800 ಮಕ್ಕಳ ತಂದೆಯಾದ ಹಾಲು ಮಾರಾಟಗಾರ, ಎಂಬ ಸುದ್ದಿ ವೈರಲ್ ಡಿಎನ್ಎ ಪರೀಕ್ಷೆಯಲ್ಲಿ ರಹಸ್ಯ ಬಯಲು, ಇದು ವಿಡಂಬನಾತ್ಮಕ ವೆಬ್‌ಸೈಟ್ ಪ್ರಕಟಿಸಿದ ಸುದ್ದಿ. ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಘಟನೆ ಎಂದು ಹಲವು ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಲಾಗಿತ್ತು.

ಈ ಸುದ್ದಿಯನ್ನು 24 ಡಿಸೆಂಬರ್ 2021 ರಂದು ‘ಡೈಲಿ ನ್ಯೂಸ್ ರಿಪೋರ್ಟೆಡ್’ ಎಂಬ satirical website ಒಂದು ಪ್ರಕಟಿಸಿತ್ತು. ಈ ಸುದ್ದಿಯಲ್ಲಿ ಪ್ರಕಟವಾದ ಅಂಶಗಳು ಕೇವಲ ಮೂಲ ವೆಬ್‌ಸೈಟಿನಿಂದ ತೆಗೆದುಕೊಂಡಿದ್ದು, ಇದರಲ್ಲಿ ಯಾವುದ ಹುರುಳಿಲ್ಲ. ಕೇವಲ ತಮಾಷೆಗಾಗಿ ಈ ಸುದ್ದಿಯನ್ನು ಪ್ರಟಿಸಲಾಗಿದೆ. ಈ ಸುದ್ದಿಗಳಲ್ಲಿರುವ ಅಂಶಗಳು ಸತ್ಯಕ್ಕೆ ದೂರವಾದದ್ದು. 

ಕ್ಯಾಲಿಪೋರ್ನಿಯಾ(ಜ.13): ಹಾಲು ಮಾರಾಟಗಾರನೋರ್ವ 10 ವರ್ಷಗಳಲ್ಲಿ 800 ಮಕ್ಕಳಿಗೆ ತಂದೆಯಾದ ಘಟನೆ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ. ಡಿಎನ್‌ಎ ಪರೀಕ್ಷೆಯಿಂದ ಈ ರಹಸ್ಯ ಬಯಲಾಗಿದೆ. 1950 ರಿಂದ 1960 ರ ದಶಕದಲ್ಲಿ, ರಾಂಡಾಲ್(Randall) (ಇದು ಕಾಲ್ಪನಿಕವಾದ ಹೆಸರಾಗಿದ್ದು, ಸುದ್ದಿಗೂ, ಈ ಹೆಸರುಳ್ಳ ವ್ಯಕ್ತಿಗೂ ಯಾವುದೇ ಸಂಬಂಧ ಇರುವುದಿಲ್ಲ) ಎಂಬ ವ್ಯಕ್ತಿ ಮನೆಗೆ ಹಾಲು ಮಾರುತ್ತಿದ್ದನು. ಆ ಸಮಯದಲ್ಲಿ ಪ್ಯಾಕ್ ಮಾಡಿದ ರೀತಿ ಹಾಲನ್ನು ಮಾರಾಟ ಮಾಡುತ್ತಿರಲಿಲ್ಲ. ಹಾಲಿನ ಕಂಟೈನರ್‌ಗಳು ಆಗ ಇಲ್ಲದ ಕಾರಣ, ಹಾಲು ಮಾರಾಟಗಾರ ರಾಂಡಾಲ್, ಸ್ಯಾನ್ ಡಿಯಾಗೋ (San Diego )ದ ನೆರೆಹೊರೆಯ ಮನೆಗಳಿಗೆ ಹಾಲನ್ನು ಮಾರಾಟ ಮಾಡುತ್ತಿದ್ದ. 

ರಾಂಡಾಲ್ ಹಾಲು ಕೊಳ್ಳುತ್ತಿದ್ದ ಮಹಿಳೆಯರೊಂದಿಗೆ ಉತ್ತಮ ಸಂಬಂಧ ಹೊಂದಿದ್ದ. ನೋಡಲು ಸ್ಪುರದ್ರೂಪಿಯಾದ ಈತನನ್ನು ಮಹಿಳೆಯರು ಒಲಿಸಿಕೊಳ್ಳಲು ಯತ್ನಿಸುತ್ತಿದ್ದರಂತೆ. ರಾಂಡಾಲ್ ಅನೇಕ ಸೈನಿಕರ ಪತ್ನಿಯರ ಜೀವನದಲ್ಲಿ ನಿರಂತರ ಬರುವ ವ್ಯಕ್ತಿಯಾಗಿದ್ದ. ಆ ಕಾಲದಲ್ಲಿ ತಂತ್ರಜ್ಞಾನದ ಬಳಕೆ ಇಲ್ಲದ ಕಾರಣ ಅಕ್ರಮ ಸಂಬಂಧಗಳು ಹೊರಗಿನವರಿಗೆ ಗೊತ್ತಿರಲಿಲ್ಲ. ತುಂಬಾ ಆಕರ್ಷಕವಾಗಿದ್ದ ರಾಂಡಾಲ್ ಮೇಲೆ ಮಹಿಳೆಯರು ವಾಲುತ್ತಿದ್ದರು. 

Youngest Father : ಆಟವಾಡೋ ವಯಸ್ಸಿಗೆ ತಂದೆಯಾಗಿದ್ದಾರೆ ಈ ಮಕ್ಕಳು!

ಆದರೆ ಇದು ಹೊಸ ಸಮಸ್ಯೆಯನ್ನು ಹುಟ್ಟುಹಾಕಿತು. ಮಹಿಳೆಯರಿಗೆ ಜನಿಸಿದ ಮಕ್ಕಳು ಅವರ ತಂದೆಯಂತಿರಲಿಲ್ಲ. ವಿಭಿನ್ನ ಮೈಬಣ್ಣ, ವಿವಿಧ ರೀತಿಯ ಕೂದಲುಗಳನ್ನು ಅವರು ಹೊಂದಿದ್ದರು. ಇದು ಸ್ಯಾನ್ ಡಿಯಾಗೋ ಪ್ರದೇಶದಲ್ಲಿ ಡಿಎನ್‌ಎ ಟೆಸ್ಟ್ ನಡೆಸಬೇಕು ಎಂಬ ವಾದಕ್ಕೆ ಕಾರಣವಾಯಿತು. ನಂತರ ಡಿಎನ್‌ಎ ಪರೀಕ್ಷೆ ನಡೆದು, ಎಲ್ಲಾ ಮಕ್ಕಳು ತಮ್ಮ ತಂದೆಯ ರಕ್ತ ಸಂಬಂಧವನ್ನು ಹೊಂದಿಲ್ಲ ಎಂದು ತಿಳಿದು ಬಂತು. ಇದು ಭಾರೀ ವಿವಾದ ಸೃಷ್ಟಿಸಿತ್ತು. 

4 ಮಕ್ಕಳ ತಂದೆಯಾದ ನಂತರವೂ ಜೀನತ್‌ ಅಮಾನ್‌ ಜೊತೆ ಸಂಬಂಧ ಹೊಂದಿದ್ದ Sanjay Khan!

ನಂತರ ವಿಜ್ಞಾನಿಗಳು ರಾಂಡಾಲ್‌ನ ಡಿಎನ್‌ಎಯನ್ನು ಪರೀಕ್ಷಿಸಿದಾಗ ನಂಬಲಾಗದ ಸತ್ಯಗಳು ಹೊರಬಂದವು. ನೂರಾರು ಪರೀಕ್ಷೆಗಳ ನಂತರ, 800 ಕ್ಕೂ ಹೆಚ್ಚು ಮಕ್ಕಳ ಡಿಎನ್‌ಎ ರಾಂಡಾಲ್‌ನ ಡಿಎನ್‌ಎಯನ್ನು ಹೋಲುತ್ತಿತ್ತು. ಈ ವಿಚಾರ ತಿಳಿದ ಡಿಎನ್‌ಎ ಪರೀಕ್ಷೆ ಮಾಡಿದ ವಿಜ್ಞಾನಿಗಳು ಆಘಾತಕ್ಕೊಳಗಾಗಿದ್ದಾರೆ. ರಾಂಡಾಲ್‌ಗೆ ಆಗ ಹೆಂಡತಿ ಇದ್ದರು ಮಕ್ಕಳಿರಲಿಲ್ಲ. ಪ್ರಸ್ತುತ 97 ವರ್ಷದ ರಾಂಡಾಲ್‌ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ನಾನೀಗ ಒಂಟಿ ಜೀವ ಅಂದು ಕೊಂಡಿದ್ದೆ. ಆದರೆ ನಮಗೆ ಆಶೀರ್ವಾದ ಸಿಕ್ಕಿದೆ. ಎಲ್ಲಾ ಮಕ್ಕಳನ್ನು ನಾನು ಭೇಟಿಯಾಗಲು ಬಯಸುತ್ತೇನೆ ಎಂದು ಹೇಳಿದ್ದಾನೆ ಎಂದು ಇಂಗ್ಲಿಷ್‌ನ ಅನೇಕ ವೆಬ್‌ಸೈಟ್‌ಗಳು ವರದಿ ಮಾಡಿವೆ. ಆದರೆ, ಮೂಲ ಸುದ್ದಿಯೇ ಸುಳ್ಳು. 

ದೇಶದಲ್ಲಿ ಹೆಣ್ಣು ಮಕ್ಕಳ (Females )ಕನಿಷ್ಠ ವಿವಾಹ (Wedding ) ವಯೋಮಿತಿಯನ್ನು 21 ವರ್ಷಕ್ಕೆ ಹೆಚ್ಚಿಸುವ ಹೊಸ ಕಾನೂನು (Law )ಚರ್ಚೆಯಲ್ಲಿದೆ. ಹಿಂದೆ ಭಾರತದಲ್ಲಿ ಬಾಲ್ಯ ವಿವಾಹ(Child Marriage)ಗಳು ನಡೆಯುತ್ತಿದ್ದವು. ಚಿಕ್ಕ ವಯಸ್ಸಿನಲ್ಲಿಯೇ ಅನೇಕರು ಪಾಲಕರಾಗಿದ್ದಾರೆ. ಆಟವಾಡುವ ಸಮಯದಲ್ಲಿ ಮಕ್ಕಳ ಪಾಲನೆ ಜವಾಬ್ದಾರಿ ಹೊತ್ತವರ ಸಂಖ್ಯೆ ಸಾಕಷ್ಟಿದೆ. ಕೆಲ ಬುಡಕಟ್ಟು ಕುಟುಂಬಗಳಲ್ಲಿ ಈಗ್ಲೂ ಬಾಲ್ಯ ವಿವಾಹ ಚಾಲ್ತಿಯಲ್ಲಿದೆ. ಚಿಕ್ಕ ವಯಸ್ಸಿನಲ್ಲಿ ತಾಯಿಯಾಗಿದ್ದೊಂದೇ ಅಲ್ಲ ಚಿಕ್ಕ ವಯಸ್ಸಿನಲ್ಲಿಯೇ ತಂದೆ(Father)ಯಾದ ಅನೇಕ ಪ್ರಕರಣಗಳಿವೆ. 13-14 ವರ್ಷ ವಯಸ್ಸಿನಲ್ಲೇ ತಂದೆಯಾದ ಪ್ರಕರಣಗಳು ಚರ್ಚೆಗೆ ಬರುತ್ತಿರುತ್ತವೆ. ಸಂತಾನೋತ್ಪತ್ತಿಯ ಕನಿಷ್ಠ ವಯಸ್ಸು ಹುಡುಗರಲ್ಲಿ 14 ವರ್ಷಗಳು ಮತ್ತು ಹುಡುಗಿಯರಲ್ಲಿ ಸುಮಾರು 13 ವರ್ಷಗಳು ಎಂದು ವೈದ್ಯರು ಹೇಳ್ತಾರೆ. ಆದ್ರೆ 11 ವರ್ಷದಲ್ಲಿಯೇ ತಂದೆಯಾದವರಿದ್ದಾರೆ. 

ಹಲವು ವರ್ಷಗಳ ಹಿಂದೆ ಇಂಥ ಪ್ರಕರಣ ನ್ಯೂಜಿಲೆಂಡ್‌ (New Zealand)ನ ಕೋರ್ಟ್‌ (Court )ಮೆಟ್ಟಿಲೇರಿತ್ತು. ತಂದೆಯಾದ ಹುಡುಗನ ವಯಸ್ಸು ಕೇವಲ 11 ವರ್ಷವಾಗಿತ್ತು. ಈ ಪ್ರಕರಣ(Case)ದಲ್ಲಿ ತಾಯಿ ದೊಡ್ಡ ವಯಸ್ಸಿನವಳು. ಪ್ರಕರಣದಲ್ಲಿ ತಂದೆ ಹಾಗೂ ತಾಯಿ ಹೆಸರನ್ನು ರಹಸ್ಯವಾಗಿಡಲಾಗಿತ್ತು. ನ್ಯೂಜಿಲೆಂಡ್ ದಾಖಲೆ ಪ್ರಕಾರ, 2008 ರಲ್ಲಿ 15 ವರ್ಷದೊಳಗೆ 11 ಮಂದಿ ತಂದೆಯಾಗಿದ್ದರು. 2007 ರಲ್ಲಿ ಈ ಅಂಕಿ 15 ಆಗಿತ್ತು.