ದುಬೈ(ಫೆ.24): ಬಿರಿಯಾನಿ ಅಂದ್ರೆ ಬಹುತೇಕ ಎಲ್ಲರೂ ಇಷ್ಟಪಡುತ್ತಾರೆ. ಅದು ಹೇಗೇ ಇರಲಿ, ಜನರು ಬಹಳ ಇಷ್ಟಪಟ್ಟು ತಿನ್ನುತ್ತಾರೆ. ಸದ್ಯಕ್ಕೀಗ ಸೋಶಿಯಲ್ ಮೀಡಿಯಾದಲ್ಲಿ ಬಿರಿಯಾನಿಯೊಂದು ಭಾರೀ ಸದ್ದು ಮಾಡುತ್ತಿದೆ. ಇನ್ನು ಲಾಕ್‌ಡೌನ್ ಸಂದರ್ಭದಲ್ಲೂ ಅತಿ ಹೆಚ್ಚು ಆರ್ಡರ್‌ ಮಾಡಲಾದ ಆಹಾರದ ಪಟ್ಟಿಯಲ್ಲಿ ಬಿರಿಯಾನಿ ಮೊದಲ ಸ್ಥಾನ ಪಡೆದುಕೊಂಡಿದೆ. ಸೋಶಿಯಲ್ ಮಿಡಿಯಾದಲ್ಲೂ ಬಿರಿಯಾನಿ ಸಂಬಂಧಿತ ಸ್ಟೋರೀಸ್ ವೈರಲ್ ಆಗುತ್ತವೆ. ಆದರೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಬಿರಿಯಾನಿ ಮಾತ್ರ ಅಚ್ಚರಿಗೀಡಾಗುವಂತೆ ಮಾಡಿದೆ. ಇದರ ಬೆಲೆ ಎಷ್ಟು ದುಬಾರಿಯೋ, ಅಷ್ಟೇ ವಿಶೇಷವಾಗಿದೆ ಇದರ ಅಲಂಕಾರ. 

ಹೌದು ಇದು ವಿಶ್ವದ ಅತೀ ದುಬಾರಿ ಬಿರಿಯಾನಿಯಾಗಿದೆ. ಜಗತ್ತಿನಲ್ಲಿ ವಿಭಿನ್ನ ಬಗೆಯ Paassion ಇರುವ ವ್ಯಕ್ತಿಗಳಿದ್ದಾರೆ, ಇಂತಹವರನ್ನೇ ಗಮನದಲ್ಲಿಟ್ಟುಕೊಂಡು ದುಬೈನ ಪ್ರಸಿದ್ಧ ರೆಸ್ಟೋರೆಂಟ್ ಒಂದು ಗೋಲ್ಡ್ ರಾಯಲ್ ಬಿರಿಯಾನಿಯನ್ನು ಲಾಂಚ್ ಮಾಡಿದೆ. ವರದಿಯನ್ವಯ DIFCನಲ್ಲಿರುವ  Bombay Borough ರೆಸ್ಟೋರೆಂಟ್ ವಿಶ್ವದ ದುಬಾರಿ ಬಿರಿಯಾನಿಯನ್ನು ತನ್ನ ಮೆನುವಿನಲ್ಲಿಟ್ಟು ಎಲ್ಲರನ್ನೂ ಅಚ್ಚರಿಗಗೀಡು ಮಾಡಿದೆ. ಒಂದು ಪ್ಲೇಟ್‌ ಬಿರಿಯಾನಿ ಬೆಲೆ ಬರೋಬ್ಬರಿ 20000 ರೂ. ಆಗಿದೆ.

ಇನ್ನು ಈ ಬಿರಿಯಾನಿಯನ್ನು 23 ಕ್ಯಾರೆಟ್‌ ಚಿನ್ನದಿಂದ ಗಾರ್ನಿಶ್ ಮಾಡಲಾಗುತ್ತದೆ. ಹೀಗಾಗೇ ಇದರ ಹೆಸರು ರಾಯಲ್ ಗೋಲ್ಡ್ ಬಿರಿಯಾನಿ ಎಂದಿಡಲಾಆಗಿದೆ. ಈ ವಿಶೇಷ ಬಿರಿಯಾನಿಯಲ್ಲಿ ಕಾಶ್ಮೀರಿ ಮಟನ್ ಕಬಾಬ್, ಪುರಾನಿ ದಿಲ್ಲಿ ಮಟಟನ್ ಚಾಪ್ಸ್, ರಜಪೂತ್‌ ಚಿಕನ್ ಕಬಾಬ್, ಮುಘಲೈ ಕೋಫ್ತಾ ಹಾಗೂ ಮಲಾಯಿ ಚಿಕನ್ ಕೂಡಾ ಇದೆ. ಈ ಬಿರಿಯಾನಿ ಜೊತೆ ರಯ್ತಾ, ಕರಿ ಹಾಗೂ ಸಾಸ್ ಕೂಡಾ ನೀಡಲಾಗುತ್ತದೆ. ಇನ್ನು ಈ ಬಿರಿಯಾನಿ ಆರ್ಡರ್ ಮಾಡಿದವರಿಗೆ 45 ನಿಮಿಷದಲ್ಲಿ ಬಿರಿಯಾನಿ ಸರ್ವ್ ಮಾಡಲಾಗುತ್ತದೆ.

ಅರೆ 20,000 ಸಾವಿರ ರೂ. ಬೆಲರೆ ಬಾಳುವ ಈ ಬಿರಿಯಾನಿಯನ್ನು ಒಬ್ಬರೇ ತಿನ್ನಬೇಕಾಗುತ್ತದಾ ಎಂಬ ಪ್ರಶ್ನೆ ನಿಮ್ಮದಾ? ಅಲ್ವೇ ಅಲ್ಲ. ರೆಸ್ಟೋರೆಂಟ್ ಆರು ಮಂದಿ ತಿನ್ನಬುದಾದಷ್ಟಟು ಬಿರಿಯಾನಿಯನ್ನು ನೀಡುತ್ತದೆ. ಕೇಸರ್‌ನಿಂದ ಸಿಂಗರಿಸಲಾದ ಈ ಬಿರಿಯಾಣಿ ನೋಡಲು ಇಷ್ಟು ಚೆನ್ನಾಗಿದೆ ಎಂದಾದರೆ, ಇದನ್ನು ತಿನ್ನದೆಯೇ ಅದೆಷ್ಟು ಸ್ವಾದಿಷ್ಟವಾಗಿರಬಹುದೆಂದು ಊಹಿಸಬಹುದಾಗಿದೆ.