ಮಕ್ಕಳು ಆಟಿಕೆ ವಿಮಾನವನ್ನು ಹಾರಿಸಿ ಆನಂದಿಸುತ್ತಾರೆ. ಆದರೆ, ಇಲ್ಲೊಬ್ಬ ವ್ಯಕ್ತಿ ಕ್ರೇನ್‌ ಅನ್ನು ಬಳಸಿ ವಿಮಾನವನ್ನು ಹಾರಿಸಲು ಯತ್ನಿಸಿದ್ದಾನೆ. ಇದೀಗ ಈ ವಿಡಿಯೋ ವೈರಲ್ ಆಗಿದೆ.

ಫ್ಲೊರಿಡಾದ ಮಿಯಾಮಿ ವಿಮಾನ ನಿಲ್ದಾಣದಲ್ಲಿ ಗುಜರಿಗೆ ಹಾಕಿದ್ದ ಪುಟ್ಟವಿಮಾನವೊಂದನ್ನು ಕ್ರೇನ್‌ನಿಂದ ಎತ್ತಿ ಗಾಳಿಯಲ್ಲಿ ಸುತ್ತಲೂ ತಿರುಗಿಸಿ ವಿಮಾನ ಹಾರಿಸಿದ ಅನುಭವ ಪಡೆದುಕೊಂಡಿದ್ದಾನೆ.

ಕೋವ್ಯಾಕ್ಸಿನ್ ಲಾಂಚ್‌ ಆಗಲು ಡೇಟ್ ಫಿಕ್ಸ್; ಗೆಟ್ ರೆಡಿ ಎಂದ ಕೇಂದ್ರ..!

ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗಿದೆ. ಜನರಿಗೆ ಏನೇನೋ ಕ್ರೇಝ್ ಇರುತ್ತೆ ಅನ್ನೋದು ಇದಕ್ಕೇ ಅಲ್ವಾ..? ಸಣ್ಣಪುಟ್ಟ ಆಸೆಗಳೆಲ್ಲಾ ಕಾಮನ್. ಇಂಥ ವಿಚಿತ್ರ ಆಸೆಗಳೆಲ್ಲ ವೈರಲ್ ಆಗುತ್ತದೆ.

ಅಂತೂ ಪೈಲಟ್ ಆಗದೆಯೇ ವಿಮಾನ ಹಾರಿಸಿ ಸುದ್ದಿಯಾಗಿದ್ದಾನೆ ಈತ. ಕ್ರೇನ್ ಆಪರೇಟರ್ ವಿಮಾನ ಹಾರ್ಸೋದಂದ್ರೆ ಸುಮ್ನೇನಾ..? ಅದೂ ಈ ರೀತಿ.. ಫನ್ನಿಯಾಗಿದ್ರು ಈತನ ಐಡಿಯಾ ಸ್ಪೆಷಲ್ ಇದೆ ಅಲ್ವಾ..?