ಡೆನ್ಮಾರ್ಕ್‌ನ ಕಿಂಗ್ ಫ್ರೆಡರಿಕ್ ಎಕ್ಸ್‌ ಭಾನುವಾರ ಪಟ್ಟಕ್ಕೇರಿದ್ದಾರೆ. ಅವರ ತಾಯಿ ರಾಣಿ ಮಾರ್ಗರೇಟ್‌ ಪದತ್ಯಾಗ ಮಾಡಿದ್ದು, ಅವರ ಪುತ್ರ ಫೆಡ್ರಿಕ್‌ 10ನೇ ರಾಜನಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಡೆನ್ಮಾರ್ಕ್‌ನ ಕಿಂಗ್ ಫ್ರೆಡರಿಕ್ ಎಕ್ಸ್‌ ಭಾನುವಾರ ಪಟ್ಟಕ್ಕೇರಿದ್ದಾರೆ. ಅವರ ತಾಯಿ ರಾಣಿ ಮಾರ್ಗರೇಟ್‌ ಪದತ್ಯಾಗ ಮಾಡಿದ್ದು, ಅವರ ಪುತ್ರ ಫೆಡ್ರಿಕ್‌ 10ನೇ ರಾಜನಾಗಿ ಅಧಿಕಾರ ವಹಿಸಿಕೊಂಡಿದ್ದು, ಆ ನಂತರ ಹೊಸ ಯುಗ ಆರಂಭವಾಗಿದೆ. ರಾಜನಾಗಿ ಫೆಡ್ರಿಕ್ ಅಧಿಕಾರ ಗ್ರಹಣ ಮಾಡುವ ಅಭೂತಪೂರ್ವ ಗಳಿಗೆಗೆ ಕೋಪನ್‌ಹೇಗನ್‌ನ ಕ್ರಿಸ್ತಿಯಾನ್ಸ್‌ಬರ್ಗ್‌ ಸ್ಕ್ವೈರ್‌ನಲ್ಲಿ 100,000 ಕ್ಕೂ ಹೆಚ್ಚು ಜನರು ಸಾಕ್ಷಿಯಾಗಿ ಆಗಮಿಸಿದ್ದರು.

ಪಾಕಿಸ್ತಾನಿ ಕ್ರಿಕೆಟಿಗನೊಂದಿಗೆ ಸಂಬಂಧ ಹೊಂದಿ ಬ್ರೇಕಪ್‌ ಬಳಿಕ ಗೆಳತಿಯ ಗಂಡನನ್ನೇ ಮದುವೆಯಾದ ನಟಿ!

ಕ್ರಿಸ್ತಿಯಾನ್ಸ್‌ಬರ್ಗ್‌ ಅರಮನೆಯಲ್ಲಿ ನಡೆದ ಸಮಾರಂಭದಲ್ಲಿ 83 ವರ್ಷದ ರಾಣಿ ಮಾರ್ಗರೇಟ್‌, ಅಧಿಕಾರ ತ್ಯಜಿಸುವ ಘೋಷಣೆಗೆ ಸಹಿ ಹಾಕುವ ಮೂಲಕ ತನ್ನ 52 ವರ್ಷದ ಅವರ ಸುದೀರ್ಘ ಆಡಳಿತಾವಧಿಯ ಯುಗಕ್ಕೆ ಅಂತ್ಯ ಹಾಡಿದರು. ಬಳಿಕ ರಾಜನಾಗಿ ಅವರ 55 ವರ್ಷ ವಯಸ್ಸಿನ ಪುತ್ರ ಫೆಡ್ರಿಕ್‌ ಅವರ ಅಧಿಕಾರವಧಿ ಆರಂಭಗೊಂಡಿತು.

ಸೂಪರ್‌ ಸ್ಟಾರ್‌ ರಾಜೇಶ್ ಖನ್ನಾರ 7 ವರ್ಷದ ಲಿವಿನ್ ರಿಲೇಷನ್ ಶಿಪ್‌ ಗೆ ಹುಳಿ ಹಿಂಡಿದ ಕ್ರಿಕೆಟರ್‌!

ಎಲ್ಲಾ ಪ್ರಕ್ರಿಯೆಗಳು ಮುಗಿದ ಬಳಿಕ ರಾಣಿ ಮಾರ್ಗರೇತ್ ಅವರು ಸಚಿವ ಸಂಪುಟದಿಂದ ನಿರ್ಗಮಿಸಿದರು. ರಾಜ ಫೆಡ್ರಿಕ್, ಅವರ ಪತ್ನಿ ಮತ್ತು 18 ವರ್ಷದ ಪುತ್ರ ಯುವ ರಾಜಕುಮಾರ ಈ ಸಂದರ್ಭದಲ್ಲಿ ಜೊತೆಗಿದ್ದರು.

ಫೆಡ್ರಿಕ್ ಅವರು ನೂತನ ರಾಜನಾಗಿ ಅಧಿಕಾರ ಸ್ವೀಕರಿಸಿದ್ದನ್ನು ಪ್ರಧಾನಿ ಮ್ಯಾಟೆ ಫ್ರೆಡೆರಿಕ್ಸೆನ್ ಅವರು ಅರಮನೆಯ ಮಹಡಿಯಲ್ಲಿ ಘೋಷಣೆ ಮಾಡಿದರು.