ಅಮೆರಿಕದಲ್ಲಿ ಇನ್ನು ಗಂಡು-ಹೆಣ್ಣು ಮಾತ್ರ, ತೃತೀಯ ಲಿಂಗಿಗಳಿಗೆ ಜಾಗವಿಲ್ಲ: ಟ್ರಂಪ್ ಘೋಷಣೆ!

ಸೈನ್ಯ, ಶಾಲೆಗಳಿಂದ ಟ್ರಾನ್ಸ್‌ಜೆಂಡರ್‌ಗಳನ್ನು ಹೊರಹಾಕುವುದಾಗಿ ಟ್ರಂಪ್ ಹೇಳಿದ್ದಾರೆ. ಅಧಿಕಾರಕ್ಕೆ ಬಂದ ಮೇಲೆ ಇದಕ್ಕೆ ಆದೇಶ ಹೊರಡಿಸುವುದಾಗಿ ತಿಳಿಸಿದ್ದಾರೆ.

Donald Trump Declares End to Transgender Policies in US gow

ವಾಷಿಂಗ್ಟನ್: ಅಮೆರಿಕದಲ್ಲಿ ಟ್ರಾನ್ಸ್‌ಜೆಂಡರ್ ಹುಚ್ಚುತನ ನಿಲ್ಲಿಸುವುದಾಗಿ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಗಂಡು ಮತ್ತು ಹೆಣ್ಣು ಎಂಬ ಎರಡು ಲಿಂಗ ಮಾತ್ರ ಇನ್ನು ಅಮೆರಿಕದಲ್ಲಿ ಇರುತ್ತದೆ, ಇದುವೇ ಅಮೆರಿಕ ಸರ್ಕಾರದ ಅಧಿಕೃತ ನೀತಿ ಎಂದು ಟ್ರಂಪ್ ಹೇಳಿದ್ದಾರೆ. ಫೀನಿಕ್ಸ್‌ನಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡುವಾಗ ಟ್ರಂಪ್ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಸೈನ್ಯ, ಶಾಲೆಗಳಿಂದ ಟ್ರಾನ್ಸ್‌ಜೆಂಡರ್‌ಗಳನ್ನು ಹೊರಹಾಕುವುದಾಗಿ ಟ್ರಂಪ್ ಹೇಳಿದ್ದಾರೆ. ಅಧಿಕಾರಕ್ಕೆ ಬಂದ ಮೇಲೆ ಇದಕ್ಕೆ ಆದೇಶ ಹೊರಡಿಸುವುದಾಗಿ ತಿಳಿಸಿದ್ದಾರೆ. ಮಹಿಳಾ ಕ್ರೀಡೆಗಳಿಂದ ಪುರುಷರನ್ನು ಹೊರಹಾಕುವುದಾಗಿಯೂ, ಮಕ್ಕಳ ಲೈಂಗಿಕ ಊನಗೊಳಿಸುವಿಕೆಯನ್ನು ಕೊನೆಗೊಳಿಸಲು ನಾನು ಕಾರ್ಯನಿರ್ವಾಹಕ ಆದೇಶಗಳಿಗೆ ಸಹಿ ಹಾಕುತ್ತೇನೆ, ಸೈನ್ಯದಿಂದ ಮತ್ತು ನಮ್ಮ ಪ್ರಾಥಮಿಕ ಶಾಲೆಗಳು ಮತ್ತು ಮಧ್ಯಮ ಶಾಲೆಗಳು ಮತ್ತು ಪ್ರೌಢಶಾಲೆಗಳಿಂದ ಟ್ರಾನ್ಸ್ಜೆಂಡರ್ಗಳನ್ನು ಹೊರಹಾಕುತ್ತೇನೆ
ಈ ಆದೇಶಕ್ಕೆ ಸಹಿ ಹಾಕುವುದಾಗಿಯೂ ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಟ್ರಂಪ್ ಹೇಳಿಕೆ ಅಮೆರಿಕದ ರಾಜಕೀಯದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿದೆ.

ವಿಶ್ವ ಪ್ರಸಿದ್ಧ ಪ್ಯಾರೀಸ್‌ನ ಐಫೆಲ್ ಟವರ್‌ನಲ್ಲಿ ಬೆಂಕಿ ಅವಘಡ, 1200 ಕ್ಕೂ ಅಧಿಕ ಮಂದಿ ಸಂಕಷ್ಟದಲ್ಲಿ!

ಇದಲ್ಲದೆ, ವಲಸೆ ಅಪರಾಧಗಳನ್ನು ನಿಯಂತ್ರಿಸುವುದಾಗಿ, ಮಾದಕವಸ್ತು ಗ್ಯಾಂಗ್‌ಗಳನ್ನು ವಿದೇಶಿ ಭಯೋತ್ಪಾದಕ ಗುಂಪುಗಳೆಂದು ಘೋಷಿಸುವುದಾಗಿ, ಪನಾಮ ಕಾಲುವೆಯ ಮೇಲಿನ ಅಮೆರಿಕದ ನಿಯಂತ್ರಣವನ್ನು ಮರುಸ್ಥಾಪಿಸುವುದಾಗಿ ಟ್ರಂಪ್ ಘೋಷಿಸಿದ್ದಾರೆ. ಉಕ್ರೇನ್‌ನಲ್ಲಿನ ಯುದ್ಧವನ್ನು ಕೊನೆಗೊಳಿಸುವುದಾಗಿ ಮತ್ತು ಮೂರನೇ ಮಹಾಯುದ್ಧವನ್ನು ತಡೆಯುವುದಾಗಿಯೂ ಟ್ರಂಪ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ದೇಶದ ಗಡಿಗಳನ್ನು ಮುಚ್ಚುವುದಾಗಿ, ಫೆಡರಲ್ ನಿಯಂತ್ರಣಗಳನ್ನು ಕೊನೆಗೊಳಿಸುವುದಾಗಿ ಮತ್ತು ತೆರಿಗೆ ಕಡಿಮೆ ಮಾಡುವುದಾಗಿಯೂ ಟ್ರಂಪ್ ಫೀನಿಕ್ಸ್‌ನಲ್ಲಿ ನಡೆದ ಭಾಷಣದಲ್ಲಿ ಹೇಳಿದ್ದಾರೆ.

ವಾಟರ್ ಮೆಟ್ರೋ ಯೋಜನೆಯನ್ನು ದೇಶದ ಇತರ ನಗರಗಳಲ್ಲಿ ವಿಸ್ತರಿಸಲು ಚಿಂತನೆ

ಭಾನುವಾರ ಅರಿಜೋನಾದ ಫೀನಿಕ್ಸ್‌ನಲ್ಲಿ ನಡೆದ ಅಮೇರಿಕಾ ಫೆಸ್ಟ್ 2024 ರಲ್ಲಿ ಜನಸಮೂಹವನ್ನು ಉದ್ದೇಶಿಸಿ ಮಾತನಾಡುವಾಗ ಹಲವು ಘೋಷಣೆಗಳನ್ನು ಮಾಡಿದ್ದಾರೆ. ಸಾಮೂಹಿಕ ಗಡೀಪಾರುಗಳನ್ನು" ಕೈಗೊಳ್ಳುವ ತಮ್ಮ ಯೋಜನೆಗಳನ್ನು ಪುನರುಚ್ಚರಿಸಿದರು. ಶ್ವೇತಭವನದಲ್ಲಿ ಮುಂಬರುವ ಎರಡನೇ ಅವಧಿಯನ್ನು ಉಲ್ಲೇಖಿಸಿ ಟ್ರಂಪ್ ಮುಂಬರುವ "ಸುವರ್ಣಯುಗ" ದ ತನ್ನ ಬೆಂಬಲಿಗರಿಗೆ ಭರವಸೆ ನೀಡಿದರು.

Latest Videos
Follow Us:
Download App:
  • android
  • ios