ಬೆಂಗಳೂರು ಸೇರಿ 10 ನಗರಗಳ ನಿತ್ಯ ಸಾವಿನಲ್ಲಿ ಮಾಲಿನ್ಯದ ಪಾಲು ಶೇ.7: ಆಘಾತಕಾರಿ ಮಾಹಿತಿ ಬಹಿರಂಗ
ಭಾರತದ ಅತ್ಯಂತ ದೊಡ್ಡ ಮತ್ತು ಹೆಚ್ಚು ಕಲುಷಿತ ಟಾಪ್ 10 ನಗರಗಳಲ್ಲಿ ನಿತ್ಯ ಸಂಭವಿಸುವ ಸಾವಿನಲ್ಲಿ ಮಾಲಿನ್ಯದ ಕೊಡುಗೆಯೇ ಶೇ.7.2ರಷ್ಟಿದೆ ಎಂಬ ಆಘಾತಕಾರಿ ಮಾಹಿತಿಯನ್ನು ‘ದಿ ಲ್ಯಾನ್ಸೆಟ್ ಪ್ಲಾನೆಟರಿ ಹೆಲ್ತ್ ಜರ್ನಲ್’ ನ ವರದಿ ಬಹಿರಂಗಪಡಿಸಿದೆ.
ನವದೆಹಲಿ (ಜು.05): ಭಾರತದ ಅತ್ಯಂತ ದೊಡ್ಡ ಮತ್ತು ಹೆಚ್ಚು ಕಲುಷಿತ ಟಾಪ್ 10 ನಗರಗಳಲ್ಲಿ ನಿತ್ಯ ಸಂಭವಿಸುವ ಸಾವಿನಲ್ಲಿ ಮಾಲಿನ್ಯದ ಕೊಡುಗೆಯೇ ಶೇ.7.2ರಷ್ಟಿದೆ ಎಂಬ ಆಘಾತಕಾರಿ ಮಾಹಿತಿಯನ್ನು ‘ದಿ ಲ್ಯಾನ್ಸೆಟ್ ಪ್ಲಾನೆಟರಿ ಹೆಲ್ತ್ ಜರ್ನಲ್’ ನ ವರದಿ ಬಹಿರಂಗಪಡಿಸಿದೆ. ಬೆಂಗಳೂರು ಸೇರಿದಂತೆ ದೆಹಲಿ, ಮುಂಬೈಗಳಂತಹ ನಗರಗಳಲ್ಲಿನ ಗಾಳಿಯಲ್ಲಿ ವಿಶ್ವ ಸಂಸ್ಥೆಯಿಂದ ಸುರಕ್ಷಿತ ಎಂದು ಪರಿಗಣಿಸಲ್ಪಡುವುದಕ್ಕಿಂತ ಹೆಚ್ಚಿನ ಪ್ರಮಾಣದ ಪಿಎಂ 2.5 (ಪರ್ಟಿಕ್ಯುಲೇಟ್ ಮ್ಯಾಟರ್) ಇದೆ ಎಂದು ವರದಿ ಹೇಳಿದೆ.
ಭಾರತದ ಇತರೆ ನಗರಗಳಿಗೆ ಹೋಲಿಸಿದರೆ ದೆಹಲಿಯಲ್ಲಿ ವಾಯು ಮಾಲಿನ್ಯಕ್ಕೆ ಬಲಿಯಾಗುವವರ ಪ್ರಮಾಣ ಹೆಚ್ಚಿದೆ. ವಾಹನ ಹಾಗೂ ಕಾರ್ಖಾನೆಗಳಿಂದ ಹೊರಹೊಮ್ಮುವ ಮಾಲಿನ್ಯವೇ ಇದಕ್ಕೆ ಕಾರಣ ಎಂದು ವರದಿ ಹೇಳಿದೆ.ವಿಶ್ವ ಆರೋಗ್ಯ ಸಂಸ್ಥೆಯು 24 ಗಂಟೆಗಳ ಅವಧಿಯಲ್ಲಿ ಪ್ರತಿ ಕ್ಯುಬಿಕ್ ಮೀಟರ್ ಪ್ರದೇಶದಲ್ಲಿ 15 ಮೈಕ್ರೋಗ್ರಾಂಗಿಂತ ಕಡಿಮೆ ಪಿಎಂ 2.5 ಇದ್ದರೆ ಅದನ್ನು ಸುರಕ್ಷಿತ ಎನ್ನುತ್ತದೆ.
ಆದರೆ ಭಾರತದ ವಾಯುಗುಣಮಟ್ಟ ಸೂಚ್ಯಂಕದ ಅನ್ವಯ 60 ಮೈಕ್ರೋಗ್ರಾಂ ಇದ್ದರೆ ಅದನ್ನು ಸುರಕ್ಷಿತ ಎಂದು ಪರಿಗಣಿಸಲಾಗುತ್ತದೆ.ವಾರಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯ ಹಾಗೂ ದೆಹಲಿಯ ದೀರ್ಘಕಾಲದ ರೋಗ ನಿಯಂತ್ರಣ ಕೇಂದ್ರದ ಸಂಶೋಧಕರು ಅಂತಾರಾಷ್ಟ್ರೀಯ ತಂಡದೊಂದಿಗೆ ಸೇರಿಕೊಂಡು ಈ ಅಧ್ಯಯನ ನಡೆಸಿದ್ದು, 2008-2019ರ ನಡುವೆ ಸಂಭವಿಸಿದ 36 ಲಕ್ಷ ಸಾವುಗಳನ್ನು ಗಣನೆಗೆ ತೆದುಕೊಳ್ಳಲಾಯಿತು.
ದೆಹಲಿಯಲ್ಲಿ ಗಾರೆ ಕೆಲಸ ಮಾಡಿದ ರಾಹುಲ್ ಗಾಂಧಿ: ಮೆಟ್ಟಿಲು ಕಟ್ಟಿದ ವಿಪಕ್ಷ ನಾಯಕ!
ಜೊತೆಗೆ ಅಧ್ಯಯನದ ವೇಳೆ ದೆಹಲಿಯಲ್ಲಿ ಪ್ರತಿ ಕ್ಯುಬಿಕ್ ಮೀಟರ್ ಪ್ರದೇಶದಲ್ಲಿ ಪಿಎಂ 2.5 ಪ್ರಮಾಣವು ಶೇ.10ರಷ್ಟು ಅಧಿಕವಾದರೆ ಸಾವಿನ ಪ್ರಮಾಣದಲ್ಲಿ ಶೇ.0.31ರಷ್ಟು ಏರಿಕೆ ಕಂಡುಬಂದಿತ್ತು. ಇನ್ನು ಬೆಂಗಳೂರಿನಲ್ಲಿ ಶೇ.3.06ರಷ್ಟು ಏರಿಕೆ ಕಂಡುಬಂದರೆ ಸಾವಿನ ಪ್ರಮಾಣದಲ್ಲಿ ಶೇ.0.31ರಷ್ಟು ಏರಿಕೆ ಕಂಡುಬಂದಿತ್ತು.