ಅಮೆರಿಕ(ಮೇ.31): ಪ್ರಧಾನಿ ಮೋದಿ ಭಾರತದಲ್ಲಿ ಮಾತ್ರವಲ್ಲ ವಿಶ್ವದಲ್ಲೆ ತನ್ನ ಪ್ರಭಾವ ಬೀರಿದ್ದಾರೆ. ಮೋದಿ ಭಾರತಕ್ಕೆ ಹೊಸ ಭಾಷ್ಯ ಬರೆದಿದ್ದಾರೆ. ವಿದೇಶದಲ್ಲಿ ಕಿಂಚಿತ್ತು ಗೌರವವಿಲ್ಲದ ಭಾರತಕ್ಕೆ ಇದೀಗ ಅಗ್ರಸ್ಥಾನ ಲಭ್ಯವಾಗಿದೆ. ಇದೀಗ ಭಾರತ ಇಲ್ಲದೆ ಯಾವುದೇ ವಿಶ್ವ ಸಭೆಗಳು ನಡೆಯುತ್ತಿಲ್ಲ. ಇದಕ್ಕೆ ಉತ್ತಮ ಊದಾಹರಣೆ G7 ಶೃಂಗ ಸಭೆ ಮುಂದೂಡಿಕೆ.

"

ವಿಶ್ವ ಆರೋಗ್ಯ ಸಂಸ್ಥೆಗೆ ಅಮೆರಿಕ ಗುಡ್‌ಬೈ!

G7 ಶೃಂಗ ಸಭೆಯ ರೂಪುರೇಶೆ ದಶಕಗಳ ಹಿಂದೆ ರೂಪಿಸಲಾಗಿದೆ. G7 ಶೃಂಗ ಸಭೆಯ ಗುಂಪಿನಲ್ಲಿರುವ  ರಾಷ್ಟ್ರಗಳು ಕೂಡ  ಪ್ರಸ್ತುತ ಸಂದರ್ಭಕ್ಕೆ ಹೊಂದಿಕೆಯಾಗುತ್ತಿಲ್ಲ. ಹೀಗಾಗಿ ಹೊಸ ರಾಷ್ಟ್ರಗಳ ಸೇರ್ಪಡೆ ಅಗತ್ಯ. ಪ್ರಮುಖವಾಗಿ ಭಾರತವನ್ನು G7 ಶೃಂಗ ಸಭೆಗೆ ಸೇರಿಸಬೇಕು ಎಂದು ಡೋನಾಲ್ಡ್ ಟ್ರಂಪ್ ಹೇಳಿದ್ದಾರೆ. ಈ ಕಾರಣಕ್ಕೆ G7 ಶೃಂಗ ಸಭೆ ಮುಂದೂಡಲಾಗುತ್ತಿದೆ. ಗರಿಷ್ಠ ಸೆಪ್ಟೆಂಬರ್ ವರೆಗೆ ಮುಂದೂಡಲಾಗುವುದು ಎಂದು ಟ್ರಂಪ್ ಹೇಳಿದ್ದಾರೆ.

ಮೋದಿಗಾಗಿ ಸಮೋಸಾ, ಮಾವಿನ ಚಟ್ನಿ ತಯಾರಿಸಿದ ಆಸ್ಟ್ರೇಲಿಯಾ ಪ್ರಧಾನಿ!

G7 ಶೃಂಗ ಸಭೆ ಪ್ರತಿನಿಧಿಸಲು ಭಾರತ ಸೇರಿದಂತೆ ಇನ್ನು ಕೆಲ ರಾಷ್ಟ್ರಗಳುು ಶಕ್ತವಾಗಿದೆ, ಜೊತೆಗೆ ಅವಶ್ಯವಾಗಿದೆ. ಹೀಗಾಗಿ ಸದ್ಯದ G7 ಶೃಂಗ ಸಭೆಯ ಗುಂಪನ್ನು ಪುನರ್ ರೂಪಿಸಬೇಕಿದೆ. ಭಾರತದ ಜೊತೆಗ ಆಸ್ಟ್ರೇಲಿಯಾ, ರಷ್ಯಾ ಹಾಗೂ ಸೌತ್ ಕೊರಿಯಾವನ್ನು ಸೇರಿಸಿ ಎಂದು ಟ್ರಂಪ್ ಸೂಚಿಸಿದ್ದಾರೆ.

ಸದ್ಯ G7 ಶೃಂಗ ಸಭೆಯಲ್ಲಿ ಪಾಲ್ಗೊಳ್ಳುತ್ತಿರುವ ರಾಷ್ಟ್ರಗಳು:
ಅಮೆರಿಕ, ಬ್ರಿಟನ್, ಫ್ರಾನ್ಸ್, ಜಪಾನ್, ಜರ್ಮನಿ, ಇಟಲಿ, ಕೆನಡ ಹಾಗೂ ಯೂರೋಪಿಯನ್ ಯುನಿಯನ್