ನಂಬಲಸಾಧ್ಯ, ದಟ್ಟವಾದ ಕಾಡಿನಲ್ಲಿ ಸಿಂಹ, ಹುಲಿ, ಆನೆಗಳ ಜೊತೆ ಒಂಟಿಯಾಗಿ 5 ದಿನ ಕಳೆದ 8ರ ಪೋರ
ಕಾಡಿನ ನದಿ ತೀರಗಳಲ್ಲಿ ಕಡ್ಡಿಗಳಿಂದ ಗುಂಡಿ ತೋಡಿ ತಿನೊಟೆಂಡ ನೀರು ಕುಡಿದ. ಕಾಡು ಹಣ್ಣುಗಳನ್ನು ತಿಂದು ಹೊಟ್ಟೆ ತುಂಬಿಸಿಕೊಂಡ. ಇಲ್ಲಿದೆ ನೋಡಿ ನಂಬಲು ಸಾಧ್ಯವಿಲ್ಲದ ಬಾಲಕನ ರೋಚಕ ಕಥೆ
ಹರಾರೆ (ಜಿಂಬಾಬ್ವೆ): ಸಿಂಹ, ಹುಲಿ ಮತ್ತು ಆನೆಗಳು ಸೇರಿದಂತೆ ಅಪಾಯಕಾರಿ ಪ್ರಾಣಿಗಳ ನೆಲೆಯಾದ ಉತ್ತರ ಜಿಂಬಾಬ್ವೆಯ ಮಳೆಕಾಡುಗಳಲ್ಲಿ ಕಳೆದು ಹೋಗಿದ್ದ 8 ವರ್ಷದ ಬಾಲಕ, 5 ದಿನಗಳ ಬಳಿಕ ಅಚ್ಚರಿ ರೀತಿಯಲ್ಲಿ ಪತ್ತೆಯಾಗಿದ್ದಾನೆ. ಪವಾಡ ಸದೃಶವಾಗಿ ಬದುಕುಳಿದು ಬಂದಿರುವ ಬಾಲಕನನ್ನು ನೋಡಲು ಸುತ್ತಲಿನ ಜನರೆಲ್ಲರೂ ಆಗಮಿಸಿ, ಆತನ ಬಾಯಿಯಿಂದ ಅರಣ್ಯದಲ್ಲಿ ಕಳೆದ ದಿನಗಳ ಬಗ್ಗೆ ಕೇಳಿ ಆಶ್ವರ್ಯ ವ್ಯಕ್ತಪಡಿಸುತ್ತಿದ್ದರೆ. ಎಂಟು ವರ್ಷದ ಬಾಲಕ ಅರಣ್ಯದಲ್ಲಿ ಸಿಕ್ಕ ಹಣ್ಣುಗಳನ್ನು ತಿಂದು, ಹೊಳೆಯಲ್ಲಿ ಹರಿಯುತ್ತಿರುವ ನೀರು ಕುಡಿದು ಬದುಕಿ ಬಂದಿದ್ದಾನೆ.
ಡಿಸೆಂಬರ್ 27 ರಂದು, ಟಿನೊಟೆಂಡಾ ಪುದು ಎಂಬ ಹುಡುಗ ಉತ್ತರ ಜಿಂಬಾಬ್ವೆಯ ಹಳ್ಳಿಯಿಂದ ಕಾಡಿನಲ್ಲಿ ಕಳೆದುಕೊಂಡಿದ್ದನು. ಬಾಲಕ ನಾಪತ್ತೆಯಾದ ಐದು ದಿನಗಳ ನಂತರ, ಗ್ರಾಮದಿಂದ 50 ಕಿಮೀ ದೂರದಲ್ಲಿರುವ ಮಾಟುಸಡೋನಾ ರಾಷ್ಟ್ರೀಯ ಉದ್ಯಾನವನದಲ್ಲಿ ಬಾಲಕ ಪತ್ತೆಯಾಗಿದ್ದಾನೆ. ನಿರ್ಜಲೀಕರಣದಿಂದ ದುರ್ಬಲ ಸ್ಥಿತಿಯಲ್ಲಿದ್ದರೂ ಬಾಲಕ ಜೀವಂತವಾಗಿದ್ದಾನೆ. ಟಿನೋಟೆಂಡ ಕಾಡಿನಲ್ಲಿ ನದಿಗಳ ದಡದಲ್ಲಿ ಹೊಂಡ ನಿರ್ಮಿಸಿ ಕುಡಿಯುವ ನೀರು ಕಂಡುಕೊಂಡಿದ್ದಾನೆ. ಹಸಿವು ಆದಾಗ ಕಾಡಿನಲ್ಲಿದ್ದ ಹಣ್ಣುಗಳನ್ನು ತಿಂದಿದ್ದಾನೆ.
ಟಿನೋಟೆಂಡ ಪುದು ಅರಣ್ಯದಿಂದ ಜೀವಂತವಾಗಿ ಬಂದಿರೋದು ಒಂದು ರೀತಿಯ ಪವಾಡ ಎಂದು ಸ್ಥಳೀಯ ಸಂಸದ ಪಿ. ಮುತ್ಸಾ ಮುರೊಂಬೆಡ್ಜಿ ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ. ಬಾಲಕ ಕಾಡಿನಲ್ಲಿ ದಾರಿ ತಪ್ಪಿ ಐದು ದಿನಗಳ ಕಾಲ ಅಲೆದಾಡಿ ಕಾಡಿನ ನದಿ ತೀರದಲ್ಲಿ ಸುಸ್ತಾಗಿ ಬಿದ್ದಿದ್ದಾನೆ ಎಂದು ಮುರೊಂಬೆಡ್ಸಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ನಿಲ್ಲಿಸಿ ನಿಲ್ಲಿಸಿ, ಸ್ವಲ್ಪದರಲ್ಲಿಯೇ ತಪ್ಪಿಂದ ಮತ್ತೊಂದು ವಿಮಾನ ದುರಂತ; ಶಾಕಿಂಗ್ ವಿಡಿಯೋ ನೋಡಿ
ಮಗು ಮನೆಗೆ ಹೋಗುವ ಶಬ್ದ ಕೇಳುವಂತೆ ಪ್ರತಿ ರಾತ್ರಿ ಡ್ರಮ್ ಬಾರಿಸಿದ ರಕ್ಷಣಾ ಕಾರ್ಯಕರ್ತರನ್ನು ಮತ್ತು ನ್ಯಾಮಿನ್ಯಾಮಿ ಸಮುದಾಯವನ್ನು ಅಭಿನಂದಿಸಿದ ಉದ್ಯಾನವನದ ರೇಂಜರ್‌ಗಳಿಗೆ ಸಂಸದರು ಧನ್ಯವಾದ ಅರ್ಪಿಸಿದರು. ಟಿನೊಟೆಂಡಾವನ್ನು ಹುಡುಕಲು ಸಹಾಯ ಮಾಡಿದ ಮತ್ತು ಸುರಕ್ಷಿತವಾಗಿ ಮನೆಗೆ ಬರುವಂತೆ ಮಾರ್ಗದರ್ಶನ ನೀಡಿದ ದೇವರಿಗೂ ಸಂಸದ ಪಿ. ಮುತ್ಸಾ ಮುರೊಂಬೆಡ್ಜಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ವರದಿಗಳ ಪ್ರಕಾರ, ಮಾಟುಸಡೋನಾ ಗೇಮ್ ಪಾರ್ಕ್‌ನಲ್ಲಿ ಸುಮಾರು 40 ಸಿಂಹಗಳಿವೆ. ಆಫ್ರಿಕಾದಲ್ಲಿ ಅತಿ ಹೆಚ್ಚು ಸಿಂಹಗಳನ್ನು ಹೊಂದಿರುವ ಉದ್ಯಾನವನಗಳಲ್ಲಿ ಇದೂ ಒಂದಾಗಿದೆ.
ಇದನ್ನೂ ಓದಿ: ಆಗಸದಿಂದ ಬಿತ್ತು ದೊಡ್ಡ ಲೋಹದ ಉಂಗುರ, ಗ್ರಾಮಸ್ಥರಲ್ಲಿ ಹೆಚ್ಚಿದ ಏಲಿಯನ್ ಆತಂಕ