ಕೊರೋನಾ ಟೈಮ್ನಲ್ಲಿ ಲಾಕ್ಡೌನ್ಗೆ ವಿರೋಧಿಸಿದ್ದ ರಿಷಿ ಸುನಕ್, 'ಜನ ಸಾಯಲಿ ಬಿಡಿ' ಎಂದಿದ್ದರಂತೆ!
ಕೋವಿಡ್-19 ಸಮಯದಲ್ಲಿ ಲಾಕ್‌ಡೌನ್‌ಅನ್ನು ಅತಿಯಾಗಿ ವಿರೋಧಿಸಿದ್ದ ಬ್ರಿಟನ್ ಅಧ್ಯಕ್ಷ ರಿಷಿ ಸುನಕ್, ಜನ ಬೇಕಾದರೆ ಸಾಯಲಿ ಎಂದು ಹೇಳಿದ್ದರು ಎಂದು ಕೋವಿಡ್ ವೇಳೆ ಬ್ರಿಟನ್ ಸರ್ಕಾರದ ಮುಖ್ಯ ವೈಜ್ಞಾನಿಕ ಸಲಹೆಗಾರರಾಗಿದ್ದ ಪ್ಯಾಟ್ರಿಕ್ ವಾಲೆನ್ಸ್ ತಮ್ಮ ಡೈರಿಯಲ್ಲಿ ಬರೆದಿದ್ದ ಅಂಶ ಬೆಳಕಿಗೆ ಬಂದಿದೆ.

ನವದೆಹಲಿ (ನ.21): ಕೊರೋನಾ ವೈರಸ್‌ನ 2ನೇ ಅಲೆ 2020ರ ಸಮಯದಲ್ಲಿ ವ್ಯಾಪಕವಾಗಿತ್ತು. ಈ ವೇಳೆ ಎರಡನೇ ಲಾಕ್‌ಡೌನ್ ಹೇರುವುದನ್ನು ಅಂದು ಬ್ರಿಟನ್‌ನ ಹಣಕಾಸು ಸಚಿವರಾಗಿದ್ದ ಹಾಲಿ ಪ್ರಧಾನಿ ರಿಷಿ ಸುನಕ್ ದೊಡ್ಡ ಮಟ್ಟದಲ್ಲಿ ವಿರೋಧಿಸಿದ್ದರು. ಹಣಕಾಸು ಸಚಿವರಾಗಿದ್ದ ಅವರು, ಜನರು ಬೇಕಾದರೆ ಸಾಯಲು ಬಿಡಿ ಎಂದು ಹೇಳಿದ್ದರು. ಬ್ರಿಟನ್‌ನ ಕರೋನಾ ಸಾಂಕ್ರಾಮಿಕ ರೋಗದ ಕುರಿತು ರಚಿಸಲಾದ ಸಮಿತಿಯೇ ಸ್ವತಃ ಈ ವಿವರ ನೀಡಿದೆ. ಈ ಸಮಿತಿಯು ಬ್ರಿಟನ್‌ನಲ್ಲಿ ಕೋವಿಡ್-19 ಅನ್ನು ಹೇಗೆ ನಿರ್ವಹಿಸಲಾಗಿದೆ ಎಂಬುದರ ಕುರಿತು ತನಿಖೆ ನಡೆಸುತ್ತಿದೆ.ಸೋಮವಾರ ನಡೆದ ವಿಚಾರಣೆಯಲ್ಲಿ, 25 ಅಕ್ಟೋಬರ್ 2020 ರಂದು ನಡೆದ ಸಭೆಯಲ್ಲಿ ಸುನಕ್ ಅವರ ಮಾತುಗಳನ್ನು ಸರ್ಕಾರದ ಮುಖ್ಯ ವೈಜ್ಞಾನಿಕ ಸಲಹೆಗಾರ ಪ್ಯಾಟ್ರಿಕ್ ವ್ಯಾಲೆನ್ಸ್ ಅವರು ತಮ್ಮ ಡೈರಿಯಲ್ಲಿ ಬರೆದಿದ್ದಾಋಏ ಎಂದು ಸಮಿತಿ ಹೇಳಿದೆ. ಆ ಸಮಯದಲ್ಲಿ ಸುನಕ್ ಬ್ರಿಟನ್‌ನ ಹಣಕಾಸು ಸಚಿವರಾಗಿದ್ದರು ಮತ್ತು ಬೋರಿಸ್ ಜಾನ್ಸನ್ ಅವರು ಬ್ರಿಟನ್ ಪ್ರಧಾನಿ ಆಗಿದ್ದರು. ಅವರು ಕರೋನಾವನ್ನು ಎದುರಿಸಲು ತಂತ್ರವನ್ನು ಅಂದು ಚರ್ಚೆ ಮಾಡುತ್ತಿದ್ದರು.
ಯಾವುದೇ ಒಂದು ಪ್ರಶ್ನೆಗೆ ಉತ್ತರಿಸುವ ಬದಲು ಪ್ರಧಾನಿ ಅವರು ಸಂಪೂರ್ಣ ವಿಷಯದ ಬಗ್ಗೆ ಪುರಾವೆಗಳೊಂದಿಗೆ ಮಾತನಾಡಲಿದ್ದಾರೆ ಎಂದು ಸುನಕ್ ಅವರ ವಕ್ತಾರರು ಹೇಳಿದ್ದಾರೆ. ಬ್ರಿಟನ್‌ನಲ್ಲಿ ಕರೋನಾ ಸಮಯದಲ್ಲಿ 2 ಲಕ್ಷ 20 ಸಾವಿರ ಜನರು ಸಾವನ್ನಪ್ಪಿದ್ದಾರೆ. ಕರೋನಾ ಕುರಿತು ರಚಿಸಲಾದ ಸಮಿತಿಯು 2026 ರವರೆಗೆ ತನ್ನ ತನಿಖೆಯನ್ನು ಮುಂದುವರೆಸಲಿದೆ. ಸರ್ಕಾರದ ವಿಷಕಾರಿ ವಿಧಾನದಿಂದಾಗಿ ಸಾಂಕ್ರಾಮಿಕ ರೋಗವನ್ನು ನಿಭಾಯಿಸುವಲ್ಲಿ ಸಮಸ್ಯೆಗಳಾಗಿತ್ತು ಎಂದು ಸರ್ಕಾರಿ ಅಧಿಕಾರಿಗಳು ಆರೋಪಿಸಿದ್ದಾರೆ.
ಕರೋನಾ ಸಮಯದಲ್ಲಿ, ಸುನಕ್ ಅವರು 'ಈಟ್ ಔಟ್ ಟು ಹೆಲ್ಪ್ ಔಟ್' ನೀತಿಯನ್ನು ಪ್ರಾರಂಭಿಸಿದರು. ಈ ನೀತಿಯ ಅನುಸಾರ ಜನರು ಹೊರಗಡೆ ಹೋಗಿ ತಿನ್ನಲು ಸರ್ಕಾರದ ವತಿಯಿಂದ ಪ್ರೋತ್ಸಾಹ ನೀಡಲಾಗಿತ್ತು. ಇದರಿಂದ ದೇಶದ ಆರ್ಥಿಕತೆ ಸುಧಾರಿಸಬಹುದು ಎನ್ನುವ ಅಂದಾಜಿನಲ್ಲಿ ಸುನಕ್ ಇದ್ದರು. ಈ ಕುರಿತು ಸರ್ಕಾರದ ವೈಜ್ಞಾನಿಕ ಸಲಹೆಗಾರರು ಸುನಕ್ ಅವರನ್ನು ಸಾವಿನ ವೈದ್ಯ ಎಂದು ಕರೆದಿದ್ದರು ಎನ್ನಲಾಗಿದೆ.
ಮಾಜಿ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಜೂನ್ 8 ರಂದು ತಮ್ಮ ಸಂಸದ ಸ್ಥಾನಕ್ಕೆ ಇದ್ದಕ್ಕಿದ್ದಂತೆ ರಾಜೀನಾಮೆ ನೀಡಿದರು. ಅವರು ಪ್ರಧಾನಿಯಾಗಿದ್ದಾಗ ಕರೋನಾ ಸಮಯದಲ್ಲಿ ಬ್ರಿಟನ್‌ನ ಪಿಎಂ ಕಚೇರಿಯಲ್ಲಿ ಪಾರ್ಟಿ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ಉತ. ಬ್ರಿಟನ್ ಹೌಸ್ ಆಫ್ ಕಾಮನ್ಸ್ ಪ್ರಕರಣದ ತನಿಖೆಗಾಗಿ ಸಮಿತಿಯೊಂದನ್ನು ರಚಿಸಿತ್ತು, ಅದರ ವರದಿಯಲ್ಲಿ ಅವರು ತಪ್ಪಿತಸ್ಥರು ಎಂದು ಕಂಡುಬಂದಿದೆ. ಇದರಲ್ಲಿ ಬೋರಿಸ್ ಜಾನ್ಸನ್ ಮೇಲೆ ನಿರ್ಬಂಧ ಹೇರುವ ಬಗ್ಗೆ ಚರ್ಚೆ ನಡೆದಿದೆ. ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ಸುನಕ್ ಅವರ ಕನ್ಸರ್ವೇಟಿವ್ ಪಕ್ಷವು ಅಭಿಪ್ರಾಯ ಸಂಗ್ರಹಣೆಯಲ್ಲಿ ವಿರೋಧ ಪಕ್ಷದ ಲೇಬರ್ ಪಕ್ಷಕ್ಕಿಂತ 20% ರಷ್ಟು ಹಿಂದುಳಿದಿದೆ. ಇಂತಹ ಪರಿಸ್ಥಿತಿಯಲ್ಲಿ ಕರೋನಾ ಸಮಿತಿಯ ವರದಿಯು ಜನರಲ್ಲಿ ಅವರ ಇಮೇಜ್ ಅನ್ನು ದುರ್ಬಲಗೊಳಿಸುತ್ತದೆ. ಇತ್ತೀಚಿಗೆ ಅವರ ಪಕ್ಷದಲ್ಲೂ ಅವರ ವಿರುದ್ಧದ ಪ್ರತಿಭಟನೆಯ ಧ್ವನಿ ಬಲವಾಗಿದೆ.
ಭಾರತೀಯ ಮೂಲದ ಸಚಿವೆಗೆ ಕೊಕ್: ಬ್ರಿಟನ್ ಮಾಜಿ ಪ್ರಧಾನಿಗೆ ಸಚಿವ ಸ್ಥಾನ ನೀಡಿದ ರಿಷಿ ಸುನಕ್
ಸುನಕ್ ಅವರ ಸ್ವಂತ ಪಕ್ಷದ ಸಂಸದೆ ಆಂಡ್ರಿಯಾ ಜೆಂಕಿನ್ಸ್ ಅವರ ವಿರುದ್ಧ ಅವಿಶ್ವಾಸ ನಿರ್ಣಯ ತರಲು ಇತ್ತೀಚೆಗೆ ಪತ್ರ ಬರೆದಿದ್ದರು. ಸಾರ್ವಜನಿಕರಿಗೂ ಸುನಕ್ ಇಷ್ಟವಿಲ್ಲ ಎಂಬುದು ಈಗ ಸಮೀಕ್ಷೆಯಲ್ಲಿ ಸಾಬೀತಾಗಿದೆ. ಈಗ ಸುನಕ್ ಹೋಗುವ ಸಮಯ. ಸುನಕ್ ಅವರು ಗೃಹ ಸಚಿವ ಸುಯೆಲ್ಲಾ ಬ್ರಾವರ್ಮನ್ ಅವರನ್ನು ಹುದ್ದೆಯಿಂದ ತೆಗೆದುಹಾಕಿದ್ದಾರೆ, ಇದರಿಂದಾಗಿ ಅವರ ಪಕ್ಷದ ಕೆಲವು ನಾಯಕರು ಕೋಪಗೊಂಡಿದ್ದಾರೆ.
ಯುಕೆ ಪ್ರಧಾನಿ ರಿಷಿ ಸುನಕ್, ಅಕ್ಷತಾ ನಿವಾಸದಲ್ಲಿ ಸಡಗರದ ದೀಪಾವಳಿ: ಹಬ್ಬಕ್ಕೆ ಶುಭ ಕೋರಿದ ಭಾರತದ ಅಳಿಯ