ಲಂಡನ್(ಜೂ.16); ಕೊರೋನಾ ವೈರಸ್ ಇದೀಗ ಜಾಗತಿಗ ಸಮಸ್ಯೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿಗಳನ್ನು ಪಾಲಿಸಿದರೂ ಕೊರೋನಾ ಮುಕ್ತವಾಗಿಲ್ಲ. ಹೀಗಾಗಿ ಪ್ರತಿ ದೇಶಗಳು ಲಸಿಕೆ ಪ್ರಯತ್ನ ಮಾಡುತ್ತಿದೆ. ಆದರೆ ಬಹುತೇಕ ಲಸಿಕೆಗಳು ಪ್ರಯೋಗದ ಹಂತದಲ್ಲಿದೆ. ಇದೀಗ ಕೊರೋನಾ ವೈರಸ್‌ನಿಂದ ಗಂಭೀರ ಸ್ಥಿತಿ ತಲುಪಿದ ಸೋಂಕಿತರಿಗೆ ಡೆಕ್ಸಾಮೆಥಾಸೊನ್ ಔಷದಿ ರಾಮಬಾಣವಾಗಿ ಪರಿಣಮಿಸಿದೆ.

ವರ್ಷಾಂತ್ಯದಲ್ಲಿ ಎಲ್ಲರಿಗೂ ಕೊರೋನಾ ಇಂಜೆಕ್ಷನ್; ಆಕ್ಸ್‌ಫರ್ಡ್ ಯುನಿವರ್ಸಿಟಿ!...

ಕಡಿಮೆ ಪ್ರಮಾಣ ಹೊಂದಿರು ಡೆಕ್ಸಾಮೆಥಾಸೊನ್ ಡೋಸ್ ಲಂಡನ್‌ನಲ್ಲಿ ಪ್ರಯೋಗಿಸಲಾಗಿದೆ. ಕೊರೋನಾದಿಂದ ವೆಂಟಿಲೇಟರ್ ಬಳಸಿ ಉಸಿರಾಡುತ್ತಿದ್ದ ಮಂದಿಯೂ ಈ ಔಷದಿಯಿಂದ ಗುಣಮುಖರಾಗಿದ್ದಾರೆ ಎಂದು ಲಂಡನ್ ತಜ್ಞ ವೈದ್ಯರು ಹೇಳಿದ್ದಾರೆ.

ಡೆಕ್ಸಾಮೆಥಾಸೊನ್ ಔಷದಿಯಿಂದ ಸಾವಿನ ಪ್ರಮಾಣ ಕಡಿಮೆಯಾಗಿದೆ. ಈ ಔಷದಿ ನೀಡಿದ ಬಳಿಕ ನಿಧಾನವಾಗಿ ಸೋಂಕಿತರು ಚೇತರಿಸಿಕೊಂಡಿದ್ದಾರೆ. ಇದುವರೆಗೆ 5,000 ಕೊರೋನಾ ಸೋಂಕಿತರು ಡೆಕ್ಸಾಮೆಥಾಸೊನ್ ಔಷದಿಯಿಂದ ಚೇತರಿಸಿಕೊಂಡಿದ್ದಾರೆ ಎಂದು ಸಂಶೋಧಕರು ಹೇಳಿದ್ದಾರೆ. 

ಭಾರತೀಯ ವಿಜ್ಞಾನಿಗಳಿಂದ ಕೊರೋನಾ ಮಹಾಮಾರಿಗೆ ಲಸಿಕೆ; ನಿತಿನ್ ಗಡ್ಕರಿ!.

ಡೆಕ್ಸಾಮೆಥಾಸೊನ್ ಔಷದಿ ಕಡಿಮೆ ಬೆಲೆಯ ಕಾರಣ ಬಡ ರಾಷ್ಟ್ರಗಳಲ್ಲಿ ಈ ಔಷದಿಯನ್ನು ಕೊರೋನಾ ವಿರುದ್ಧ ಬಳಕೆ ಮಾಡಬುಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದು ಕೊರೋನಾ ವೈರಸ್‌ಗಾಗಿ ಕಂಡು ಹಿಡಿದ ಔಷದಿಯಲ್ಲ. ಆದರೆ ಕೊರೋನಾ ವೈರಸ್‌ನಿಂದ ಮುಕ್ತರಾಗಲು ಔಷದಿ ಸಹಕಾರಿಯಾಗಿದೆ ಎಂದು ಲಂಡನ್ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.