ನ್ಯೂಯಾರ್ಕ್(ಜ.19):  ನ್ಯೂಯಾರ್ಕ್ ನಗರವನ್ನು ಬಿರುಗಾಳಿಗಳಿಂದ ರಕ್ಷಿಸಲು ಗೋಡೆ ನಿರ್ಮಿಸುವ ಆಲೋಚನೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿರಸ್ಕರಿಸಿದ್ದಾರೆ. 

ರಕ್ಷಣಾ ಗೋಡೆ ನಿರ್ಮಾಣವನ್ನು ಟೀಕಿಸಿರುವ ಟ್ರಂಪ್, ಇದೊಂದು ಮೂರ್ಖತನ ಮತ್ತು ದುಬಾರಿ ಕಲ್ಪನೆ ಎಂದು ಪ್ರಸ್ತಾವನೆಯನ್ನು ಟೀಕಿಸಿದ್ದಾರೆ.

ನ್ಯೂಯಾರ್ಕ್‌ ಬಂದರಿನಲ್ಲಿ ಕೆಲವು ಮೈಲುಗಳಷ್ಟು ದೂರದಲ್ಲಿ ದೈತ್ಯ ತಡೆಗೋಡೆ ನಿರ್ಮಾಣ ಮಾಡಲು ಸೇನೆ ಯೋಜಿಸಿತ್ತು. ಬಿರುಗಾಳಿಯಿಂದ ನಗರವನ್ನು ರಕ್ಷಿಸುವ ಉದ್ದೇಶದೊಂದಿಗೆ ಗೋಡೆ ನಿರ್ಮಾಣ ಮಾಡಲು ಚಿಂತಿಸಲಾಗಿತ್ತು.

ಭಾರತ- ಚೀನಾ ಗಡಿ ಕುರಿತ ಟ್ರಂಪ್‌ ಅಜ್ಞಾನಕ್ಕೆ ಮೋದಿ ಸುಸ್ತು

ಈ ಯೋಜನೆಗೆ 200 ಬಿಲಿಯನ್ ಡಾಲರ್ ವೆಚ್ಚ ಮಾಡಬೇಕಿದ್ದು, ಗೋಡೆ ನಿರ್ಮಾಣ ಕಾರ್ಯಕ್ಕೆ ಸುಮಾರು 25 ವರ್ಷಗಳಾಗಬಹುದು ಎಂದು ಅಂದಾಜಿಸಲಾಗಿತ್ತು. 

ಆದರೆ ಈ ಯೋಜನೆಯನ್ನು ತಿರಸ್ಕರಿಸಿರುವ ಟ್ರಂಪ್, ಬಿರುಗಾಳಿ ಅಪರೂಪವಾಗಿದ್ದು ಅದಕ್ಕಾಗಿ ಇಷ್ಟು ವೆಚ್ಚ ಮಾಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.