ಕರಾವಳಿಯಲ್ಲಿಅತೀ ಅಪರೂಪದ 'ಡೂಮ್ಸ್ ಡೇ ಫಿಶ್' ಪತ್ತೆ: ಇದಕ್ಕೂ ಪ್ರಾಕೃತಿಕ ವಿಕೋಪಕ್ಕೂ ಇದೆ ಸಂಬಂಧ!
ಪ್ರಪಂಚದ ವಿವಿಧೆಡೆ ಡೂಮ್ಸ್ ಡೇ ಫಿಶ್ ಎಂದು ಕರೆಯಲ್ಪಡುವ ಅಪರೂಪದ ಸಮುದ್ರ ಪ್ರಾಣಿಯೊಂದು ಆಸ್ಟ್ರೇಲಿಯಾದ ಕರಾವಳಿಯಲ್ಲಿ ಕಾಣಿಸಿಕೊಂಡಿದೆ. ಇದನ್ನು ಜಗತ್ತಿನ ವಿವಿಧ ಪ್ರದೇಶಗಳಲ್ಲಿ ಡೂಮ್ಸ್ ಡೇ ಫಿಶ್ ಎಂದೇ ಕರೆಯುತ್ತಾರೆ. ಅದೇಕೆ ಎಂಬುದನ್ನು ಮುಂದೆ ಓದಿ..
ಪ್ರಪಂಚದ ವಿವಿಧೆಡೆ ಡೂಮ್ಸ್ ಡೇ ಫಿಶ್ ಎಂದು ಕರೆಯಲ್ಪಡುವ ಅಪರೂಪದ ಸಮುದ್ರ ಪ್ರಾಣಿಯೊಂದು ಆಸ್ಟ್ರೇಲಿಯಾದ ಕರಾವಳಿಯಲ್ಲಿ ಕಾಣಿಸಿಕೊಂಡಿದೆ. ಇದನ್ನು ಜಗತ್ತಿನ ವಿವಿಧ ಪ್ರದೇಶಗಳಲ್ಲಿ ಡೂಮ್ಸ್ ಡೇ ಫಿಶ್ ಎಂದೇ ಕರೆಯುತ್ತಾರೆ. ಅದೇಕೆ ಎಂಬುದನ್ನು ಮುಂದೆ ಓದಿ..
ಈ ಅಪರೂಪದ ಸಮುದ್ರಜೀವಿಯನ್ನು ಒರಾ ಫಿಶ್ ಎಂದು ಕೂಡ ಕರೆಯುತ್ತಾರೆ. ಇದು ಕರಾವಳಿ ತೀರದಲ್ಲಿ ಕಾಣಲು ಸಿಗುವುದು ತೀರಾ ಅಪರೂಪ ಆದರೂ ಆಸ್ಟ್ರೇಲಿಯಾದ ತಿವಿ ದ್ವೀಪದ ಸಮುದ್ರ ಸಾಹಸಿಯಾದ ಕರ್ಟಿಸ್ ಫಿಟರ್‌ಸನ್ ಅವರಿಗೆ ಈ ಒರಾಫಿಶ್ ಕಾಣಲು ಸಿಕ್ಕಿದ್ದು, ಅವರು ಅದನ್ನು ಕೈಯಲ್ಲಿ ಹಿಡಿದುಕೊಂಡು ನಿಂತಿರುವ ಫೋಟೋವನ್ನು ಆಸ್ಟ್ರೇಲಿಯಾ ಟಿವಿ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದೆ. ಈ ತಿವಿ ದ್ವೀಪವೂ ಆಸ್ಟ್ರೇಲಿಯಾದ ಉತ್ತರದ ಪ್ರದೇಶವಾದ ಡಾರ್ವಿನ್‌ನಿಂದ 80 ಕಿಲೋ ಮೀಟರ್ ದೂರದಲ್ಲಿದೆ.
ಆಸ್ಟ್ರೇಲಿಯಾದ ಮ್ಯೂಸಿಯಂ ಪ್ರಕಾರ ಈ ಒರಾ ಫಿಶ್‌ಗಳು ಉಷ್ಣವಲಯದ ಪ್ರದೇಶಗಳಲ್ಲಿ 20 ಮೀಟರ್‌ನಿಂದ 200 ಮೀಟರ್ ಅಳದಲ್ಲಿ ವಾಸ ಮಾಡುತ್ತವೆ. ಇವುಗಳು ಸುಮಾರು 9 ಮೀಟರ್‌ನಷ್ಟು ಉದ್ದ ಬೆಳೆಯುತ್ತವೆ. ಆದರೆ ಮೇಲ್ಮೈನಿಂದ ನೋಡಿದಾಗ ಹಾವುಗಳಂತೆ ಕಾಣಿಸುತ್ತವೆ.
ಕೆಲವೊಮ್ಮೆ ಇವು ಸಮುದ್ರಗಳ ಮೇಲೈನಲ್ಲಿ ಕಾಣಿಸುತ್ತವೆ. ಸ್ಥಳೀಯವಾಗಿ ಸಮುದ್ರ ಸರ್ಪಗಳ ಕತೆಗೆ ಕಾರಣವಾಗಿವೆ. ಆದರೂ ಈ ಒರಾಫಿಶ್‌ಗಳು ಕಾಣಲು ಸಿಗುವುದು ತೀರಾ ಅಪರೂಪ, ಹಾಗೂ ವಿರಳಾತೀ ವಿರಳ. ಅಪರೂಪವಾಗಿದ್ದರು. ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ ಅವುಗಳು ಕಾಣಲು ಸಿಕ್ಕ ಬಗ್ಗೆ ವರದಿಯಾಗಿವೆ. ಅದರಂತೆ ಇತ್ತೀಚೆಗೆ ಅದು ಕ್ಯಾಲಿಫೋರ್ನಿಯಾ ಬೀಚ್‌ನಲ್ಲಿ ಕಾಣಿಸಿದ್ದನ್ನು ಕೆಲವರು ನೋಡಿದ ಬಗ್ಗೆ ವರದಿ ಆಗಿತ್ತು. 1901ರಿಂದಲೂ ಈ ಒರಾ ಫಿಶ್ ಕೇವಲ 20 ಬಾರಿ ಮಾತ್ರ ಕಾಣಲು ಸಿಕ್ಕಿದೆ ಎಂದು ಸ್ಯಾನ್ ಡಿಯಾಗೋದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿರುವ ಸಮುದ್ರಶಾಸ್ತ್ರ ಸಂಸ್ಥೆಯೂ ಹೇಳಿದೆ.
ಅಮೆರಿಕಾದ ಸಮುದ್ರ ತೀರದಲ್ಲಿ ಕಾಣಿಸಿಕೊಂಡ ಇದು ಕೇವಲ 12 ಫೀಟ್ ಎಂದರೆ 3.7 ಮೀಟರ್ ಉದ್ದವನ್ನು ಹೊಂದಿತ್ತು. ಇದನ್ನು ಇಂದಿಗೂ ಆಕರ್ಷಕ ಅನ್ವೇಷಣೆ ಎಂದೇ ಪರಿಗಣಿಸಲಾಗುತ್ತದೆ. ಡೂಮ್ಸ್ ಡೇ ಫಿಶ್ ಎಂದೇ ಕರೆಯಲ್ಪಡುವ ಈ ಒರ ಫಿಶ್ ಕ್ಯಾಲಿಫೋರ್ನಿಯಾದಲ್ಲಿ ಕಾಣಿಸಿಕೊಂಡ ಎರಡು ದಿನಗಳ ನಂತರ ಲಾಸ್ ಏಂಜಲೀಸ್‌ನಲ್ಲಿ ಭೂಕಂಪನ ಸಂಭವಿಸಿತ್ತು. ಆದರೆ ಸಮುದ್ರದಾಳದಲ್ಲಿ ವಾಸ ಮಾಡುವುದರಿಂದ ಅವುಗಳು ಕಾಣಲು ಸಿಗುವುದು ಅತಿ ಅಪರೂಪ. ಇವುಗಳು ಬೆಳ್ಳಿಯ ರಿಬ್ಬನ್‌ನಂತೆ ಕಾಣಿಸುತ್ತವೆ.
ಈ ಮೀನನ್ನು ಡೂಮ್ಸ್‌ಡೇ ಫಿಶ್ ಎಂದು ಏಕೆ ಕರೆಯುತ್ತಾರೆ?
ಈ ಅಪರೂಪದ ಸಮುದ್ರ ಜೀವಿ ಕಾಣಿಸಿಕೊಂಡಾಗಲೆಲ್ಲಾ ಅಲ್ಲಿ ಎಲ್ಲಾದರೂ ಏನಾದರೊಂದು ಪ್ರಾಕೃತಿಕ ವಿಕೋಪದಂತಹ ಕೆಟ್ಟ ಅನಾಹುತ ಸಂಭವಿಸಿದೆಯಂತೆ ಹೀಗಾಗಿ ಈ ಸಮುದ್ರ ಜೀವಿ ಭೂಕಂಪನ ಅಥವಾ ಇನ್ಯಾವುದೋ ಇದೇ ರೀತಿಯ ಅನಾಹುತವನ್ನು ತರುತ್ತದೆ ಎಂದು ಪ್ರಪಂಚದ ಕೆಲ ಪ್ರದೇಶಗಳ ಜನ ನಂಬುತ್ತಾರೆ.
ಫ್ಲೋರಿಡಾ ಮ್ಯೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿ ಪ್ರಕಾರ, ಜಪಾನಿನ ಜಾನಪದವು ಈ ಸಮುದ್ರ ಜೀವಿಯನ್ನು ದುರಂತದ ಮುನ್ಸೂಚನೆ ಎಂದು ಕರೆಯುತ್ತದೆ ಮತ್ತು ಸಮುದ್ರ ರಾಕ್ಷಸರ ಪ್ರಾಚೀನ ಕಥೆಗಳಿಗೂ ಇವುಗಳಿಗೂ ಸಂಪರ್ಕ ಕಲ್ಪಿಸಲಾಗಿದೆ. ಹಾಗೆಯೇ ಕ್ಯಾಲಿಫೋರ್ನಿಯಾದಲ್ಲೂ ಈ ಮೀನು ಕಾಣಿಸಿಕೊಂಡ ಎರಡು ದಿನಗಳ ನಂತರ ಅಲ್ಲಿ ಭೂಕಂಪನ ಸಂಭವಿಸಿತ್ತು. ಒರಾ ಫಿಶ್ ಆಗಸ್ಟ್ 10ರಂದು ಕಾಣಿಸಿಕೊಂಡಿದ್ದಾರೆ ಆಗಸ್ಟ್ 12ರಂದು ಭೂಕಂಪನ ಸಂಭವಿಸಿತ್ತು. ಇದು ಜನರ ನಂಬಿಕೆಯಷ್ಟೇ ಅದಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದು ವಿಜ್ಞಾನಿಗಳು ಹೇಳುತ್ತಾರೆ.