ಬ್ರಿಟನ್(ಡಿ.02): ಕೊರೋನಾ ಮಹಾಮಾರಿ ಇನ್ನೂ ಕುಗ್ಗಿಲ್ಲ ಹೀಗಿರುವಾಗಲೇ ಇದನ್ನು ನಿಯಂತ್ರಿಸಬಲ್ಲ ಲಸಿಕೆಯ ಆವಿಷ್ಕಾರ ಮುಂದುವರೆದಿದೆ. ಹೀಗಿರುವಾಗಲೇ ಬ್ರಿಟನ್ ಅಮೆರಿಕ ಫಾರ್ಮಾ ಕಂಪನಿಯ ಫೈಝರ್ ಹಾಗೂ ಜರ್ಮನಿ ಕಂಪನಿಯ ಬಯೋಎನ್ಟೆಕ್‌ನ ಜಾಂಯಿಟ್ ಕೊರೋನಾ ವೈರಸ್ ಲಸಿಕೆ ಬಳಕೆಗೆ ಅನುಮತಿ ನೀಡಿದೆ. ಈ ಮೂಲಕ ಲಸಿಕೆಗೆ ಅನುಮತಿ ನೀಡಿದ ವಿಶ್ವದ ಮೊದಲ ರಾಷ್ಟ್ರವೆನಿಸಿಕೊಂಡಿದೆ. ಇದನ್ನು ಮುಂದಿನ ವಾರದ ಆರಂಭದಲ್ಲಿ ಬ್ರಿಟನ್ ಜನರಿಗೆ ನೀಡಲಾಗುತ್ತದೆ. 

ಸೈಡ್‌ ಎಫೆಕ್ಟ್ ಬೀರಿದೆ ಎಂದು ಲಸಿಕೆಗೆ ತಡೆ ನೀಡಲಾಗದು: ಕೇಂದ್ರ

ಬ್ರಿಟನ್ ಸರ್ಕಾರ ಇಂದು ಸ್ವತಂತ್ರ ಔಷಧಿ ಮತ್ತು ಆರೋಗ್ಯ ಉತ್ಪನ್ನಗಳ ನಿಯಂತ್ರಣ ಸಂಸ್ಥೆ (ಎಂಹೆಚ್‌ಆರ್‌ಎ) ಯ ಶಿಫಾರಸನ್ನು ಸ್ವೀಕರಿಸಿದ್ದು, ಫೈಝರ್ -ಬಯೋನೋಟೆಕ್‌ನ ಕೋವಿಡ್ -19 ಲಸಿಕೆಯನ್ನು ಅನುಮೋದಿಸಿದೆ. ಇದರೊಂದಿಗೆ ಮುಂದಿನ ವಾರದಿಂದ ಈ ಲಸಿಕೆ ಮುಂದಿನ ವಾರದಿಂದ ಬ್ರಿಟನ್‌ನಲ್ಲಿ ಲಭ್ಯವಿರಲಿದೆ.

ಯಾರಿಗೆ ಮೊದಲ ಲಸಿಕೆ: ಬ್ರಿಟನ್ ವ್ಯಾಕ್ಸಿನ್ ಕಮಿಟಿ ನಿರ್ಧಾರ

ಲಭ್ಯಚವಾದ ಮಾಹಿತಿ ಅನ್ವಯ ಲಸಿಕೆ ಯಾರಿಗೆ ಮೊದಲು ನೀಡಬೇಕೆಂಬುವುದನ್ನು ಬ್ರಿಟನ್‌ನ ವ್ಯಾಕ್ಸಿನ್ ಕಮಿಟಿ ನಿರ್ಧರಿಸಲಿದೆ. ಉದಾ: ಆರೋಗ್ಯ ಸಿಬ್ಬಂದಿಗಳಿಗೋ, ಹಿರಿಯರಿಗೋ ಎಂಬುವುದನ್ನು ನಿರ್ಧರಿಸಲಿದ್ದಾರೆ. ಆರೋಗ್ಯ ಸಚಿವ ಮ್ಯಾಟ್ ಹ್ಯಾನ್‌ಕಾಕ್ ಈ ಬಗ್ಗೆ ಮಾತನಾಡುತ್ತಾ ಮುಂದಿನ ವಾರದಿಂದ ಲಸಿಕೆ ಲಭ್ಯವಾಗಲಿದೆ ಎಂದಿದ್ದಾರೆ.

ದೇಶದ ಎಲ್ಲರಿಗೂ ಲಸಿಕೆ ನೀಡ್ತೀವಿ ಎಂದು ಹೇಳೇ ಇಲ್ಲ, ನಿರ್ದಿಷ್ಟ ವರ್ಗಕ್ಕೆ ಕೊಟ್ಟರೆ ಸಾಕು: ಕೇಂದ್ರ!

ಭಾರತಕ್ಕೆ ಬರುವುದು ಡೌಟ್ 

ಫೈಝರ್ ಲಸಿಕೆ ಭಾರತಕ್ಕೆ ಬರುವುದು ಅನುಮಾನ ಎನ್ನಲಾಗಿದೆ. ಈ ಲಸಿಕೆಯನ್ನು ಸಂರಕ್ಷಿಸಿಡಲು 2ರಿಂದ 8 ಡಿಗ್ರಿ ಸೆಲ್ಸಿಯಸ್ ತಾಪಮಾನ ಬೇಕಾಗುತ್ತದೆ. ಇನ್ನು ಫೈಸರ್ ಲಸಿಕೆ ಪ್ಯಾಕ್ ಆಗುವುದರಿಂದ ಇಂಜೆಕ್ಷನ್ ತಯಾರಾಗುವವರೆಗೆ ಅದನ್ನು -70 ಡಿಗ್ರಿ ತಾಪಮಾನದಲ್ಲಿಡಬೇಕಾಗುತ್ತದೆ. ಹೀಗಾಗಿ ಇದನ್ನು ಭಾರತಕ್ಕೆ ತರುವುದು ಬಹುದೊಡ್ಡ ಸವಾಲಾಗಿದೆ. ಈ ಲಸಿಕೆ ಈವರೆಗೆ ನಡೆದ ಮೂರು ಹಂತಗಳಲ್ಲಿ ಶೇ. 95 ರಷ್ಟು ಪಪ್ರಭಾವಶಾಲಿ ಎನ್ನಲಾಗಿದೆ.