ಅಸ್ವಸ್ಥ ಮಾಲೀಕನಿದ್ದ ಆ್ಯಂಬುಲೆನ್ಸ್ ಹಿಂದೆ ಬಂದ ನಾಯಿ ನೋಡಿ ವೈದ್ಯ ಮಾಡಿದ್ದೇನು? ಮನತಟ್ಟಿದ ದೃಶ್ಯ!
ಮಾಲೀಕ ದಿಢೀರ್ ಅಸ್ವಸ್ಥನಾಗಿದ್ದಾನೆ. ತಕ್ಷಣವೇ ಆ್ಯಂಬುಲೆನ್ಸ್ ಮೂಲಕ ಮಾಲೀಕನ ಆಸ್ಪತ್ರೆ ದಾಖಲಿಸಲು ಕರೆದುಕೊಂಡು ಹೋಗಿದ್ದಾರೆ. ಆದರೆ ಸಾಕು ನಾಯಿ ಆ್ಯಂಬುಲೆನ್ಸ್ ಹಿಂದೆ ಓಡಲು ಆರಂಭಿಸಿದೆ. ಮನೆಯಿಂದ ಆ್ಯಂಬುಲೆನ್ಸ್ ಹಿಂದೆ ಓಡಿ ಬಂದ ನಾಯಿ ನೋಡಿದ ಮೆಡಿಕಲ್ ಅಧಿಕಾರಿ ಮಾಡಿದ್ದೇನು? ಮನ ತಟ್ಟಿದ ದೃಶ್ಯ ಸೆರೆ.
ಮನತಟ್ಟುವ ಘಟನೆ ದೃಶ್ಯವೊಂದು ಸೆರೆಯಾಗಿದೆ. ಮನೆಯಲ್ಲಿ ಅಸ್ವಸ್ಥಗೊಂಡ ಮಾಲೀಕನಿಗೆ ತುರ್ತು ಚಿಕಿತ್ಸೆಯ ಅಗತ್ಯವಿತ್ತು. ತಕ್ಷಣವೇ ಆ್ಯಂಬುಲೆನ್ಸ್ ಆಗಮಿಸಿ ಮಾಲೀಕನ ಕರೆದೊಯ್ದಿದೆ. ಆದರೆ ಮಾಲೀಕನ ಆರೋಗ್ಯ ಕುರಿತು ಸಾಕು ನಾಯಿ ತೀವ್ರ ಕಳವಳಗೊಂಡಿದೆ. ಆ್ಯಂಬುಲೆನ್ಸ್ ಹಿಂದೆ ಓಡಲು ಆರಂಭಿಸಿದೆ. ಆ್ಯಂಬುಲೆನ್ಸ್ ಹಿಂದಯೇ ಓಡಿ ಬರುತ್ತಿದ್ದ ಮಾಲೀಕನ ಸಾಕು ನಾಯಿ ಗಮನಿಸಿದ ಆ್ಯಂಬುಲೆನ್ಸ್ ಮೆಡಿಕಲ್ ಆಫೀಸರ್ ತಕ್ಷಣವೇ ಆ್ಯಂಬುಲೆನ್ಸ್ ನಿಲ್ಲಿಸಿ ಬಾಗಿಲು ತೆರೆದು ನಾಯಿಗೂ ಮಾಲೀಕ ಪಕ್ಕದಲ್ಲಿ ನಿಲ್ಲಲು ಅವಕಾಶ ಮಾಡಿಕೊಟ್ಟು ಆಸ್ಪತ್ರೆಗೆ ತೆರಳಿದ ಘಟನೆಯ ವಿಡಿಯೋ ಮನತಟ್ಟುವಂತಿದೆ.
ಇದು ವಿದೇಶದಲ್ಲಿ ನಡೆದ ಘಟನೆ. ಆದರೆ ಎಲ್ಲಿ, ಯಾವ ಆಸ್ಪತ್ರೆ ಅನ್ನೋ ಕುರಿತು ಸ್ಪಷ್ಟತೆ ಲಭ್ಯವಾಗಿಲ್ಲ. ಆದರೆ ಈ ಘಟನಾ ದೃಶ್ಯ ಮಾತ್ರ ಹಲವರ ಮನಸ್ಸಿಗೆ ನಾಟಿದೆ. ಸಾಕು ನಾಯಿ ಹಾಗೂ ಮಾಲೀಕನ ನಡುವಿನ ಅತ್ಮೀಯತೆ, ಪ್ರೀತಿ, ಗೌರವ ಬೇರೆ ಎಲ್ಲೂ ಕಾಣಲು ಸಿಗಲ್ಲ. ಅದೇ ಮಾಲೀಕ ಅಸ್ವಸ್ಥಗೊಂಡರೆ ನಾಯಿ ಕೂಡ ಆಪ್ತ ಕುಟುಂಬಸ್ಥರಂತೆ ನೋವು ಹಾಗೂ ಆತಂಕದಲ್ಲಿ ಮಿಡಿಯುತ್ತದೆ. ಇಲ್ಲೂ ಕೂಡ ಇದೇ ಆಗಿದೆ.
ವಾಘ ಗಡಿ ರಿಟ್ರೀಟ್ ವೇಳೆ ಭಾರತದೊಳಗೆ ಓಡಿ ಬಂದ ಪಾಕಿಸ್ತಾನ ಬೀದಿ ನಾಯಿ ವಶಕ್ಕೆ ಪಡೆದ ಸೇನೆ!
ಅಸ್ವಸ್ಥ ಮಾಲೀಕನ ಕೊಂಡೊಯ್ಯಲು ಆ್ಯಂಬುಲೆನ್ಸ್ ಬಂದಿದೆ. ಆ್ಯಂಬುಲೆನ್ಸ್‌ನಲ್ಲಿದ್ದ ವೈದ್ಯರು, ಸಿಬ್ಬಂದಿಗಳು ತಕ್ಷಣವೇ ಮಾಲೀಕನ ಆ್ಯಂಬುಲೆನ್ಸ್ ಮೂಲಕ ಕೊಂಡೊಯ್ದಿದ್ದಾರೆ. ಮಾಲೀಕನ ಆ್ಯಂಬುಲೆನ್ಸ್‌ನಲ್ಲಿ ಮಲಗಿಸಿದ ಬೆನ್ನಲ್ಲೇ ಸಾಕು ನಾಯಿಯ ಆತಂಕ ಹೆಚ್ಚಾಗಿದೆ. ಚಡಪಡಿಕೆ ಜೋರಾಗಿದೆ. ತ್ವರಿತವಾಗಿ ಚಿಕಿತ್ಸೆ ಅಗತ್ಯವಿದ್ದ ಕಾರಣ ಆ್ಯಂಬುಲೆನ್ಸ್ ಅಧಿಕಾರಿಗಳು ತಕ್ಷಣವೇ ಹೊರಟಿದ್ದಾರೆ.
ಆದರೆ ಸಾಕು ನಾಯಿ ಆ್ಯಂಬುಲೆನ್ಸ್ ಹಿಂದೆ ಓಡಲು ಆರಂಭಿಸಿದೆ. ಇತ್ತ ಹಿಂಬದಿಯಲ್ಲಿ ಕುಟುಂಬ ಸದಸ್ಯರು ಬೈಕ್ ಹಾಗೂ ಇತರ ವಾಹನಗಳ ಮೂಲಕ ಆಸ್ಪತ್ರೆ ತೆರಳಿದ್ದಾರೆ. ಈ ವೇಳೆ ಮಾಲೀಕನ ಸಾಕು ನಾಯಿ ಆ್ಯಂಬುಲೆನ್ಸ್ ಹಿಂದೆ ಓಡಲು ಆರಂಭಿಸಿದೆ. ಕೆಲ ಹೊತ್ತು ಆ್ಯಂಬುಲೆನ್ಸ್ ವೈದ್ಯರು ನಾಯಿಯನ್ನು ಗಮನಿಸಿದ್ದಾರೆ. ಆದರೆ ನಾಯಿ ಓಟ ನಿಲ್ಲಿಸಿ ಮರಳಲಿದೆ ಎಂದುಕೊಂಡಿದ್ದಾರೆ. ಆದರೆ ನಾಯಿ ಮಾತ್ರ ಓಟ ನಿಲ್ಲಿಸದೆ ಆ್ಯಂಬುಲೆನ್ಸ್ ಹಿಂದೆ ಓಡಲು ಆರಂಭಿಸಿದೆ.
ತಕ್ಷಣವೆ ಚಾಲಕನಿಗೆ ಮೆಡಿಕಲ್ ಆಫೀಸ್ ಆ್ಯಂಬುಲೆನ್ಸ್ ನಿಲ್ಲಿಸಲು ಸೂಚಿಸಿದ್ದಾರೆ. ದಾರಿ ಮಧ್ಯೆ ಆ್ಯಂಬುಲೆನ್ಸ್ ನಿಲ್ಲಿಸಿದ ಅಧಿಕಾರಿ ತಕ್ಷಣವೇ ವಾಹನದಿಂದ ಇಳಿದು ಬಂದು ಹಿಂಬದಿಯ ಬಾಗಿಲು ತೆರೆದಿದ್ದಾರೆ. ಇತ್ತ ನಾಯಿ ತನ್ನ ಮಾಲೀಕ ಮಲಗಿದ್ದ ಆ್ಯಂಬುಲೆನ್ಸ್ ಹಿಂಭಾಗಕ್ಕೆ ತಕ್ಷಣವೇ ಹತ್ತಿದೆ. ಇತ್ತ ಮೆಡಿಕಲ್ ಆಫೀಸರ್ ಬಾಗಿಲು ಮುಚ್ಚಿದ್ದಾನೆ. ಬಳಿಕ ಮಾಲೀಕನ ಪಕ್ಕದಲ್ಲಿ ನಾಯಿ ನಿಂತಿದೆ. ಬಳಿಕ ವೇಗವಾಗಿ ಆ್ಯಂಬುಲೆನ್ಸ್ ಆಸ್ಪತ್ರೆಯತ್ತ ತೆರಳಿದೆ.
ಮೃತಪಟ್ಟ ನಾಯಿಯಿಂದ 41 ಲಕ್ಷ ರೂಪಾಯಿ ಗೆದ್ದ ಮಾಲೀಕ, ಪೆಟ್ ಡಾಗ್ ನೆನೆದು ಭಾವುಕ!
ಹಿಂಬದಿಯಲ್ಲಿ ಬಂದ ಕುಟುಂಬದ ಆಪ್ತರು ಈ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಭಾರಿ ವೈರಲ್ ಆಗಿದೆ. ತಾರಾ ಬುಲ್ ಅನ್ನೋ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಹಲವರು ಈ ವಿಡಿಯೋಗೆ ಕಮೆಂಟ್ ಮಾಡಿದ್ದಾರೆ. ಇದೇ ವೇಳೆ ಹಲವರು ತಮ್ಮ ತಮ್ಮ ಸಾಕು ನಾಯಿಗಳ ಅನುಭವವನ್ನೂ ಹಂಚಿಕೊಂಡಿದ್ದಾರೆ. 27 ಸೆಕೆಂಡ್‌ಗಳ ಈ ವಿಡಿಯೋ 3 ಮಿಲಿಯನ್‌ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಈ ಪೈಕಿ ಬಹುತೇಕರು ಭಾವುಕರಾಗಿದ್ದಾರೆ. ನಾಯಿ ದೇವರು ಮಾನವನಿಗೆ ನೀಡಿದ ಉಡುಗೊರೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದಕ್ಕೆ ನಾಯಿಯ ನಿಯತ್ತು, ಅನ್ನ ಹಾಕಿದ ಮಾಲೀಕ ಮೇಲಿಟ್ಟಿರುವ ಪ್ರೀತಿಗೆ ಇನ್ಯಾವುದು ಸರಿಸಾಟಿ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.