ಬೆಂಗಳೂರು (ಆ.31): ಸಂಪೂರ್ಣ ಬೆಂಗಳೂರನ್ನೇ ಆವರಿಸಿ ಕಾಡುತ್ತಿರುವ ಕೊರೋನಾ ಮಹಾಮಾರಿಯಿಂದ ನಾಲ್ಕು ವಾರ್ಡುಗಳು ಮಾತ್ರ ಸೇಫ್ ಆಗಿವೆ.

ರಾಜಧಾನಿಯ 198 ವಾರ್ಡುಗಳ ಪೈಕಿ ನಾಲ್ಕು ವಾರ್ಡುಗಳಲ್ಲಿ ಕೊರೋನಾ ಅಟ್ಟಹಾಸ ಕಡಿಮೆಯಾಗಿದೆ. ಇಲ್ಲಿ ಕಳೆದ ಮಾರ್ಚಿಂದ 100ಕ್ಕಿಂತ ಕಡಿಮೆ ಕೇಸುಗಳು ದಾಖಲಾಗಿವೆ. 

ಭಾರತದಲ್ಲಿ ಏರುತ್ತಿದೆ ಸೋಂಕಿತರ ಸಂಖ್ಯೆ: ಇಟಲಿ, ಬ್ರಿಟನ್‌, ಅಮೆರಿಕ, ಬ್ರೆಜಿಲ್‌ನಲ್ಲಿ ಹೇಗಿದೆ?...

ಬೆಂಗಳೂರಿನಲ್ಲಿ ಡಿಜೆ ಹಳ್ಳಿ, ಕುಶಾಲ್ ನಗರ, ದೇವಸಂದ್ರ, ಕೆಂಪಾಪುರ ಅಗ್ರಹಾರದಲ್ಲಿ ಅತ್ಯಂತ ಕಡಿಮೆ ಕೋವಿಡ್ ಪ್ರಕರಣಗಳು ದಾಖಲಾಗಿದೆ. 

'ದೇಶದಲ್ಲಿ ದೀಪಾವಳಿ ವೇಳೆಗೆ ಕೊರೋನಾ ನಿಯಂತ್ರಣಕ್ಕೆ'! ...

ಇಲ್ಲಿ ಕಳೆದ ಕೆಲ ದಿನಗಳ ಹಿಂದೆ ಗಲಭೆ ನಡೆದ ಕಾರಣ ಕರ್ಫ್ಯೂ ವಿಧಿಸಲಾಗಿತ್ತು. ಈ ನಿಟ್ಟಿನಲ್ಲಿ ಇಲ್ಲಿ ಕೊರೋನಾ ಕೇಸುಗಳ ಸಂಖ್ಯೆ ಅತ್ಯಂತ ಕಡಿಮೆ ಇದೆ. 

 ಕರ್ಫ್ಯೂ ವಿಧಿಸಿರುವುದೇ ಈ ಏರಿಯಾಗಳಿಗೆ ವರದಾನವಾಗಿದೆ. ನಾಲ್ಕು ವಾರ್ಡುಗಳಲ್ಲಿಯೂ ಸ್ಲಂಗಳ ಸಂಖ್ಯೆ ಹೆಚ್ಚಾಗಿದ್ದು, ಸೋಂಕಿತರಿಗೆ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿತ್ತು. ಇದರಿಂದ ವೈರಸ್ ಹರಡುವಿಕೆ ಕಡಿಮೆಯಾಗಿದೆ.

4 ವಾರ್ಡ್ ಗಳ ಪೈಕಿ 

ಡಿಜೆ ಹಳ್ಳಿಯಲ್ಲಿ -  64 ಪ್ರಕರಣಗಳು
ಕುಶಾಲನಗರ -  61ಪ್ರಕರಣಗಳು
ದೇವಸಂದ್ರ - 70 ಪ್ರಕರಣಗಳು, 
ಕೆಂಪಾಪುರ ಅಗ್ರಹಾರ - 90 ಪ್ರಕರಣಗಳು ಇದುವರೆಗೆ ದಾಖಲಾಗಿವೆ.