ಲಂಡನ್‌ನಲ್ಲಿ ಜನ ಸಾಮಾನ್ಯರಂತೆ ಓಡಾಡುತ್ತಿರುವ ದುಬೈ ರಾಜಕುಮಾರನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಫಜ್ಜಾ ಎಂದೇ ಜನಪ್ರಿಯವಾಗಿರುವ ದುಬೈ ರಾಜಕುಮಾರ ಶೇಕ್‌ ಹಮ್ದನ್‌ ಬಿನ್ ಮೊಹಮ್ಮದ್‌ ಅಲ್ ಮಕ್ಟಮ್‌ ಅವರು ಲಂಡನ್‌ನಲ್ಲಿ ಗೆಳೆಯರು ಹಾಗೂ ಕುಟುಂಬದೊಂದಿಗೆ ರಜಾ ದಿನವನ್ನು ಎಂಜಾಯ್ ಮಾಡುತ್ತಿದ್ದಾರೆ. ಲಂಡನ್‌ನಲ್ಲಿ ಜನ ಸಾಮಾನ್ಯರಂತೆ ಓಡಾಡುತ್ತಿರುವ ದುಬೈ ರಾಜಕುಮಾರನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಫೊಟೋವೊಂದರಲ್ಲಿ ದುಬೈ ರಾಜಕುಮಾರ ಸಾಮಾನ್ಯರಂತೆ ಲಂಡನ್‌ನ ಅಂಡರ್‌ಗೌಂಡ್‌ ಮೆಟ್ರೋದಲ್ಲಿ ನಿಂತುಕೊಂಡು ಪಯಣಿಸುತ್ತಿದ್ದಾರೆ. ಸಾಮಾನ್ಯ ಜೀವನವನ್ನು ಎಂಜಾಯ್ ಮಾಡಲು ಬಯಸಿದ ರಾಜಕುಮಾರ ಫ್ಯಾನ್ಸಿ ರೈಡ್‌ಗಾಗಿ ಮೆಟ್ರೋ ಏರಿದ್ದು, ಇವರ ಸಾಮಾನ್ಯ ಲುಕ್ ನೋಡಿ ಮೆಟ್ರೋದಲ್ಲಿದ್ದ ಪರಯಣಿಗರು ಕೂಡ ಇವರನ್ನು ಸಾಮಾನ್ಯರು ಎಂದು ಭಾವಿಸಿ ಸುಮ್ಮನಾಗಿದ್ದಾರೆ. 

ಮೆಟ್ರೋ ರೈಲಿನ ಕಂಪಾರ್‌fಮೆಂಟ್‌ನಲ್ಲಿ ತನ್ನ ಸ್ನೇಹಿತರೊಂದಿಗೆ ಜನರ ಗುಂಪಿನ ನಡುವೆ ಶೇಕ್‌ ಹಮ್ದನ್‌ ನಿಂತುಕೊಂಡು ಪ್ರಯಾಣಿಸುತ್ತಿದ್ದಾರೆ. ನಾವು ಬಹಳಷ್ಟು ದೂರ ಕ್ರಮಿಸಬೇಕಿದೆ ಆದರೆ ಸ್ನೇಹಿತ ಬದ್ರ್‌ಗೆ ಈಗಾಗಲೇ ಬೋರಾಗಿದೆ ಎಂದು ಬರೆದು ಅವರು ತಮ್ಮ ಫೋಟೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಲಂಡನ್ ಅಂಡರ್‌ಗ್ರೌಂಡ್ ಮೆಟ್ರೋ ಕ್ಷಿಪ್ರ ಸಾರಿಗೆ ವ್ಯವಸ್ಥೆಯಾಗಿದ್ದು, ಇದು ಗ್ರೇಟರ್‌ ಲಂಡನ್‌ ಹಾಗೂ ಅದಕ್ಕೆ ಹೊಂದಿಕೊಂಡಿರುವ ಇಂಗ್ಲೆಂಡ್‌ನ ಕೆಲವು ಸಮೀಪದ ಪ್ರದೇಶಗಳಾದ ಬಂಕಿಂಗ್‌ಹ್ಯಾಮ್‌ಶೈರ್‌, ಇಶೆಕ್ಸ್‌ ಹಾಗೂ ಹಾರ್ಟ್‌ಫೋರ್ಡ್‌ಶೈರ್‌ಗೆ ಕ್ಷಿಪ್ರ ಸಂಪರ್ಕವನ್ನು ಒದಗಿಸುತ್ತವೆ. 

View post on Instagram

ಈ ಮೆಟ್ರೋದಲ್ಲಿ ಸಂಚರಿಸುತ್ತಿರುವ ಫೋಟೋವನ್ನು ವಾರದ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಲಾಗಿದ್ದು, ಐದು ಲಕ್ಷಕ್ಕೂ ಹೆಚ್ಚು ಜನ ಈ ಫೋಟೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸಾಕಷ್ಟು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಈ ಲಂಡನ್‌ ಟ್ಯೂಬ್ ಎಂದು ಕರೆಯಲ್ಪಡುವ ಈ ಅಂಡರ್‌ಗೌಂಡ್ ಮೆಟ್ರೋ ವೈವಿಧ್ಯದಿಂದ ಕೂಡಿದೆ ಎಂದು ಒಬ್ಬರು ಈ ಫೋಟೋಗೆ ಕಾಮೆಂಟ್ ಮಾಡಿದ್ದಾರೆ.

ರಸ್ತೆಯಲ್ಲಿ ಬಿದ್ದ ಇಟ್ಟಿಗೆ ಬದಿಗಿಟ್ಟ ಫುಡ್ ಡೆಲಿವರಿ ಬಾಯ್, ದುಬೈ ರಾಜನಿಂದ ಭರ್ಜರಿ ಗಿಫ್ಟ್!

ಲಂಡನ್ ಟ್ಯೂಬ್ ಟ್ರಾವೆಲಿಂಗ್ ತುಂಬಾ ಸ್ಪೂರ್ತಿದಾಯಕವಾದುದು, ಇಲ್ಲಿ ನಿಮಗೆ ಹಲವು ವೈವಿಧ್ಯಗಳು ಹಾಗೂ ಮಾನವ ಕತೆಗಳು ಕಾಣಲು ಸಿಗುತ್ತವೆ. ಈ ಬಡ ಜನರಿಗೆ ತಾವು ಯಾರೊಂದಿಗೆ ಪ್ರಯಾಣಿಸುತ್ತೇವೆ ಎಂಬುದರ ಅರಿವಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಶೇಕ್ ಹಮ್ದನ್‌ ಅವರು 2008ರಿಂದ ದುಬೈನ ರಾಜಕುಮಾರ ಆಗಿದ್ದು, 2006ರಿಂದ 2008ರವರೆಗೆ ದುಬೈನ ಉಪ ಆಡಳಿತಗಾರರಾಗಿ ಕೆಲಸ ಮಾಡಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ ಸಾಕಷ್ಟು ಆಕ್ಟಿವ್ ಆಗಿರುವ ಶೇಕ್ ಹಮ್ದನ್, ಇಲ್ಲಿ ತಮಗೆ ಕ್ರೀಡೆ, ಕವನ, ಛಾಯಾಗ್ರಹಣ, ಹಾಗೂ ಪ್ರಾಣಿಗಳ ವಿಚಾರದಲ್ಲಿ ಆಸಕ್ತಿ ಇದೆ ಎಂದು ಬರೆದುಕೊಂಡಿದ್ದಾರೆ. 

29 ನಿಮಿಷ ವೃಶ್ಚಿಕಾಸನದಲ್ಲಿ ನಿಂತು ವಿಶ್ವ ದಾಖಲೆ ನಿರ್ಮಿಸಿದ ತರುಣ