Asianet Suvarna News

ಕೊರೋನಾ ನಿರ್ಮೂಲನೆ ಯತ್ನಕ್ಕೆ ಡೆಲ್ಟಾ ಬಹುದೊಡ್ಡ ಅಡ್ಡಿ: ಫೌಸಿ

* ಅಮೆ​ರಿ​ಕದ ಎಲ್ಲಾ ಲಸಿ​ಕೆ​ಗಳು ಡೆಲ್ಟಾ ವಿರುದ್ಧ ಪರಿ​ಣಾ​ಮ​ಕಾ​ರಿ​ಯಾಗಿ ಕಾರ್ಯ ನಿರ್ವ​ಹಿ​ಸ​ಲಿವೆ

* ಕೊರೋನಾ ಹುಟ್ಟ​ಡ​ಗಿ​ಸುವ ಅಮೆ​ರಿ​ಕ​ದ ಯತ್ನಕ್ಕೆ ಡೆಲ್ಟಾ ಬಹುದೊಡ್ಡ ಅಡ್ಡಿ: ಫೌಸಿ

* ವಿಶ್ವಾ​ದ್ಯಂತ ಹಬ್ಬು​ತ್ತಿ​ರುವ ಕೊರೋನಾ ವೈರ​ಸ್‌​ಗ​ಳಿ​ಗಿಂತಲೂ ಭಾರ​ತದಲ್ಲಿ ಮೊಟ್ಟ ಮೊದ​ಲಿಗೆ ಪತ್ತೆ​ಯಾ​ದ ಡೆಲ್ಟಾ ವೈರಸ್‌ ಗಂಭೀರ ಸ್ವರೂ​ಪ​

Delta Variant Greatest Threat To US Covid Efforts Dr Anthony Fauci pod
Author
Bangalore, First Published Jul 2, 2021, 8:16 AM IST
  • Facebook
  • Twitter
  • Whatsapp

ವಾಷಿಂಗ್ಟ​ನ್‌(ಜೂ.02): ಅಮೆ​ರಿ​ಕ​ದಿಂದ ಕೋವಿಡ್‌ ಮಹಾ​ಮಾ​ರಿ​ಯನ್ನು ಪೂರ್ತಿ​ಯಾಗಿ ತೊಲ​ಗಿ​ಸುವ ದೇಶದ ಯತ್ನಕ್ಕೆ ತೀವ್ರ​ವಾಗಿ ಹಬ್ಬುವ ಕೊರೋನಾ ವೈರ​ಸ್‌ನ ಡೆಲ್ಟಾರೂಪಾಂತರ ತಳಿಯು ಬಹು​ದೊಡ್ಡ ಆಪತ್ತು ಆಗಿದೆ ಎಂದು ಸಾಂಕ್ರಾ​ಮಿಕ ರೋಗ ತಜ್ಞರು ಹಾಗೂ ಶ್ವೇತ ಭವ​ನದ ಮುಖ್ಯ ವೈದ್ಯ​ಕೀಯ ಸಲ​ಹೆ​ಗಾರ ಡಾ. ಆ್ಯಂಟೋನಿ ಫೌಸಿ ಎಚ್ಚ​ರಿಕೆ ನೀಡಿ​ದ್ದಾರೆ.

ಆದರೆ ಅಮೆ​ರಿ​ಕದ ಎಲ್ಲಾ ಲಸಿ​ಕೆ​ಗಳು ಡೆಲ್ಟಾವಿರುದ್ಧ ಪರಿ​ಣಾ​ಮ​ಕಾ​ರಿ​ಯಾಗಿ ಕಾರ್ಯ ನಿರ್ವ​ಹಿ​ಸ​ಲಿವೆ ಎಂಬು​ದಷ್ಟೇ ಸಮಾ​ಧಾ​ನ​ಕರ ಸಂಗತಿ ಎಂದೂ ಹೇಳಿ​ದ್ದಾ​ರೆ. ಈ ಬಗ್ಗೆ ಇತ್ತೀ​ಚೆಗೆ ವಚ್ರ್ಯುವಲ್‌ ಸುದ್ದಿ​ಗೋ​ಷ್ಠಿ​ಯ​ನ್ನು​ದ್ದೇ​ಶಿಸಿ ಮಾತ​ನಾ​ಡಿದ ಫೌಸಿ, ‘ವಿಶ್ವಾ​ದ್ಯಂತ ಹಬ್ಬು​ತ್ತಿ​ರುವ ಕೊರೋನಾ ವೈರ​ಸ್‌​ಗ​ಳಿ​ಗಿಂತಲೂ ಭಾರ​ತದಲ್ಲಿ ಮೊಟ್ಟಮೊದ​ಲಿಗೆ ಪತ್ತೆ​ಯಾ​ದ ಡೆಲ್ಟಾ ವೈರಸ್‌ ಗಂಭೀರ ಸ್ವರೂ​ಪ​ದ್ದಾ​ಗಿ​ದೆ.

ಅಮೆ​ರಿ​ಕ​ದಲ್ಲಿ ಪತ್ತೆ​ಯಾದ ಒಟ್ಟಾರೆ ಸೋಂಕಿ​ತರ ಪೈಕಿ ಈಗಾ​ಗಲೇ ಶೇ.20ಕ್ಕಿಂತ ಹೆಚ್ಚು ಮಂದಿಯಲ್ಲಿ ಡೆಲ್ಟಾರೂಪಾಂತರಿ ವೈರಸ್‌ ಪತ್ತೆ​ಯಾ​ಗಿದೆ. ಕಳೆದ 2 ವಾರ​ಗಳ ಅವ​ಧಿ​ಯಲ್ಲಿ ಶೇ.10ರಷ್ಟುಡೆಲ್ಟಾಪ್ರಕ​ರ​ಣ​ಗಳು ಹೆಚ್ಚಿ​ವೆ’ ಎಂದು ಹೇಳಿದ್ದಾರೆ.

Follow Us:
Download App:
  • android
  • ios