Asianet Suvarna News Asianet Suvarna News

ಲಾಕ್‌ಡೌನ್‌ನಿಂದ ಭೂಕಂಪನ ಪ್ರಮಾಣ ಕಡಿಮೆ; ಅಧ್ಯಯನ ವರದಿ ಬಹಿರಂಗ!

ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಬಹುತೇಕರಿಗೆ ಸಂಕಷ್ಟ ತಂದೊಡ್ಡಿದೆ. ಆದರೆ ಪರಿಸರ, ಪ್ರಾಣಿ-ಪಕ್ಷಿಗಳಿಗೆ ಲಾಕ್‌ಡೌನ್ ಮಾಡಿದ ಉಪಕಾರ ಅಷ್ಟಿಷ್ಟಲ್ಲ. ಮಾಲಿನ್ಯ ತುಂಬಿದ್ದ ಪರಿಸರ ನಳನಳಿಸಿತ್ತು. ಕಾಡು ಪ್ರಾಣಿಗಳು ಸ್ವಚ್ಚಂದವಾಗಿ ಓಡಾಡಲು ಆರಂಭಿಸಿತು. ಲಾಕ್‌ಡೌನ್‌ನಿಂದ ಮತ್ತೊಂದು ಉಪಯೋಗವಾಗಿದೆ. ಭೂಕಂಪನದ ಪ್ರಮಾಣವೂ ಕಡಿಮೆಯಾಗಿದ ಅನ್ನೋ ಅಧ್ಯಯನ ವರದಿ ಹೊರಬಿದ್ದಿದೆ.

Earth vibrations dropped by an average of 50 percentage due to corona lockdown
Author
Bengaluru, First Published Jul 24, 2020, 5:27 PM IST

ನವದೆಹಲಿ(ಜು.24): ಕೊರೋನಾ ವೈರಸ್ ನಿಯಂತ್ರಣಕ್ಕೆ ಭಾರತ  2 ತಿಂಗಳ ಲಾಕ್‌ಡೌನ್ ಹೇರಿತ್ತು. ಇತರ ರಾಷ್ಟ್ರಗಳು ಇದಕ್ಕೆ ಹೊರತಾಗಿರಲಿಲ್ಲ. ವೈರಸ್ ನಿಯಂತ್ರಣಕ್ಕೆ ತಜ್ಞರು ನೀಡಿದ ಸಲಹೆಯಂತೆ ಬಹುತೇಕ ರಾಷ್ಟ್ರಗಳು ಲಾಕ್‌ಡೌನ್ ಹೇರಿತ್ತು. ಲಾಕ್‌ಡೌನ್‌ನಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದರು ನಿಜ. ಆದರೆ ಪಕೃತಿ ನಳನಳಸಿತ್ತು. ಇದೇ ಲಾಕ್‌ಡೌನ‌್‌ನಿಂದ ಭೂಮಿ ಕಂಪಿಸುವ ಪ್ರಮಾಣ ಶೇಕಡಾ 50 ರಷ್ಟು ಕಡಿಮೆಯಾಗಿದೆ ಎಂದು ಅಧ್ಯಯನ ವರದಿ ಹೇಳುತ್ತಿದೆ.

ಕೊರೋನಾ, ಚಂಡಮಾರುತದ ನಂತರ ಮತ್ತೊಂದು ಆಘಾತ, ಮುಂಬೈನಲ್ಲಿ ಭೂಕಂಪನ

ಭೂಕಂಪನ, ಜ್ವಾಲಾಮುಖಿ ಸೇರಿದಂತೆ ಹಲವು ಕಾರಣಗಳಿಗೆ ಭೂಮಿ ಕಂಪನದ ಮೂಲಕ ಸೂಚನೆ ನೀಡುತ್ತದೆ.  ಲಾಕ್‌ಡೌನ್‌ನಿಂದ ಅನಾಹುತಕ್ಕೆ ಭೂಮಿ ನೀಡುವ ಕಂಪನ ಸೂಚನೆ ಪ್ರಮಾಣ ಕಡಿಮೆಯಾಗಿದೆ ಎಂದು ಅಧ್ಯಯನ ವರದಿ ಹೇಳುತ್ತಿದೆ. ಅಂತಾರಾಷ್ಟ್ರೀಯ ಸೆಸ್ಮೆೋಮೀಟರ್ ನೆಟ್‌ವರ್ಕ್ ನಡೆಸಿದ ಅಧ್ಯಯನದಲ್ಲಿ ಈ ಮಾಹಿತಿ ಬಹಿರಂಗವಾಗಿದೆ.

ಭೂಕಂಪನವಾದಾಗ ಏನು ಮಾಡಬೇಕು; ಇಲ್ಲಿದೆ ವಿಪತ್ತು ನಿರ್ವಹಣೆಯ ಸರಳ ಸೂತ್ರ !

ಮಾರ್ಚ್, ಎಪ್ರಿಲ್, ಮೇ ತಿಂಗಳಲ್ಲಿ ಭೂಮಿ ಕಂಪಿಸುವ ಪ್ರಮಾಣ ಕಡಿಮೆಯಾಗಿದೆ. ಭೂಮಿ ಪ್ರತಿ ದಿನವೂ ಕಂಪಿಸುತ್ತದೆ. ಇದು ಸಹಜ. ಆದರೆ ಕೆಲವು ಕಂಪನಗಳ ತೀವ್ರ ಹೆಚ್ಚಾದರೆ ಅನಾಹುತ ಸಂಭವಿಸಲಿದೆ. ಸದ್ಯ ಭೂಮಿ ಉತ್ತಮ ಕಂಪನ ನೀಡುತ್ತಿದೆ. ಇದರಿಂದ ಯಾವುದೇ ಅನಾಹುತವಿಲ್ಲ ಎಂದು ಅಧ್ಯಯನ ವರದಿ ಹೇಳುತ್ತಿದೆ.

117 ದೇಶಗಳ 268 ಸ್ಟೇಶನ್‌ಗಳಿಂದ ಮಾಹಿತಿ ಸಂಗ್ರಹಿಸಿ ಅಧ್ಯನಯ ನಡೆಸಲಾಗಿದೆ. ಲಾಕ್‌ಡೌನ್ ಆರಂಭಿಸಿದ ಚೀನಾದಿಂದ ಆರಂಭಗೊಂಡ ಅಧ್ಯಯನ, ಯೂರೋಪ್ ಸೇರಿದಂತೆ 117 ರಾಷ್ಟ್ರಗಳಲ್ಲಿ ಅಧ್ಯಯನ ನಡೆಸಲಾಗಿದೆ. 

Follow Us:
Download App:
  • android
  • ios