Asianet Suvarna News Asianet Suvarna News

Russia-Ukraine War: ರಷ್ಯಾದ ನೌಕೆಗಳಿಗೆ ಡಾಲ್ಫಿನ್‌ ರಕ್ಷಣೆ!

*  ಸಮುದ್ರದೊಳಗಿಂದ ಉಕ್ರೇನ್‌ ನಡೆಸಬಹುದಾದ ದಾಳಿ ತಡೆಯಲು ನಿಯೋಜನೆ
*  ಸಮುದ್ರದಲ್ಲಿನ ಜೀವಿಗಳ ಪೈಕಿ ಡಾಲ್ಫಿನ್‌ ಅತ್ಯಂತ ಚತುರ ಪ್ರಾಣಿ
*  ಪ್ರತಿ ದಾಳಿ ನಡೆಸುವ ರೀತಿಯಲ್ಲಿ ಡಾಲ್ಫಿನ್‌ಗೆ ತರಬೇತಿ ನೀಡಬಹುದು 
 

Dolphin Protection for Russian Ships grg
Author
Bengaluru, First Published Apr 29, 2022, 4:55 AM IST

ನ್ಯೂಯಾರ್ಕ್(ಏ.28):  ಸತತ 2 ತಿಂಗಳಿನಿಂದ ಉಕ್ರೇನ್‌(Ukraine) ಮೇಲೆ ದಾಳಿ ನಡೆಸುತ್ತಿರುವ ರಷ್ಯಾ(Russia) ಸೇನಾ, ಇದೇ ವೇಳೆ ತನ್ನ ಅತ್ಯಂತ ಆಯಕಟ್ಟಿನ ನೌಕಾ ನೆಲೆಯೊಂದನ್ನು ಕಾಯಲು ತರಬೇತುಗೊಳಿಸಿದ ‘ಡಾಲ್ಫಿನ್‌ ಪಡೆ’ಯನ್ನು(Dolphin Force) ನಿಯೋಜಿಸಿದೆ. ಈ ಮೂಲಕ ಡಾಲ್ಫಿನ್‌ಗಳನ್ನು ರಕ್ಷಣೆಗೆ ಬಳಸಿಕೊಳ್ಳುತ್ತಿದೆ ಎಂಬ ಮಾಹಿತಿ ಹೊರಬಿದ್ದಿದೆ.

2014ರಲ್ಲಿ ಉಕ್ರೇನ್‌ನಿಂದ ತಾನು ವಶಪಡಿಸಿಕೊಂಡ ಕಪ್ಪು ಸಮುದ್ರದ ವಲಯದಲ್ಲಿ ಬರುವ ಸೆವಸ್ಟೊಪೋಲ್‌ ನೌಕಾ ನೆಲೆ ಕಾಯಲು ರಷ್ಯಾ ಸೇನೆ(Russian Army) ವಿಶೇಷವಾದ ಡಾಲ್ಫಿನ್‌ ಪಡೆ ಬಳಸುತ್ತಿದೆ ಎಂದು ಉಪಗ್ರಹ ಚಿತ್ರಗಳನ್ನು ವಿಶ್ಲೇಷಿಸಿ ಅಮೆರಿಕದ ನೌಕಾ ಸಂಸ್ಥೆ ವರದಿ ಮಾಡಿದೆ.

ರಷ್ಯಾ ಉಕ್ರೇನ್‌ ಯುದ್ದ: ಹತ್ಯೆಗೂ ಮೊದಲು ಉಕ್ರೇನ್‌ ಮಹಿಳೆಯರ ಮೇಲೆ ಅತ್ಯಾಚಾರ

ಕಳೆದ ಫೆಬ್ರುವರಿಯಲ್ಲಿ ಉಕ್ರೇನ್‌ ಮೇಲೆ ದಾಳಿ ನಡೆಸುವುದಕ್ಕೂ ಕೆಲ ದಿನಗಳ ಮುನ್ನ, ಸೆವಸ್ಟೊಪೋಲ್‌ ನೌಕಾನೆಲೆ ಪ್ರವೇಶದ ಸ್ಥಳದಲ್ಲಿ ಈ ಡಾಲ್ಫಿನ್‌ಗಳ ಸಂಚಾರವನ್ನು ಉಪಗ್ರಹ ಚಿತ್ರಗಳು ಸೆರೆಹಿಡಿದಿವೆ.

ನಿಯೋಜನೆ ಏಕೆ?:

ಸೆವಸ್ಟೊಪೋಲ್‌ ರಷ್ಯಾದ ಅತ್ಯಂತ ಮಹತ್ವದ ನೌಕಾ ನೆಲೆ. ಇಲ್ಲಿ ಅದು ಭಾರೀ ಪ್ರಮಾಣದ ಅತ್ಯಾಧುನಿಕ ಯುದ್ಧ ನೌಕೆಗಳು, ಶಸ್ತ್ರಾಸ್ತ್ರಗಳನ್ನು ನಿಯೋಜಿಸಿದೆ. ಇದರ ಮೇಲೆ ದಾಳಿ ಮಾಡುವುದು ಉಕ್ರೇನ್‌ನ ವಾಯುಪಡೆಗೆ ಸಾಧ್ಯವಿಲ್ಲ. ಆದರೆ ಸಮುದ್ರದಾಳದಿಂದ ಈಜುಗಾರರನ್ನು ಬಳಸಿ ಉಕ್ರೇನ್‌ ಯಾವುದೇ ದುಷ್ಕೃತ್ಯ ನಡೆಸಬಹುದು ಎಂಬ ಆತಂಕ ರಷ್ಯಾ ಸೇನೆಯನ್ನು ಕಾಡುತ್ತಿದೆ. ಹೀಗಾಗಿ ಇಂಥ ದಾಳಿಕೋರರನ್ನು ತಡೆಯಲು ರಷ್ಯಾ ಸೇನೆ ಡಾಲ್ಫಿನ್‌ಗಳನ್ನು ನಿಯೋಜಿಸಿದೆ ಎನ್ನಲಾಗಿದೆ.

ಚತುರ ಪ್ರಾಣಿ:

ಸಮುದ್ರದಲ್ಲಿನ ಜೀವಿಗಳ ಪೈಕಿ ಡಾಲ್ಫಿನ್‌ ಅತ್ಯಂತ ಚತುರ ಪ್ರಾಣಿ. ಅವುಗಳನ್ನು ಯಾವುದೇ ವಸ್ತು ಪತ್ತೆ ಮಾಡಲು, ನಿರ್ದಿಷ್ಟ ವಲಯದಲ್ಲಿ ಯಾವುದೇ ಚಲನ ವಲನ ಪತ್ತೆ ಮಾಡಲು, ಪ್ರತಿ ದಾಳಿ ನಡೆಸುವ ರೀತಿಯಲ್ಲಿ ತರಬೇತಿ ನೀಡಬಹುದು.

ಉಕ್ರೇನಿಗೆ ಅಮೆರಿಕ ಸಚಿವ ಬ್ಲಿಂಕನ್‌ ರಹಸ್ಯ ಭೇಟಿ

ಉಕ್ರೇನ್‌ನ ಮತ್ತೊಂದು ನಗರ ರಷ್ಯಾ ವಶಕ್ಕೆ

ಎರಡು ತಿಂಗಳಿನಿಂದ ಉಕ್ರೇನ್‌ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾ, ಮರಿಯುಪೋಲ್‌ ಬಳಿಕ ಉಕ್ರೇನ್‌ನ ಮತ್ತೊಂದು ನಗರವನ್ನು ವಶಕ್ಕೆ ತೆಗೆದುಕೊಂಡಿದೆ. ಲುಕಾಂಕ್‌್ಷ ವಲಯದಲ್ಲಿರುವ ಕ್ರೆಮಿನ್ನಾ ನಗರದಲ್ಲಿ ಹಲವು ದಿನಗಳ ಕಾಳಗದ ಬಳಿಕ ವಶಕ್ಕೆ ಪಡೆಯುವಲ್ಲಿ ರಷ್ಯಾ ಸಫಲವಾಗಿದೆ ಎಂದು ಬ್ರಿಟನ್‌ನ ರಕ್ಷಣಾ ಸಚಿವಾಲಯ ತಿಳಿಸಿದೆ. ಆದರೆ ಈ ಬಗ್ಗೆ ಉಕ್ರೇನ್‌ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಈ ಮಧ್ಯೆ, ಮೂರನೇ ಮಹಾಯುದ್ಧದ ಕುರಿತು ಉಕ್ರೇನ್‌ ಪ್ರಚೋದನೆ ನೀಡಬಾರದು. ಜತೆಗೆ ಅಣ್ವಸ್ತ್ರ ಬಿಕ್ಕಟ್ಟಿನ ಬೆದರಿಕೆಯನ್ನು ಉಕ್ರೇನ್‌ ಲಘುವಾಗಿ ಪರಿಗಣಿಸಬಾರದು ಎಂದು ರಷ್ಯಾದ ರಾಯಭಾರಿ ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ, ರೈಲು ಹಾಗೂ ಇಂಧನ ಕೇಂದ್ರಗಳ ಮೇಲೆ ರಷ್ಯಾ ತನ್ನ ದಾಳಿಯನ್ನು ತೀವ್ರಗೊಳಿಸಿದೆ.
 

Follow Us:
Download App:
  • android
  • ios