Asianet Suvarna News Asianet Suvarna News

ಚುನಾವಣೆ ಗೆಲ್ಲಲು ಚೀನಾ ನೆರವು ಕೇಳಿದ್ದ ಡೊನಾಲ್ಡ್ ಟ್ರಂಪ್‌..!

2020 ಅಮೆರಿಕ ಅಧ್ಯಕ್ಷೀಯ ಚುನಾವಣೆ ಗೆಲ್ಲಲು ಡೊನಾಲ್ಡ್ ಟ್ರಂಪ್ ಚೀನಾ ಅಧ್ಯಕ್ಷರ ಬಳಿ ಮನವಿ ಮಾಡಿಕೊಂಡಿದ್ದರು ಎನ್ನುವ ವಿಚಾರ ಬಯಲಾಗಿದೆ. ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಬರೆದ ಪುಸ್ತಕವೊಂದರಲ್ಲಿ ಈ ವಿಚಾರ ಪ್ರಸ್ತಾಪವಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Donald Trump asked China help to win america President election 2020
Author
Washington D.C., First Published Jun 19, 2020, 11:46 AM IST

ವಾಷಿಂಗ್ಟನ್(ಜೂ.19)‌: ಸದ್ಯ ಚೀನಾ ಹೆಸರು ಕೇಳಿದರೆ ಉರಿದುಬೀಳುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಕಳೆದ ವರ್ಷ ಜಪಾನ್‌ನಲ್ಲಿ ನಡೆದ ಜಿ-20 ಶೃಂಗದ ವೇಳೆ 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮ ಗೆಲುವಿಗೆ ನೆರವಾಗುವಂತೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರಲ್ಲಿ ಬೇಡಿಕೊಂಡಿದ್ದರಂತೆ! 

ಹೌದು ಹೀಗೊಂದು ಸ್ಫೋಟಕ ಮಾಹಿತಿಯನ್ನು ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್‌ ಬೋಲ್ಟನ್‌ ತಮ್ಮ ಹೊಸ ಪುಸ್ತಕದಲ್ಲಿ ಬಹಿರಂಗಪಡಿಸಿದ್ದಾರೆ. ಬೋಲ್ಟನ್‌ ಅವರ ‘ದ ರೂಮ್‌ ವೇರ್‌ ಇಟ್‌ ಹ್ಯಾಪನ್ಡ್: ಎ ವೈಟ್‌ಹೌಸ್‌ ಮೆಮೊರೀಸ್‌’ ಪುಸ್ತಕದ ಆಯ್ದ ಭಾಗವನ್ನು ಅಮೆರಿಕ ಪ್ರಸಿದ್ಧ ದಿನಪತ್ರಿಕೆಗಳು ಬುಧವಾರ ಪ್ರಕಟಿಸಿವೆ.

‘ಟ್ರಂಪ್‌ ಅಚ್ಚರಿಯ ರೀತಿಯಲ್ಲಿ ತಮ್ಮ ಮಾತುಕತೆಯನ್ನು 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯತ್ತ ಹೊರಳಿಸಿದರು. ಚೀನಾದ ಆರ್ಥಿಕ ಸಾಮರ್ಥ್ಯವನ್ನು ಉಲ್ಲೇಖಿಸಿದ ಅವರು ತಾವು ಗೆಲುವು ಸಾಧಿಸುವಂತೆ ನೋಡಿಕೊಳ್ಳಲು ಹೇಳಿದರು’ ಎಂದು ಪುಸ್ತಕದಲ್ಲಿ ಬರೆದಿದ್ದಾರೆ.

ಪೆಸಿಫಿಕ್ ಮಹಾಸಾಗರಕ್ಕೆ 3 ಅಣ್ವಸ್ತ್ರ ಯುದ್ಧ ಹಡಗು ಕಳುಹಿಸಿದ ಅಮೆರಿಕ..!

ಈ ವಿಷಯ ಹೊರಬೀಳುತ್ತಿದ್ದಂತೆಯೇ ಪ್ರತಿಕ್ರಿಯೆ ನೀಡಿರುವ ಟ್ರಂಪ್‌, ‘ಬೋಲ್ಟನ್‌ ಒಬ್ಬ ಸುಳ್ಳುಗಾರ. ಶ್ವೇತಭವನದ ಪ್ರತಿಯೊಬ್ಬರೂ ಅವರನ್ನು ದ್ವೇಷಿಸುತ್ತಿದ್ದರು’ ಎಂದು ಕಿಡಿಕಾರಿದ್ದಾರೆ. ಬೋಲ್ಟನ್‌ ಅವರನ್ನು ಟ್ರಂಪ್‌ ಸರ್ಕಾರ ಕಳೆದ ವರ್ಷ ಕೆಲಸದಿಂದ ವಜಾಗೊಳಿಸಿತ್ತು. ಜೊತೆಗೆ ಶ್ವೇತಭವನ ಸಹ ಬೋಲ್ಟನ್‌ ಅವರ ಪುಸ್ತಕವು ಸೂಕ್ಷ್ಮ ಮಾಹಿತಿಯನ್ನು ಒಳಗೊಂಡಿದ್ದು, ಪುಸ್ತಕ ಬಿಡುಗಡೆಗೆ ತಾತ್ಕಾಲಿಕ ತಡೆ ನೀಡಲಾಗಿದೆ ಎಂದಿದೆ.

#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್
"

Follow Us:
Download App:
  • android
  • ios