರಿಕೋನ ಸ್ಪರ್ಧೆ: ಮೂವರಲ್ಲಿ ರನಿಲ್ ಮುಂದೆ!
ವಿಕ್ರಮಸಿಂಘೆ ವಿರುದ್ಧ ಮೌನ ಪ್ರತಿಭಟನೆ: ಸಂಸತ್ತಿನಲ್ಲಿ ಅಧ್ಯಕ್ಷರ ಆಯ್ಕೆಗೆ ಮತದಾನ ನಡೆಯುತ್ತಿದ್ದರೆ, ಇನ್ನೊಂದೆಡೆ ಕೊಲಂಬೊದ ಅಧ್ಯಕ್ಷರ ಸೆಕ್ರೆಟರಿಯೇಟ್‌ನಲ್ಲಿ ಹಂಗಾಮಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ವಿರುದ್ಧ ಸಾರ್ವಜನಿಕರಿಂದ ಮೌನ ಪ್ರತಿಭಟನೆ ನಡೆಯುತ್ತಿದೆ.
Sri Lanka Presidential Election; ಲಂಕಾ ನೂತನ ಅಧ್ಯಕ್ಷ ಹುದ್ದೆಗೆ ಸಾಲಲ್ಲಿ ನಿಂತ ನಾಯಕರು!
44 ವರ್ಷಗಳಲ್ಲಿ ಮೊದಲ ಬಾರಿಗೆ ನೇರ ಚುನಾವಣೆ: 44 ವರ್ಷಗಳಲ್ಲಿ ಮೊದಲ ಬಾರಿಗೆ ಇಂದು ಶ್ರೀಲಂಕಾ ಸಂಸತ್ತಿನಲ್ಲಿ ನೇರ ಅಧ್ಯಕ್ಷೀಯ ಚುನಾವಣೆಗಳು ನಡೆದವು. ಹಂಗಾಮಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಹೊರತಾಗಿ, ಅಧ್ಯಕ್ಷೀಯ ಚುನಾವಣೆಗೆ ಡಲ್ಲಾಸ್ ಅಲ್ಹಪ್ಪರುಮ ಮತ್ತು ಅನುರ ಕುಮಾರ ಡಿಸ್ಸಾನಾಯಕ (Anura Kumara Disanayake) ಕಣದಲ್ಲಿದ್ದರು. 225 ಸದಸ್ಯ ಬಲದ ಸದನದಲ್ಲಿ ಬಹುಮತಕ್ಕೆ 113 ಸಂಸದರ ಬೆಂಬಲ ಬೇಕಿತ್ತು. ಇದಕ್ಕೆ ರನಿಲ್ ವಿಕ್ರಮಸಿಂಘೆ ಅವರಿಗೆ ಇನ್ನೂ 16 ಮತಗಳ ಅಗತ್ಯವಿತ್ತು. ವಿಕ್ರಮಸಿಂಘೆ ಅವರು ತಮಿಳು ಪಕ್ಷದ 12 ಮತಗಳಲ್ಲಿ ಕನಿಷ್ಠ 9 ಮತಗಳನ್ನು ಗಳಿಸುವ ವಿಶ್ವಾಸ ಹೊಂದಿದ್ದರು. ಹಾಗಿದ್ದರೂ ವಿಕ್ರಮಸಿಂಘೆ 134 ಮತ ಪಡೆದಿದ್ದಾರೆ.
