ನ್ಯೂಯಾರ್ಕ್(ಜು.16): ಕೊರೋನಾ ಪೀಡಿತರಲ್ಲಿ ತೀವ್ರ ಆತಂಕ ಹಾಗೂ ನಿರುತ್ಸಾಹ ಕಂಡುಬರುತ್ತಿದೆ. ಹೀಗಾಗಿ, ಈ ವೈರಸ್‌ ಮನುಷ್ಯನ ನರದ ವ್ಯವಸ್ಥೆ ಮೇಲೆ ಪರಿಣಾಮ ಬೀರುವುದರ ಸಂಕೇತವಿರಬಹುದು ಎಂದು ಅಧ್ಯಯನವೊಂದು ತಿಳಿಸಿದೆ.

ಕೊರೋನಾಕ್ಕೆ ತುತ್ತಾದವರಲ್ಲಿ ಕೆಮ್ಮು, ಜ್ವರ, ಕಫ ಹಾಗೂ ಉಸಿರಾಟದ ತೊಂದರೆ ಜೊತೆಗೆ ವಾಸನೆ ಮತ್ತು ರುಚಿಯ ಗ್ರಹಿಕೆ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾರೆ. ಈ ಪೈಕಿ ವಾಸನೆ ಮತ್ತು ರುಚಿ ಗ್ರಹಿಕೆಯ ಸಾಮರ್ಥ್ಯ ಕಳೆದುಕೊಳ್ಳುವಿಕೆಯು ಮಾನಸಿಕ ಆರೋಗ್ಯದ ಜೊತೆ ನಿಕಟ ಸಂಬಂಧ ಹೊಂದಿರುತ್ತವೆ ಎಂದು ಇತ್ತೀಚೆಗೆ ಪ್ರಕಟವಾದ ದಿ ಲಾರಿಂಗೊಸ್ಕೋಪ್‌ ಎಂಬ ವೈದ್ಯಕೀಯ ಜರ್ನಲ್‌ನಲ್ಲಿ ಉಲ್ಲೇಖಿಸಲಾಗಿದೆ.

ದೇಶದಲ್ಲಿ ಒಂದೇ ದಿನ ದಾಖಲೆಯ 32672 ಕೇಸು, 603 ಸಾವು!

ಭಾರತದಲ್ಲಿ ಹೆಚ್ಚುತ್ತಿದೆ ಕೊರೋನಾ ಸೋಂಕತರ ಸಂಖ್ಯೆ

ಬುಧವಾರ ದೇಶದಲ್ಲಿ ದಾಖಲೆಯ ಪ್ರಮಾಣದಲ್ಲಿ ಹೊಸ ಕೊರೋನಾ ಸೋಂಕಿತರು ಪತ್ತೆಯಾಗಿದ್ದಾರೆ. ನಿನ್ನೆ 32672 ಹೊಸ ಕೇಸು ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 963773ಕ್ಕೆ ತಲುಪಿದೆ.

ಇದೇ ವೇಳೆ ಮತ್ತೆ 603 ಜನರು ಸೋಂಕಿಗೆ ಬಲಿಯಾಗುವುದರೊಂದಿಗೆ ಈವರೆಗೆ ವೈರಸ್‌ಗೆ ಬಲಿಯಾದವರ ಸಂಖ್ಯೆ 24863ಕ್ಕೆ ತಲುಪಿದೆ. ಇದೇ ವೇಳೆ ಬುಧವಾರ 21415 ಜನರು ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಈ ಮೂಲಕ ಒಟ್ಟು ಚೇತರಿಕೆಯಾದವರ ಪ್ರಮಾಣ 610430ಕ್ಕೆ ಮುಟ್ಟಿದೆ.