Asianet Suvarna News Asianet Suvarna News

4700 ಮೌಲ್ಯದ ಡಿಯೋರ್‌ ಬ್ಯಾಗ್‌ 2 ಲಕ್ಷಕ್ಕೆ ಮಾರಾಟ: ವರದಿಯಲ್ಲೇನಿದೆ

ಡಿಯೋರ್‌ ಮತ್ತು ಜಾರ್ಜಿಯಾ ಅರ್ಮಾನಿ ಕಂಪನಿಗಳು, ಉತ್ಪಾದಕರಿಂದ ಹೇಗೆ, ಯಾವ ರೀತಿ ವಸ್ತುಗಳನ್ನು ಖರೀದಿಸುತ್ತವೆ. ಉತ್ಪಾದನೆ ವೇಳೆ ಕಾರ್ಮಿಕರನ್ನು ಹೇಗೆ ನಡೆಸಿಕೊಳ್ಳುತ್ತದೆ ಎಂದು ಇಟಲಿಯ ಅಧಿಕಾರಿಗಳು ತನಿಖೆ ನಡೆಸಿದ ವೇಳೆ ಈ ವಿಷಯ ಬೆಳಕಿಗೆ ಬಂದಿದೆ ಎಂದು ಅಮೆರಿಕದ ವಾಲ್‌ಸ್ಟ್ರೀಟ್‌ ಜರ್ನಲ್‌ ಪತ್ರಿಕೆ ವರದಿ ಮಾಡಿದೆ.
 
Dior Armani buys bags worth Rs 4700 from suppliers resell it for lakhs Report gvd
Author
First Published Jul 5, 2024, 8:46 AM IST

ಪ್ಯಾರಿಸ್‌ (ಜು.05): ಐಷಾರಾಮಿ ಫ್ಯಾಷನ್‌ ವಸ್ತುಗಳನ್ನು ಉತ್ಪಾದಿಸುವ ಫ್ರಾನ್ಸ್‌ ಮೂಲ ಡಿಯೋರ್‌ ಕಂಪನಿ, ತನ್ನ ಉತ್ಪನ್ನಗಳನ್ನು ಉತ್ಪಾದನಾ ದರಕ್ಕಿಂತ ನೂರಾರು ಹೆಚ್ಚುಪಟ್ಟು ದರಕ್ಕೆ ಮಾರಾಟ ಮಾಡುತ್ತಿದೆ. ಮತ್ತೊಂದೆಡೆ ಉತ್ಪನ್ನ ತಯಾರಿಕೆಯಲ್ಲಿ ನಿರತ ಕಾರ್ಮಿಕರನ್ನು ಅತ್ಯಂತ ನಿಕೃಷ್ಟವಾಗಿ ನಡೆಸಿಕೊಳ್ಳುತ್ತಿದೆ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

ಡಿಯೋರ್‌ ಮತ್ತು ಜಾರ್ಜಿಯಾ ಅರ್ಮಾನಿ ಕಂಪನಿಗಳು, ಉತ್ಪಾದಕರಿಂದ ಹೇಗೆ, ಯಾವ ರೀತಿ ವಸ್ತುಗಳನ್ನು ಖರೀದಿಸುತ್ತವೆ. ಉತ್ಪಾದನೆ ವೇಳೆ ಕಾರ್ಮಿಕರನ್ನು ಹೇಗೆ ನಡೆಸಿಕೊಳ್ಳುತ್ತದೆ ಎಂದು ಇಟಲಿಯ ಅಧಿಕಾರಿಗಳು ತನಿಖೆ ನಡೆಸಿದ ವೇಳೆ ಈ ವಿಷಯ ಬೆಳಕಿಗೆ ಬಂದಿದೆ ಎಂದು ಅಮೆರಿಕದ ವಾಲ್‌ಸ್ಟ್ರೀಟ್‌ ಜರ್ನಲ್‌ ಪತ್ರಿಕೆ ವರದಿ ಮಾಡಿದೆ.

ವರದಿ ಅನ್ವಯ, ಡಿಯೋರ್ ಕೇವಲ 4700 ರು. ವೆಚ್ಚವಾಗುವ ಹ್ಯಾಂಡ್ ಬ್ಯಾಗ್‌ನ್ನು ಬರೋಬ್ಬರಿ 2 ಲಕ್ಷ ರು. ಗೆ ಗ್ರಾಹಕರಿಗೆ ಮಾರಾಟ ಮಾಡುತ್ತದೆ. ಇನ್ನೊಂದೆಡೆ ಇಟಲಿಯ ಅರ್ಮಾನಿ 8,385 ಬೆಲೆಯ ಬ್ಯಾಗ್‌ಗಳನ್ನು 22,540 ರುಗೆ ಪೂರೈಕೆದಾರರಿಂದ ಖರೀದಿಸಿ 1.62 ಲಕ್ಷ ಮಾರಾಟ ಮಾಡುತ್ತದೆ.

ಬೆಂಗಳೂರು ಸೇರಿ 10 ನಗರಗಳ ನಿತ್ಯ ಸಾವಿನಲ್ಲಿ ಮಾಲಿನ್ಯದ ಪಾಲು ಶೇ.7: ಆಘಾತಕಾರಿ ಮಾಹಿತಿ ಬಹಿರಂಗ

ಹೀಗೆ ಕಡಿಮೆ ಬೆಲೆಗೆ ತಯಾರಾಗುವ ವಸ್ತುಗಳನ್ನು ದುಬಾರಿ ದರಕ್ಕೆ ಮಾರಾಟ ಮಾಡುವ ಈ ಕಂಪನಿಗಳು ತಮ್ಮ ಕಂಪೆನಿಯ ನೌಕರರಿಗೆ ಅದಕ್ಕೆ ತಕ್ಕನಾದ ವೇತನ ನೀಡುತ್ತಿಲ್ಲ. ಚೀನಾದಿಂದ ಕರೆತರುವ ಕಾರ್ಮಿಕರನ್ನು ಮಲಗಲೂ ಸೂಕ್ತ ವ್ಯವಸ್ಥೆ ಕಲ್ಪಿಸದೇ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ವರದಿ ಹೇಳಿದೆ.

Latest Videos
Follow Us:
Download App:
  • android
  • ios