90 ವರ್ಷಗಳ ಬಳಿಕ ಮೊದಲ ಬಾರಿ ಆರ್ಡ್ವರ್ಕ್ ಜನನ ಹ್ಯಾರಿಪಾಟರ್ ಸಿರೀಸ್‌ನಲ್ಲಿ ಡೊಬ್ಬಿ ಎಂದು ಕರೆಯಲ್ಪಡುತ್ತಿದ್ದ ಪ್ರಾಣಿ ಇಂಗ್ಲೆಂಡ್‌ನ ಚೆಸ್ಟರ್ ಝೂನಲ್ಲಿ ಹುಟ್ಟಿದ ಹೆಣ್ಣು ಆರ್ಡ್ವರ್ಕ್
ಹ್ಯಾರಿಪಾಟರ್ ಸಿರೀಸ್‌ನಲ್ಲಿ ಡೊಬ್ಬಿ ಎಂದು ಕರೆಯಲ್ಪಡುತ್ತಿದ್ದ ವೈಜ್ಞಾನಿಕವಾಗಿ ಆರ್ಡ್ವರ್ಕ್ ಎಂದು ಕರೆಯಲ್ಪಡುವ ಪ್ರಾಣಿಯೊಂದು 90 ವರ್ಷಗಳ ಬಳಿಕ ಬ್ರಿಟನ್‌ನ ಝೂ ಒಂದರಲ್ಲಿ ಜನಿಸಿದೆ. ಇಂಗ್ಲೆಂಡ್‌ನ(Englad) ಚೆಸ್ಟರ್ ಝೂನಲ್ಲಿ ಹೆಣ್ಣು ಆರ್ಡ್ವರ್ಕ್ ನ ಜನನವಾಗಿದೆ. ಹ್ಯಾರಿ ಪಾಟರ್ ಸರಣಿಯಲ್ಲಿ ಆರ್ಡ್ವರ್ಕ್‌ನಂತೆಯೇ ಇರುವ ಮನೆಯ ಯಕ್ಷಿಣಿಗೆ ಡೊಬ್ಬಿ ಎಂಬ ಹೆಸರನ್ನು ಇಡಲಾಗಿತ್ತು. ಇದು ಪ್ರಾಣಿಯೂ ಪಾತ್ರಕ್ಕೆ ನಿಕಟ ಹೋಲಿಕೆಯನ್ನು ಹೊಂದಿದೆ.
ಬ್ರಿಟನ್‌ನ ಮೃಗಾಲಯವು ಅಪರೂಪದ ಘಟನೆಗೆ ಸಾಕ್ಷಿಯಾಗಿದ್ದು, 90 ವರ್ಷಗಳಲ್ಲಿ ಮೊದಲ ಬಾರಿಗೆ ಈ ಝೂನಲ್ಲಿ ಆರ್ಡ್‌ವರ್ಕ್‌ನ ಜನನವಾಗಿದೆ. ಈ ಪ್ರಾಣಿ ಜನವರಿ 4 ರಂದು ಚೆಸ್ಟರ್‌ನ ಮೃಗಾಲಯದಲ್ಲಿ ಜನಿಸಿದ್ದು, ಈಗ ಅದು ಹೆಣ್ಣು ಎಂಬುದು ಅಧಿಕೃತವಾಗಿದೆ. ಹ್ಯಾರಿ ಪಾಟರ್ ಸರಣಿಯಲ್ಲಿ ಈ ಪ್ರಾಣಿಗೆ ಡೊಬ್ಬಿ ಎಂದು ಕರೆಯಲಾಗುತ್ತಿತ್ತು. ಈ ಸೀರಿಸ್‌ನ ಆರ್ಡ್ವರ್ಕ್ ಡೊಬ್ಬಿ ಎಂದೇ ಗುರುತಿಸಲ್ಪಟ್ಟಿದೆ. ಹ್ಯಾರಿಪಾಟರ್ ಸರಣಿಯಲ್ಲಿ ಈ ರೀತಿಯ ಪ್ರಾಣಿ ಯಕ್ಷಿಣಿಯ ಪಾತ್ರ ನಿರ್ವಹಿಸುತ್ತಿತ್ತು. ಇದರ ರೂಪ ಪಾತ್ರಕ್ಕೆ ಹತ್ತಿರವಾದ ಹೋಲಿಕೆಯನ್ನು ಹೊಂದಿತ್ತು. ಇತ್ತ ಈ ಆರ್ಡ್ವರ್ಕ್ (Aardvark) ದೊಡ್ಡ ಡ್ರೂಪಿ ಕಿವಿಗಳು, ಕೂದಲು ರಹಿತ ಸುಕ್ಕುಗಟ್ಟಿದ ಚರ್ಮ ಮತ್ತು ದೈತ್ಯ ಉಗುರುಗಳನ್ನು ಹೊಂದಿದೆ.
ಚೆಸ್ಟರ್ ಮೃಗಾಲಯದ (Chester Zoo) ವೆಬ್‌ಸೈಟ್‌ನ ಪ್ರಕಾರ, ಇದಕ್ಕೆ ಶಕ್ತಿ ಸಾಮರ್ಥ್ಯ ತುಂಬುವ ಸಲುವಾಗಿ ಸುಮಾರು ಐದು ವಾರಗಳವರೆಗೆ ರಾತ್ರಿ ಇಡೀ ಪ್ರತಿ ಕೆಲವು ಗಂಟೆಗಳಿಗೊಮ್ಮೆ ಮೃಗಾಲಯದ ಸಿಬ್ಬಂದಿ ಈ ಪ್ರಾಣಿಗೆ ಆಹಾರ ನೀಡಿ ಬಹಳ ಕಾಳಜಿಯಿಂದ ಸಾಕಿದ್ದಾರೆ ಎಂದು ತಿಳಿದು ಬಂದಿದೆ. ಇದಕ್ಕೆ ಹ್ಯಾರಿ ಪಾಟರ್ ಸಿರಿಸ್‌ನಲ್ಲಿ (Harry Potter series) ಇರುವಂತೆಯೇ ಡೊಬ್ಬಿ (Dobby) ಎಂದು ಹೆಸರಿಡಲಾಗಿದೆ. 'ಇದು ಹುಡುಗಿ. ನಮ್ಮ ಹೊಸ ಆರ್ಡ್‌ವರ್ಕ್ ಮರಿ ಡಾಬಿ ಹೆಣ್ಣು ಮಗು ಎಂದು ಬಹಿರಂಗಪಡಿಸಲು ನಾವು ಕಾತುರರಾಗಿದ್ದೇವೆ' ಎಂದು ಚೆಸ್ಟರ್ ಝೂ ಸಿಬ್ಬಂದಿ ಫೆಬ್ರವರಿ 18 ರಂದು ಟ್ವೀಟ್‌ನಲ್ಲಿ ತಿಳಿಸಿದ್ದರು. ಈ ಪೋಸ್ಟ್‌ನ್ನು ಸಾವಿರಾರು ಮಂದಿ ಲೈಕ್ ಮಾಡಿದ್ದಾರೆ. 'ಹೌದು, ನಾನು ಅವಳನ್ನು ಒಂದು ಶೋದಲ್ಲಿ ನೋಡಿದೆ. ಅವಳು ತುಂಬಾ ಮುದ್ದಾಗಿದ್ದಾಳೆ. ನಾನು ಚೆಸ್ಟರ್ ಮೃಗಾಲಯವನ್ನು ಪ್ರೀತಿಸುತ್ತೇನೆ' ಎಂದು ಟ್ವಿಟರ್ ಬಳಕೆದಾರರೊಬ್ಬರು ಈ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ.
ಎರಡು ಎತ್ತುಗಳ ನಡುವಿನ ಜಗಳ ಬಿಡಿಸಿದ ಗೂಳಿ... ನೋಡಿ ವೈರಲ್ ವಿಡಿಯೋ
ಆರ್ಡ್‌ವರ್ಕ್ ಮಧ್ಯಮ ಗಾತ್ರದ ಬಿಲದಲ್ಲಿ ವಾಸಿಸುವ ರಾತ್ರಿಯ ಸಸ್ತನಿಯಾಗಿದ್ದು ಆಫ್ರಿಕಾ (Africa) ಇದರ ಮೂಲ ಪ್ರದೇಶವಾಗಿದೆ. ಇದು ಟ್ಯೂಬುಲಿಡೆಂಟಾಟಾ (Tubulidentata) ಎಂಬ ಪ್ರಭೇಧಕ್ಕೆ ಸೇರಿದ್ದಾಗಿದ್ದು, ಟುಬುಲಿಡೆಂಟಾಟಾ ಪ್ರಭೇಧಕ್ಕೆ ಸೇರಿದ ಜೀವಂತ ಇರುವಂತಹ ಏಕೈಕ ಪ್ರಾಣಿ ಇದಾಗಿದೆ. ಇದು ಉದ್ದವಾದ ಹಂದಿಯಂತಹ ಮೂತಿಯನ್ನು ಹೊಂದಿದೆ. ಇದು ಈ ಮೂತಿಯನ್ನು ಆಹಾರವನ್ನು ಹುಡುಕಲು ಬಳಸುತ್ತದೆ.
ಈ ನಾಯಿಮರಿಗೂ ಬೇಕು ಶವರ್‌ಬಾತ್... ಸಿಂಕ್‌ನಲ್ಲಿ ಸ್ನಾನ ಮಾಡುವ ಶ್ವಾನ
ಇದು ಒ ಅಫೆರ (O.afer) ಜಾತಿಗೆ ಸೇರಿದ್ದು, ಒರಿಕ್ಟೆರೊಪೊಡಿಡೆ (Orycteropodidae) ಕುಟುಂಬವನ್ನು ಹೊಂದಿದ್ದು, ಸಸ್ತನಿ ವರ್ಗಕ್ಕೆ ಸೇರಿದ ಪ್ರಾಣಿಯಾಗಿದೆ. ಟ್ಯೂಬುಲಿಡೆಂಟಾಟಾ (Tubulidentata) ಪ್ರಭೇಧವಾಗಿದ್ದು, ಓರಿಕ್ಟೆರೋಪಸ್ (Orycteropus) ಕುಟುಂಬವನ್ನು ಹೊಂದಿದೆ.