ಒಂದು ಡೆಲ್ಟಾ ವಿಮಾನ ಟೇಕಾಫ್‌ಗೆ ತಯಾರಾಗುತ್ತಿದ್ದಾಗ, ಅದೇ ರನ್‌ವೇನಲ್ಲಿ ಗೊಂಜಾಗಾ ಪುರುಷರ ಬಾಸ್ಕೆಟ್‌ಬಾಲ್ ತಂಡವನ್ನು ಹೊತ್ತ ಖಾಸಗಿ ವಿಮಾನವೂ ಟೇಕಾಫ್‌ಗೆ ಪ್ರಯತ್ನಿಸಿತು. ಏರ್ ಟ್ರಾಫಿಕ್ ಕಂಟ್ರೋಲರ್‌ಗಳ ಸಮಯೋಚಿತ ಮಧ್ಯಪ್ರವೇಶದಿಂದ ದುರಂತ ತಪ್ಪಿದೆ.
ಲಾಸ್ ಏಂಜಲಿಸ್: ಖಜಕಿಸ್ತಾನ್ ಹಾಗೂ ದಕ್ಷಿಣ ಕೊರಿಯಾದಲ್ಲಿ ಭೀಕರ ವಿಮಾನ ದುರಂತಗಳು ಸಂಭವಿಸಿ 200ಕ್ಕೂ ಹೆಚ್ಚು ಜನರನ್ನು ಬಲಿಪಡೆದ ಬೆನ್ನಲ್ಲೇ, ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳೆರದು ಮುಖಾಮುಖಿಯಾಗಿ ಡಿಕ್ಕಿಯಾಗುವುದು ಸ್ವಲ್ಪದರಲ್ಲಿಯೇ ತಪ್ಪಿದೆ. ಏರ್ ಟ್ರಾಫಿಕ್ ಕಂಟ್ರೋಲರ್ ಅವರ ಸಮಯೋಚಿತ ಮಧ್ಯಪ್ರವೇಶದ ಕಾರಣ ದುರಂತ ತಪ್ಪಿದೆ.
ಏನಾಯಿತು?:
ಡೆಲ್ಟಾ 471 ವಿಮಾನ ಟೇಕಾಫ್‌ಗೆ ತಯಾರಿ ನಡೆಸುತ್ತಿದ್ದ ವೇಳೆ ಅದೇ ರನ್‌ವೇನಲ್ಲಿ ಗೊಂಜಾಗಾ ಪುರುಷರ ಬಾಸ್ಕೆಟ್ ಬಾಲ್ ತಂಡವನ್ನು ಹೊತ್ತ ಖಾಸಗಿ (ಚಾರ್ಟೆಡ್) ವಿಮಾನವೂ ಟೇಕಾಪ್‌ಗೆ ಪ್ರಯತ್ನಿಸಿದೆ. ಈ ವೇಳೆ ಎಟಿಸಿ ಸಿಬ್ಬಂದಿ, ‘ನಿಲ್ಲಿಸಿ ನಿಲ್ಲಿಸಿ’ ಎಂದು ಸಂದೇಶ ರವಾನಿಸಿದ್ದಾರೆ. ಹೀಗಾಗಿ ಎರಡೂ ವಿಮಾನಗಳು ತಕ್ಷಣವೇ ಸಂಚಾರ ಸ್ಥಗಿತಗೊಳಿಸಿದ ಕಾರಣ ಅವಘಡ ತಪ್ಪಿದೆ.
'ನನ್ನ ಇಷ್ಟು ವರ್ಷಗಳಲ್ಲಿ ವಿಮಾನಗಳನ್ನು ವೀಕ್ಷಿಸುವಾಗ, ಏರ್ ಟ್ರಾಫಿಕ್ ಕಂಟ್ರೋಲರ್ 'ಸ್ಟಾಪ್, ಸ್ಟಾಪ್, ಸ್ಟಾಪ್' ಎಂದು ಕೂಗುವುದನ್ನು ನಾನು ಕೇಳಿಲ್ಲ ಎಂದು ವಿಮಾನ ನಿಲ್ದಾಣದ ಕಂಟ್ರೋಲರ್ ಅಧಿಕಾರಿ ಹೇಳಿದ್ದಾರೆ.
ಇದನ್ನೂ ಓದಿ:ಏನಾಯ್ತು? ನಾನೇಕೆ ಇಲ್ಲಿದ್ದೇನೆ? ಕೊರಿಯಾ ವಿಮಾನ ದುರಂತದಲ್ಲಿ ಬದುಕುಳಿದವರ ಆಘಾತಕಾರಿ ಅನುಭವ
