ಭಾನುವಾರದ ಪಾರ್ಥನೆ ಆರಂಭಗೊಂಡಿತ್ತು. ಸಮುದಾಯದ ಎಲ್ಲರೂ ಚರ್ಚ್ನಲ್ಲಿ ಸೇರಿದ್ದರು. ಪಾದ್ರಿ ಕ್ರಿಸ್ತನ ಪ್ರವಚನಗಳನ್ನು ಬೋಧಿಸಿ, ಪ್ರಾರ್ಥನೆ ಆರಂಭಿಸುತ್ತಿದ್ದಂತೆ ಹಿಂಬದಿಯಲ್ಲಿದ್ದ ಬೃಹತ್ ಶಿಲುಗೆ ಪಾದ್ರಿ ತಲೆ ಮೇಲಿ ಬಿದ್ದ ಘಟನೆ ನಡೆದಿದೆ.
ಈಕ್ವೆಡಾರ್ (ಅ.18) ಕ್ರಿಶ್ಚಿಯನ್ ಸಮುದಾಯ ಪ್ರತಿ ಭಾನುವಾರ ತಪ್ಪದೆ ಚರ್ಚ್ಗೆ ಹಾಜರಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ. ಪ್ರಾರ್ಥನೆ ಹಾಗೂ ಕಿಸ್ತನ ಬೋಧನೆಗಳು ಸೇರಿದಂತೆ ಹಲವು ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತದೆ. ಹೀಗೆ ಭಾನುವಾರ ಕ್ರಿಶ್ಚಿಯನ್ ಸಮುದಾಯದ ಮಂದಿ ಚರ್ಚ್ನಲ್ಲಿ ಸೇರಿದ್ದರು. ಪ್ರಾರ್ಥನೆ ಆರಂಭಿಸುತ್ತಿದ್ದಂತೆ ಚರ್ಚ್ ಪಾದ್ರಿ ಹಿಂಬದಿಯಲ್ಲಿದ್ದ ಬೃಹತ್ ಶಿಲುಗೆ ಏಕಾಏಕಿ ಕೆಳಕ್ಕೆ ಬಿದಿದ್ದೆ. ಈ ಶಿಲುಬೆ ನೇರವಾಗಿ ಪಾದ್ರಿಯ ತಲೆ ಮೇಲೆ ಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ಈಕ್ವೆಡಾರ್ನಲ್ಲಿ ನಡೆದಿದೆ.
ಏಕಾಏಕಿ ತಲೆ ಮೇಲೆ ಬಿದ್ದ ಹಿಂಬದಿಯಲ್ಲಿದ್ದ ಶಿಲುಬೆ
ಈಕ್ವೆಡಾರ್ ದೇಶದ ಗೌಯಾಕ್ವಿಲ್ನಲ್ಲಿರು ನುಯೆಸ್ಟ್ರಾ ಸೆನೋರಾ ಡೆಲ್ ಸೋಕ್ರೋ ಚರ್ಚ್ನಲ್ಲಿ ಈ ದುರಂತ ನಡೆದಿದೆ. ಫಾದರ್ ಪ್ಯಾಟ್ರಿಸಿಯೋ ಅಲ್ಫ್ರೆಡೋ ಸ್ಯಾಂಚೆಜ್ ಮೊಲಿನಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪ್ರಾರ್ಥನೆ ನಡೆಯುತ್ತಿದ್ದಂತೆ ಈ ಘಟನೆ ನಡೆದಿದೆ. ಸಮುದಾಯದ ಎಲ್ಲರೂ ನೋಡುತ್ತಿದ್ದಂತೆ ಕ್ಷಣಾರ್ಧದಲ್ಲಿ ಶಿಲುಬೆ ಬಿದ್ದು ಫಾದರ್ ಮೃತಪಟ್ಟಿದ್ದಾರೆ. ನೆರೆದಿದ್ದ ಮಂದಿ ಚೀರಾಡಿದ್ದಾರೆ, ತಕ್ಷಣವೇ ಸಿಬ್ಬಂದಿಗಳು ಓಡಿ ಬಂದಿದ್ದಾರೆ. ಆದರೆ ಫಾದರ್ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
ಚರ್ಚ್ನಲ್ಲಿ ಫಾದರ್ ಪ್ರಾರ್ಥನೆ ಹಾಗೂ ಬೋಧನೆ ನಿಲ್ಲುವ ಸ್ಥಳದ ಹಿಂಭಾಗದಲ್ಲಿ ಶಿಲುಬೆ ಇಡಲಾಗಿದೆ. ಬೃಹತ್ ಶಿಲುಬೆಯನ್ನು ಇಡಲಾಗಿತ್ತು. ಆದರೆ ಇದೇ ಶಿಲುಬೆ ಬಿದ್ದಿದೆ. ಫಾದರ್ಗೆ ಯಾವುದೇ ಸುಳಿವು ಇರಲಿಲ್ಲ. ಇಷ್ಟೇ ಅಲ್ಲ ಹಿಂಬದಿಯಲ್ಲಿ ಶಿಲುಬೆ ಇದ್ದ ಕಾರಣ ಏನಾಗುತ್ತಿದ್ದೆ ಅನ್ನೋ ಯಾವುದೇ ಸೂಚನೆಯೂ ಇರಲಿಲ್ಲ.
ಪ್ರಾರ್ಥನೆಗೆ ಅರ್ಧಕ್ಕೆ ಮೊಟಕು, ಗಣ್ಯರಿಂದ ಸಂತಾಪ
ಪ್ರಾರ್ಥನೆ ನಡುವೆ ಈ ಘಟನೆ ನಡೆದಿದೆ. ಶಿಲುಬೆ ಘಟನೆಯಿಂದ ಫಾದರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೀಗಾಗಿ ಪ್ರಾರ್ಥನೆ ಅರ್ಧಕ್ಕೆ ಮೊಟಕು ಗೊಂಡಿದೆ. ಎಲ್ಲರ ಎದುರೇ ಈ ಘಟನೆ ನಡೆದಿತ್ತು. ಪ್ರಾರ್ಥನೆ ಸಲ್ಲಿಸಿ ಖುಷಿಯಿಂದ ಮರಳಬೇಕಿದ್ದ ಸಮುದಾಯದ ಮಂದಿ ತೀವ್ರ ನೋವಿನಿಂದ ಕಾರ್ಯಗಳು ಪೂರ್ಣಗೊಳಿಸಿದ್ದಾರೆ. ಫಾದರ್ ಸಾವಿಗೆ ಇತರ ಚರ್ಚ್ ಪಾದ್ರಿಗಳು, ಈಕ್ವೆಡಾರ್ ಚರ್ಚ್ ಸಮಿತಿ ಸಂತಾಪ ಸೂಚಿಸಿದೆ.
ಘಟನೆ ಕುರಿತು ನುಯೆಸ್ಟ್ರಾ ಸೆನೋರಾ ಡೆಲ್ ಸೋಕ್ರೋ ಚರ್ಚ್ ಪ್ರಕಟಣೆ ಹೊರಡಿಸಿದೆ. ದುರಂತ ಘಟನೆಯಲ್ಲಿ ಫಾದರ್ ಮೃತಪಟ್ಟಿರುವ ವಿಚಾರ ತಿಳಿಸಲು ತೀವ್ರ ನೋವಾಗುತ್ತಿದೆ ಎಂದು ಪ್ರಕಟಣೆಯಲ್ಲಿ ಹೇಳಿದೆ. ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.


