ನೂರಾರು ಮಂದಿ ಅಡಗಿದ್ದ ಚಿತ್ರಮಂದಿರದ ಮೇಲೆ ರಷ್ಯಾ ಬಾಂಬ್ ಗರ್ಭಿಣಿಯರು, ಮಕ್ಕಳು ಅಡಗಿಕುಳಿತಿದ್ದ ಚಿತ್ರ ಮಂದಿರ ಬದುಕುಳಿದ ಮಹಿಳೆಯ ವಿವರಿಸಿದ ಭಯಾನಕ ಘಟನೆ

ಮರಿಯುಪೊಲ್(ಮಾ.23): ರಷ್ಯಾ ದಾಳಿಯಿಂದ ತಪ್ಪಿಸಿಕೊಳ್ಳಲು ಗರ್ಭಿಣಿಯರು, ಮಕ್ಕಳು ಸೇರಿದಂತೆ ನೂರಾರು ಮಂದಿ ಮರಿಯುಪೊಲ್‌ನ ಚಿತ್ರಮಂದಿರದಲ್ಲಿ ಅಡಗಿ ಕುಳಿತಿದ್ದರು. ಆದರೆ ನಗರ ವಶಪಡಿಸಿಕೊಳ್ಳಲು ಮುಂದಾಗಿದ್ದ ರಷ್ಯಾ ಕಟ್ಟದೊಳಗೆ ಮಕ್ಕಳಿದ್ದಾರೆ ಅನ್ನೋ ಅರಿವು ಇದ್ದರೂ ಬಾಂಬ್ ಹಾಗೂ ಕ್ಷಿಪಣಿ ದಾಳಿ ಮಾಡಿತ್ತು. ಕಲ್ಪಿಸಿ ಕೊಳ್ಳಲು ಅಸಾಧ್ಯವಾದ ಭಯಾನಕ ದಾಳಿ ಇದಾಗಿತ್ತು. ಈ ದಾಳಿಯಲ್ಲಿ ಬದುಕುಳಿದ 27ರ ಹರೆಯದ ಮಹಿಳೆ ಮರಿಯಾ ರೋಡಿನೋವಾ ತಮ್ಮ ಪುನರ್ಜನ್ಮದ ಕುರಿತು ವಿವರಿಸಿದ್ದಾರೆ.

ಮರಿಯುಪೊಲ್‌ನಲ್ಲಿ ರಷ್ಯಾ ಚ್ರಿತ್ರಮಂದಿರದ ಮೇಲೆ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಬದುಕುಳಿದ ಮರಿಯಾ ಜೊತೆ ಬಿಬಿಸಿ ಮಾಧ್ಯಮ ಸಂದರ್ಶನ ನಡೆಸಿದೆ. ಶಿಕ್ಷಕಿಯಾಗಿರು ಮರಿಯಾ, ಚಿತ್ರ ಮಂದಿರದ ಮೇಲಿರುವ ಕಟ್ಟದ 9ನೇ ಮಹಡಿಯಲ್ಲಿ ವಾಸವಾಗಿದ್ದರು. ಮರಿಯುಪೋಲ್‌ನತ್ತ ಧಾವಿಸಿದ ರಷ್ಯಾ ಸೇನೆ ದಾಳಿ ಆರಂಭಿಸಿತ್ತು. ಹೀಗಾಗಿ ಎಲ್ಲರೂ ನೆಲ ಮಹಡಿಯಲ್ಲಿದ್ದ ಚಿತ್ರ ಮಂದಿರದಲ್ಲಿ ಆಶ್ರಯ ಪಡೆದಿದ್ದರು.

ಮಕ್ಕಳು, ಗರ್ಭಿಣಿಯರ ಕಟ್ಟಡದ ಮೇಲೆ ವಾಯುದಾಳಿ.. ನಿಲ್ಲದ ರಷ್ಯಾ ಹಾವಳಿ

ಹೆಚ್ಚಾಗಿ ಪುಟಾಣಿ ಮಕ್ಕಳು, ಗರ್ಭಿಣಿಯರು, ಮಹಿಳೆಯರೇ ತುಂಬಿದ್ದ ಈ ಕಟ್ಟದ ಮೇಲೆ ಮಕ್ಕಳಿದ್ದಾರೆ ಎಂದು ದೊಡ್ಡದಾಗಿ ಬರೆಯಲಾಗಿತ್ತು. ಈ ಮೂಲಕ ರಷ್ಯಾ ದಾಳಿ ಮಾಡುವುದರಿಂದ ಹಿಂದೆ ಸರಿಯಲಿದೆ ಅನ್ನೋ ಲೆಕ್ಕಾಚಾರವಾಗಿತ್ತು. ಆದರೆ ಮೇಲಿಂದ ಕ್ಷಿಪಣಿ ಹಾಗೂ ಬಾಂಬ್ ದಾಳಿ ಮಾಡುವಾಗ ರಷ್ಯಾ ಸೈನಿಕರು ಇದ್ಯಾವುದನ್ನು ಗಮನಿಸಲೇ ಇಲ್ಲ. ನೇರವಾಗಿ ಬಾಂಬ್ ದಾಳಿ ಮಾಡಿದ್ದಾರೆ.

10 ದಿನಗಳಿಂದ ಕಟ್ಟದ ಕಳೆಭಾಗದಲ್ಲಿರುವ ಚಿತ್ರಮಂದಿರದಲ್ಲಿ ನಾವೆಲ್ಲಾ ಆಶ್ರಯ ಪಡೆದಿದ್ದೇವು.ನನ್ನ ಎರಡು ನಾಯಿ ಮರಿಗಳು ಕೂಡ ಇರುವ ಆಹಾರದಲ್ಲಿ ದಿನ ದೂಡುತಿತ್ತು. ಆದರೆ ನೀರು ಸಿಗದೆ ನಾಯಿ ಮರಿಗಳು ಅಸ್ವಸ್ಥಗೊಂಡಿತ್ತು. ಹೀಗಾಗಿ ನಾಯಿ ಮರಿಯೊಂದಿಗೆ ಚಿತ್ರಮಂದಿರ ಮುಖ್ಯದ್ವಾರದತ್ತೆ ತೆರಳಿದ್ದೆ. ಅಲ್ಲಿ ನೀರಿಗಾಗಿ ದೊಡ್ಡ ಕ್ಯೂ ಇತ್ತು.

ಅಷ್ಟರಲ್ಲೇ ದೊಡ್ಡ ಶಬ್ದ ಕೇಳಿತ್ತು. ಕಟ್ಟದ ಕಂಪಿಸಿತು. ಗಾಜಿನ ಚೂರುಗಳು, ಕಟ್ಟದ ಭಾಗಗಳು ಅಪ್ಪಳಿಸತೊಡಗಿತು. ಹಿಂಭಾಗದಲ್ಲಿದ್ದ ವ್ಯಕ್ತಿ ತಕ್ಷಣವೇ ನನ್ನನ್ನು ಗೋಡೆಯ ಬದಿಗೆ ನೂಕಿದರು. ಅತೀವ ಶಬ್ದಕ್ಕೆ ನನ್ನ ಕಿವಿಗಳು ನೋವಾಗ ತೊಡಗಿತು. ಸ್ಫೋಟಕಕ್ಕೆ ಕಟ್ಟವೇ ಹೋಳಾಗಿತ್ತು. ಸ್ಫೋಟದ ತೀರ್ವತೆಗೆ ವ್ಯಕ್ತಿಯೊಬ್ಬರು ಕಿಟಕಿಗೆ ಬಡಿದು ನೆಲಕ್ಕುರಳಿದ್ದರು. ಅವರ ಮುಖ, ದೆಹಕ್ಕೆ ಗಾಜಿನ ಚೂರುಗಳು ಹೊಕ್ಕಿತ್ತು

Russia Ukraine war ಮರಿಯುಪೋಲ್‌ ಶರಣಾಗತಿಗೆ ಉಕ್ರೇನ್‌ ನಕಾರ

ನೀರಿಗಾಗಿ ಬಂದ ಮಹಿಳೆ ತಲೆಗೆ ಗಾಯವಾಗಿತ್ತು. ಚಿತ್ರಮಂದಿರದ ಮೇಲಿನ ಕಟ್ಟ ಸಂಪೂರ್ಣವಾಗಿ ನೆಲಕ್ಕುರುಳಿತು. ಚಿತ್ರದ ಮಂದಿರದೊಳಗೂ ಬಾಂಬ್ ಸ್ಫೋಟದ ತೀವ್ರತೆ ಇತ್ತು. ಹಲವರು ಸಾವೀಗಿಡಾದರು. ಮಕ್ಕಳು, ಮಹಿಳೆಯರ ಆಕ್ರಂದನ ಕೇಳಿಸುತ್ತಿತ್ತು. ನನಗೆ ಚಿತ್ರಮಂದಿರಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಕಾರಣ ಕಟ್ಟದ ಸಂಪೂರ್ಣನಾಶವಾಗಿತ್ತು. ಹಲವರು ಸಿಲುಕಿದ್ದರು. 

ಮಹಿಳೆಯೊಬ್ಬರು ಧರೆಗುರಳಿದ ಕಟ್ಟದ ಕೆಳಗೆ ತನ್ನ ಮಗುವನ್ನು ಹುಡುಕುತ್ತಿದ್ದರು, ಮಕ್ಕಳು ಗಾಯ ಹಾಗೂ ಭಯದಿಂದ ಅಳುತ್ತಿದ್ದರು. ಈ ಪರಿಸ್ಥಿತಿ ಯಾವ ಶತ್ರುವಿಗೂ ಬರಬಾರದು. ಆದರೆ ಏನೂ ಅರಿಯದ ಮಕ್ಕಳ ಮೇಲೂ ದಾಳಿ ಮಾಡಲಾಗುತ್ತಿದೆ. ಎಲ್ಲವೂ ಕಣ್ಣ ಮುಂದೆ ನಡೆಯುತ್ತಿದ್ದರೂ ಏನೂ ಮಾಡಲಾಗದ ಪರಿಸ್ತಿತಿ ನನ್ನದಾಗಿತ್ತು ಎಂದು ಮರಿಯಾ ಹೇಳಿದ್ದಾರೆ