Asianet Suvarna News Asianet Suvarna News

ಚೀನಾ ಮಾತ್ರವಲ್ಲ ಯೂರೋಪ್‌, ಏಷ್ಯಾದಲ್ಲೂ ಕೊರೋನಾ ಹೆಚ್ಚಳ, ಲಾಕ್‌ಡೌನ್‌ಗೆ ಚಿಂತನೆ!

  • ಕೊರೋನಾ ನಿಯಂತ್ರಿಸಿದ ಭಾರತದಲ್ಲಿ 100 ಕೋಟಿ ಲಸಿಕೆ ಸಾಧನೆ
  • ಚೀನಾದಲ್ಲಿ ಕೊರೋನಾ ಆತಂಕ ಹೆಚ್ಚಳ, ಕಟ್ಟು ನಿಟ್ಟಿನ ಕ್ರಮ ಜಾರಿ
  • ಏಷ್ಯಾ ಹಾಗೂ ಯೂರೋಪ್‌ನಲ್ಲಿ ಕೊರೋನಾ ಹೆಚ್ಚಳ
Covid 19 cases increased in several countries in Asia and Europe says WHO Health Report ckm
Author
Bengaluru, First Published Oct 22, 2021, 9:07 PM IST

ನವದೆಹಲಿ(ಅ.22): ಭಾರತ 100 ಕೋಟಿ ಲಸಿಕೆ(Vaccine Century( ಗಡಿ ದಾಟಿದ ಸಂಭ್ರಮದಲ್ಲಿದೆ. ಇತ್ತ ಕೊರೋನಾ ಕೂಡ ನಿಯಂತ್ರಣದಲ್ಲಿದೆ. ಹೀಗಾಗಿ 100 ಕೋಟಿ ಲಸಿಕೆ ಸಾಧನೆಯನ್ನು ಭಾರತ(India) ಆಚರಿಸಿದೆ. ಆದರೆ ಇದರ ಬೆನ್ನಲ್ಲೇ ಆತಂಕದ ವಿಚಾರವೂ ಹೊರಬಿದ್ದಿದೆ. ಚೀನಾದಲ್ಲಿ(China) ಕೊರೋನಾ ಹೆಚ್ಚಳವಾಗಿದೆ. ಇದರ ಜೊತೆಗೆ ಏಷ್ಯಾದ ಇತರ ರಾಷ್ಟ್ರಗಳು ಹಾಗೂ ಯುರೋಪ್‌ನಲ್ಲೂ(Europe) ಕೊರೋನಾ ಆತಂಕ ಹೆಚ್ಚಾಗಿದೆ. ಹೀಗಾಗಿ ಮತ್ತೆ ಕಠಿಣ ನಿರ್ಬಂಧಗಳು ಜಾರಿ ಕುರಿತು ಗಂಭೀರ ಚರ್ಚೆ ನಡೆಯುತ್ತಿದೆ.

ಒಂದಾದ ದೇಶ, ಕಣ್ಣಿಗೆ ಕಾಣದ ವೈರಿ ವಿರುದ್ಧ ಹೋರಾಟ: ಜಾಗತಿಕ ದಾಖಲೆ ಮಾಡಿದ ಭಾರತ!

ಚೀನಾ, ರಷ್ಯಾ, ಯುಕೆ ಹಾಗೂ ಪೂರ್ವ ಯೂರೋಪ್‌ನಲ್ಲಿ ಕೊರೋನಾ(Coronavirus) ಹೆಚ್ಚಳವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ(WHO) ಪ್ರಕಾರ ಯುಕೆನಲ್ಲಿ 283,756 ಹೊಸ ಕೊರೋನಾ ಪ್ರಕರಣ ಪತ್ತೆಯಾಗಿದೆ. ಇನ್ನು ರಷ್ಯಾದಲ್ಲಿ  217,322 ಹೊಸ ಪ್ರಕರಣಗಳು ಪತ್ತೆಯಾಗಿದೆ. ಯುಕೆ ಹಾಗೂ ರಷ್ಯಾದಲ್ಲಿ(Russia) ಕೊರೋನಾ ಪ್ರಕರಣದಲ್ಲಿ ಶೇಕಡಾ 15 ರಷ್ಟು ಏರಿಕೆಯಾಗಿದೆ.

ಜನರ ಬೆಂಬಲದಿಂದ ಎಲ್ಲವೂ ಸಾಧ್ಯ: ಲಸಿಕೆ ವಿಚಾರದಲ್ಲಿ ಎಲ್ಲರ ಲೆಕ್ಕಾಚಾರ ಉಲ್ಟಾ ಮಾಡಿದ ಭಾರತ!

ಯುರೋಪ್ ದೇಶದಲ್ಲಿನ ಕೊರೋನಾ ವೈರಸ್ ಪ್ರಕರಣಗಳಲ್ಲಿ ಶೇಕಡಾ 7 ರಷ್ಟು ಏರಿಕೆಯಾಗಿದೆ ವಾರದಲ್ಲಿ ಕೊರೋನಾದಿಂದ ಮೃತಪಡುತ್ತಿರುವವರ ಸಂಖ್ಯೆ ಶೇಕಡಾ 1.9 ರಷ್ಟು ಏರಿಕೆಯಾಗಿದೆ. ಜುಲೈ 17ರ ಬಳಿಕ ಯುಕೆನಲ್ಲಿ ಕೊರೋನಾ ನಿಯಂತ್ರಣಕ್ಕೆ ಬಂದಿ್ತು. ಆದರೆ ಅಕ್ಟೋಬರ್ ತಿಂಗಳ ಮಧ್ಯಭಾಗದಲ್ಲಿ ಯುಕೆನಲ್ಲಿ 50,000 ಕೊರೋನಾ ಪ್ರಕರಣ ದಾಖಲಾಗಿದೆ. ಇದು ಜುಲೈ ಬಳಿಕ ದಾಖಲಾದ ಅತ್ಯಧಿಕ ಕೊರೋನಾ ಪ್ರಕರಣವಾಗಿದೆ. ಯುಕೆ ಹೆಲ್ತ್ ರಿಪೋರ್ಟ್ ಪ್ರಕಾರ ಲಂಡನ್ ಸೇರಿದಂತೆ ಕೆಲ ಭಾಗಗಳಲ್ಲಿ ಡೆಲ್ಟಾ ವೇರಿಯೆಂಟ್ ಕೂಡ ಕಾಣಿಸಿಕೊಳ್ಳುತ್ತಿದೆ. 

100 ಕೋಟಿ ಲಸಿಕೆ ಸಂಭ್ರಮ : ತಮ್ಮ Profile Picture ಬದಲಿಸಿದ ಪ್ರಧಾನಿ ಮೋದಿ!

ರಷ್ಯಾದಲ್ಲಿ ಕಳೆದ 24 ಗಂಟೆಯಲ್ಲಿ ಕೊರೋನಾ ಸಾವಿನ ಪ್ರಕರಣ 1,064ಕ್ಕೆ ಏರಿಕೆಯಾಗಿದೆ. ಮುಂದಿನ ವಾರದಲ್ಲಿ ಮಾಸ್ಕೋದಲ್ಲಿ ಕೊರೋನಾ ಪ್ರಕರಣ ಸಂಖ್ಯೆ ಗರಿಷ್ಠ ಮಟ್ಟಕ್ಕೆ ತಲುಪಲಿದೆ. ಈ ಹಿಂದೆ ಕಾಣದ ಏರಿಕೆಯನ್ನು ಕಾಣುತ್ತಿದೆ ಎಂದು ರಷ್ಯಾ ಆರೋಗ್ಯ ವರದಿ ಹೇಳುತ್ತಿದೆ.  ರಷ್ಯಾದಲ್ಲಿ ಕೊರೋನಾ ಪ್ರಕರಣ ಹೆಚ್ಚಾಗುತ್ತಿರುವ ಕಾರಣ ಅಕ್ಟೋಬರ್ 30 ರಿಂದ ನವೆಂಬರ್ 7 ವರಗೆ ರಜಾ ದಿನ ಎಂದು ಘೋಷಿಸಲಾಗಿದೆ. ಈ ವೇಳೆ ಯಾರೂ ಓಡಾದಂತೆ, ಕೊರೋನಾ ಹರದಂತೆ ಮನವಿ ಮಾಡಲಾಗಿದೆ. ಮುಂದಿನ 7 ದಿನಗಳಲ್ಲಿ ಕೊರೋನಾ ಪ್ರಕರಣ ಸಂಖ್ಯೆ ಇಳಿಕೆಯಾಗಿದ್ದರೆ, ಲಾಕ್‌ಡೌನ್ ಸೇರಿದಂತೆ ಕಠಿಣ ನಿಯಮ ಜಾರಿಗೊಳಿಸುವ ಕುರಿತು ಚಿಂತಿಸಲಾಗುತ್ದಿದೆ.

ಕರ್ನಾಟಕದಲ್ಲಿ 6 ಕೋಟಿ ಡೋಸ್ ಲಸಿಕೆ ವಿತರಣೆ: ಅಭಿಯಾನದಲ್ಲಿ ಕರ್ನಾಟಕ ಗೆದ್ದಿದ್ದು ಹೇಗೆ?

ಉಕ್ರೇನ್‌ನಲ್ಲಿ ಕಳೆದ 24 ಗಂಟೆಯಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಒಂದೇ ದಿನ 546 ಮಂದಿ ಕೊರೋನಾಗೆ ಮೃತಪಟ್ಟಿದ್ದಾರೆ. ಅಕ್ಟೋಬರ್ 19 ರಂದು 538 ಮಂದಿ ಕೊರೋನಾಗೆ ಬಲಿಯಾಗಿದ್ದರು.   ಇನ್ನು ಅಕ್ಟೋಬರ್ 20 ರಂದು 22,415 ಪ್ರಕರಣ ದಾಖಲಾಗಿದೆ. 

ಚೀನಾದಲ್ಲಿ ಮತ್ತೆ ಕೋವಿಡ್‌ ಸ್ಫೋಟ, ಭಾರೀ ಆತಂಕ: ವಿಮಾನ ರದ್ದು, ಶಾಲೆ ಬಂದ್‌!

ಸಿಂಗಾಪುರದಲ್ಲೂ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿದೆ. ಅಕ್ಚೋಬರ್ 21 ರಂದು ಸಿಂಗಾಪುರದಲ್ಲಿ 3,439  ಹೊಸ ಪ್ರಕರಣಗಳು ದಾಖಲಾಗಿದೆ. 346 ಕೊರೋನಾ ಸೋಂಕಿತರು ತೀವ್ರ ನಿಘಾಘಟಕದಲ್ಲಿ ವೆಂಟಿಲೇಟರ್ ಮೂಲಕ ಉಸಿರಾಡುತ್ತಿದ್ದಾರೆ. ಏಷ್ಯಾದ ಒಂದೊಂದೇ ರಾಷ್ಟ್ರದಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗುತ್ತಿದೆ. ಚೀನಾದಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ. 100ಕ್ಕೂ ಹೆಚ್ಚು ವಿಮಾನ ರದ್ದು ಮಾಡಲಾಗಿದೆ. 
 

Follow Us:
Download App:
  • android
  • ios