ರೆಸ್ಟೋರೆಂಟ್‌ಗೆ ಹೋಗಿ ತಿಂದು ಬಿಲ್ ಕೊಡುತ್ತೇವೆ, ನೂರೋ, ಇನ್ನೂರೋ ಟಿಪ್ಸ್ ಕೊಡುತ್ತೇವೆ. ಆದರೆ ಈತ ಬರೋಬ್ಬರಿ 11 ಲಕ್ಷ ಟಿಪ್ಟ್ ಕೊಟ್ಟಿದ್ದಾನೆ.

ನ್ಯೂ ಹ್ಯಾಂಪ್‌ಶೈರ್(ಜೂ.26): ಆಹಾರ ಅಥವಾ ಪಾನೀಯಗಳನ್ನು ಸೇವಿಸಿದ ನಂತರ ಜನರು ಸಾಕಷ್ಟು ಪ್ರಮಾಣದ ಟಿಪ್ಸ್ ಬಿಡುವ ಸಾಧ್ಯತೆಗಳಿವೆ. ಆ ಪಟ್ಟಿಗೆ ಈಗ ಹೊಸ ಸೇರ್ಪಡೆ ಇದೆ. ಉದಾರ ಗ್ರಾಹಕಕೊನೊಬ್ಬ ಮಾಡಿರೋದೇನು ನೋಡಿ.

ನ್ಯೂ ಹ್ಯಾಂಪ್‌ಶೈರ್‌ನ ಲಂಡನ್‌ಡೇರಿಯಲ್ಲಿರುವ ಸ್ಟಂಬಲ್ ಇನ್ ಬಾರ್ & ಗ್ರಿಲ್‌ನಲ್ಲಿ ಈ ಘಟನೆ ನಡೆದಿದೆ. ರೆಸ್ಟೋರೆಂಟ್ ಮಾಲೀಕ ಮೈಕ್ ಜರೆಲ್ಲಾ ಫೇಸ್‌ಬುಕ್‌ನಲ್ಲಿ ಈ ಘಟನೆಯನ್ನು ಶೇರ್ ಮಾಡಿದ್ದಾರೆ. $ 38 ಬಿಲ್‌ನಲ್ಲಿ, $16,000 ಟಿಪ್ಸ್ ಬಿಟ್ಟ ಡಿನ್ನರ್‌ಗೆ ಧನ್ಯವಾದ ಅರ್ಪಿಸಿದ್ದಾರೆ.

ಬಾಳೆ ದಿಂಡಿನ ರಸ ಕುಡಿದರೆ ಹೊಟ್ಟೆಲಿರೋ ಕೂದಲೂ ಹೊರ ಬರುತ್ತಂತೆ!

"ಒಬ್ಬ ಸಂಭಾವಿತ ವ್ಯಕ್ತಿಯು ಬಾರ್‌ಗೆ ಬಂದು ಬಿಯರ್ ಮತ್ತು ಒಂದೆರಡು ಮೆಣಸಿನ ಚೀಸ್ ಆರ್ಡರ್ ಮಾಡಿದರು. ನಂತರ ಉಪ್ಪಿನಕಾಯಿ ಚಿಪ್ಸ್ ಮತ್ತು ಟಕಿಲಾ ಪಾನೀಯವನ್ನು ಆದೇಶಿಸಿದರು ಎಂದು ಜರೆಲ್ಲಾ ತಿಳಿಸಿದ್ದಾರೆ.

ಸುಮಾರು 3: 30 ಕ್ಕೆ, ಅವರು ಬಾರ್ ಎಟೆಂಡರನ್ನುಕರೆದಿದ್ದಾರೆ. ಟಿಪ್ಟ್ ಕೊಟ್ಟು ಎಲ್ಲವನ್ನೂ ಒಂದೇ ಸ್ಥಳದಲ್ಲಿ ಖರ್ಚು ಮಾಡಬೇಡ ಎಂದು ಸೂಚನೆ ಕೊಟ್ಟಿದ್ದಾರೆ.

ಶಿಫ್ಟ್‌ನಲ್ಲಿ ಕೆಲಸ ಮಾಡುವಾಗ ವ್ಯಕ್ತಿ ಮೊದಲಿಗೆ ಇದನ್ನು ಗಮನಿಸಲಿಲ್ಲ. ನಂತರ ಅವರು ಉಳಿದ ಮೊತ್ತವನ್ನು ಗಮನಿಸಿದಾಗ ಶಾಕ್ ಆಗಿದ್ದಾರೆ.