ಕೊರೋನಾ ವಾರಿಯರ್ಸ್ ಜೊತೆ ಭಾರತದ 10 ವರ್ಷದ ಬಾಲಕಿಗೆ ಟ್ರಂಪ್ ಸನ್ಮಾನ!
ಕೊರೋನಾ ವಾರಿಯರ್ಸ್‌ಗೆ ವಿಶ್ವದಲ್ಲೇ ಸನ್ಮಾನ ಮಾಡಲಾಗುತ್ತಿದೆ. ಅದರಲ್ಲೂ ಅಮೆರಿಕದಲ್ಲಿ ವೈದ್ಯರು, ನರ್ಸ್, ಪೊಲೀಸರನ್ನು ಅತ್ಯಂತ ಗೌರವಿಂದ ಕಾಣುತ್ತಿದ್ದಾರೆ. ಇಂತಹ ಕೊರೋನಾ ವಾರಿಯರ್ಸ್‌ಗೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಸನ್ಮಾನ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾರತ ಮೂಲದ 10 ವರ್ಷ ಬಾಲಕಿಗೂ ಟ್ರಂಪ್ ಸನ್ಮಾನ ಮಾಡಿದ್ದಾರೆ. ಬಾಲಕಿ ಸಾಧನೆ ಏನು? ಇಲ್ಲಿದೆ.
ನ್ಯೂಯಾರ್ಕ್(ಮೇ.18): ಹ್ಯಾನೋವರ್ ಎಲಿಮಂಟ್ರಿ ಸ್ಕೂಲ್‌ನಲ್ಲಿ 4ನೇ ತರಗತಿ ವ್ಯಾಸಾಂಗ ಮಾಡುತ್ತಿರುವ ಭಾರತದ ಮೂಲದ ಶ್ರಾವ್ಯ ಅಣ್ಣಪ್ಪ ರೆಡ್ಡಿ ಕಾರ್ಯಕ್ಕೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಸನ್ಮಾನ ಮಾಡಿ ಗೌರವಿಸಿದ್ದಾರೆ. ಅಮೆರಿಕದ ಕೊರೋನಾ ವಾರಿಯರ್ಸ್‌ಗೆ ಸನ್ಮಾನ ಸಮಾರಂಭದಲ್ಲೇ 10 ವರ್ಷದ ಶ್ರಾವ್ಯಗೂ ಸನ್ಮಾನ ಮಾಡಲಾಗಿದೆ.
ಅಮೆರಿಕಾ ಸಂಶೋಧಿಸುತ್ತಿರುವ ಕೋವಿಡ್ 19 ಲಸಿಕೆಯನ್ನು ಹ್ಯಾಕ್ ಮಾಡಿತಾ ಚೀನಾ?..
ಸ್ಕೌಟ್‌ನಲ್ಲಿ ಸಕ್ರಿಯವಾಗಿರುವ ಶ್ರಾವ್ಯ ತನ್ನ ಸಹಪಾಠಿಗಳೊಂದಿಗೆ ಸೇರಿ, ಆಸ್ಪತ್ರೆ ನರ್ಸ್‌ಗಳಿಗೆ, ವೈದ್ಯರಿಗೆ ಬಿಸ್ಕಟ್ ನೀಡಿದ್ದಳು. ಇಷ್ಟೇ ಅಲ್ಲ ಅವರಿಗೆ ಗ್ರೀಟಿಂಗ್ ಕಾರ್ಡ್ ನೀಡುವ ಮೂಲಕ ಅವರನ್ನು ಹುರಿದುಂಬಿಸಿದ್ದಳು. ಪ್ರತಿ ದಿನ ಶ್ರಾವ್ಯ ಆಸ್ಪತ್ರೆ ಸಿಬ್ಬಂಧಿಗಳನ್ನು ತನ್ನ ಕೈಲಾದಷ್ಟು ಹುರಿದುಂಬಿಸಿದ್ದಾಳೆ. ಗ್ರೀಟಿಂಗ್ ಕಾರ್ಡ್ ಮೂಲಕ ವೈದ್ಯರ ತಂಡಕ್ಕೆ ಅಭಿನಂದನೆ ಸಲ್ಲಿಸುವ ಕಾರ್ಯವನ್ನು ನಿರಂತರವಾಗಿ ಮಾಡಿದ್ದಳು.
ಅಮೆರಿಕದಿಂದ 3 ವಾರದಲ್ಲಿ ಭಾರತಕ್ಕೆ 200 ವೆಂಟಿಲೇಟರ್?
ಶ್ರಾವ್ಯ ಕಾರ್ಯವನ್ನು ಮೆಚ್ಚಿದ ಅಮೆರಿಕ ಅಧ್ಯಕ್ಷ ಟ್ರಂಪ್ ಆಕೆಯನ್ನು ಕೊರೋನಾ ವಾರಿಯರ್ಸ್ ಏರ್ಪಡಿಸಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲೇ ಸನ್ಮಾನಿಸಿದ್ದಾರೆ. ಅಮೆರಿಕದಲ್ಲಿ ವೈದ್ಯರು, ನರ್ಸ್, ಸೇರಿದಂತೆ ಆಸ್ಪತ್ರೆ ಸಿಬ್ಬಂದಿಗಳನ್ನು ದೇವರಂತೆ ಕಾಣುತ್ತಿದ್ದಾರೆ. ಕಾರಣ ಅತೀ ಹೆಚ್ಚು ಕೊರೋನಾ ಪ್ರಕರಣಗಳುು ಅಮೆರಿಕದಲ್ಲಿ ದಾಖಲಾಗಿದೆ. ಇಷ್ಟೇ ಅಲ್ಲ ಗರಿಷ್ಠ ಸಾವು ಕೂಡ ಸಂಭವಿಸಿದೆ. ಇದರ ನಡುವೆ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುತ್ತಿರುವ ಕೊರೋನಾ ವಾರಿಯರ್ಸ್‌ಗೆ ಟ್ರಂಪ್ ಸನ್ಮಾನ ಮಾಡಿದ್ದರು. ಈ ಕಾರ್ಯಕ್ರಮದಲ್ಲಿ ಕೊರೋನಾ ವಾರಿಯರ್ಸ್ ಹುರಿದುಂಬಿಸಿದ ಶ್ರಾವ್ಯಗೂ ಸನ್ಮಾನ ಮಾಡಿದ್ದಾರೆ.