ಚೀನಾ ಲಸಿ​ಕೆ ಪಡೆದ ಬಹುತೇಕ ದೇಶ​ಗ​ಳ​ಲ್ಲಿ ಮತ್ತೆ ಕೊರೋನಾ ಏರಿಕೆ ಚಿಲಿ, ಸೀಶೆಲ್ಸ್‌, ಚಿಲಿ, ಬಹ್ರೈನ್‌ ದೇಶ​ಗಳಲ್ಲಿ ಮತ್ತೆ ಸೋಂಕು ಹೆಚ್ಚ​ಳ ಶೇ.68ರಷ್ಟುಜನರಿಗೆ ಲಸಿಕೆ ನೀಡಿದ್ದರೂ ನಿಂತಿಲ್ಲ ಸೋಂಕು ಪ್ರಸರಣ

ವಾಷಿಂಗ್ಟನ್‌(ಜೂ.24): ವಿಶ್ವಕ್ಕೆಲ್ಲಾ ಕೊರೋನಾ ಹಬ್ಬಿಸಿದ ಕಳಂಕ ಹೊತ್ತಿರುವ ಚೀನಾ ದೇಶ, ಇದೀಗ ವೈರಸ್‌ ವಿರುದ್ಧ ಕಳಪೆ ಗುಣಮಟ್ಟದ ಲಸಿಕೆ ಅಭಿವೃದ್ಧಿಪಡಿಸುವ ಮೂಲಕ ಮತ್ತಷ್ಟುಟೀಕೆಗೆ ಗುರಿಯಾಗಿದೆ. ಅದಕ್ಕೆ ಉದಾಹರಣೆ ಎಂಬಂತೆ ಚೀನಾ ಲಸಿಕೆಯನ್ನು ನೀಡಿದ್ದ ಹಲವು ದೇಶಗಳಲ್ಲಿ ಮತ್ತೆ ಸೋಂಕಿನ ಪ್ರಮಾಣದಲ್ಲಿ ಭಾರೀ ಏರಿಕೆ ದಾಖಲಾಗುತ್ತಿದೆ ಎಂದು ಅಮೆರಿಕದ ‘ನ್ಯೂಯಾರ್ಕ್ ಟೈಮ್ಸ್‌’ ವರದಿ ಮಾಡಿದೆ.

ಚೀನಾ ಸರ್ಕಾರ ಕೊರೋನಾಕ್ಕೆ ‘ಸಿನೋ​ಫಾರ್ಮ’ ಮತ್ತು ‘ಸಿನೋ​ವ್ಯಾಕ್‌’ ಎಂಬ ಲಸಿ​ಕೆ​ಗ​ಳನ್ನು ಅಭಿ​ವೃ​ದ್ಧಿ​ಪ​ಡಿ​ಸಿ ತನ್ನ ಮಿತ್ರ ದೇಶ​ಗ​ಳಿ​ಗೆ ಹಂಚಿಕೆ ಮಾಡಿದೆ. ಆದರೆ, ಸೀಶೆಲ್ಸ್‌, ಚಿಲಿ, ಬಹ್ರೈನ್‌ ಮತ್ತು ಮಂಗೋ​ಲಿ​ಯಾ​ದಲ್ಲಿ ಶೇ.68ರಷ್ಟುಜನರಿಗೆ ​ಎರಡು ಡೋಸ್‌ ಲಸಿ​ಕೆ​ಯನ್ನು ನೀಡ​ಲಾ​ಗಿ​ದ್ದರೂ, ಸೋಂಕಿನ ಪ್ರಮಾಣ ಈಗಲೂ ಅಧಿ​ಕ​ವಾ​ಗಿದೆ. ಈ ದೇಶ​ಗಳು ಹೆಚ್ಚು ಕೊರೋನಾದಿಂದ ಬಾಧಿ​ತ​ವಾದ ಅಗ್ರ 10 ದೇಶ​ಗಳ ಪಟ್ಟಿ​ಯ​ಲ್ಲಿವೆ.

ಉಗ್ರ ಹಫೀಜ್ ಸಯೀದ್ ಮನೆ ಬಳಿ ಸ್ಫೋಟ: 2 ಸಾವು, 16 ಮಂದಿಗೆ ಗಾಯ

ಸೀಶೇ​ಲ್ಸ್‌​ನಲ್ಲಿ 10 ಲಕ್ಷ ಜನ​ಸಂಖ್ಯೆಗೆ 716 ಪ್ರಕ​ರ​ಣ​ಗಳು ಪತ್ತೆ ಆಗು​ತ್ತಿವೆ. ಮಂಗೋ​ಲಿ​ಯಾ​ದಲ್ಲಿ ಶೇ.52ರಷ್ಟುಜನರಿಗೆ ಪೂರ್ಣ ಪ್ರಮಾ​ಣದ ಲಸಿಕೆ ನೀಡಿ​ದ್ದರೂ ಭಾನು​ವಾರ 2,400 ಹೊಸ ಪ್ರಕ​ರ​ಣ​ಗಳು ಪತ್ತೆ ಆಗಿವೆ. ಅಲ್ಲದೇ, ಚೀನಾದ ಲಸಿ​ಕೆ​ಗಳು ರೂಪಾಂತರಿ ವೈರಸ್‌ ವಿರುದ್ಧ ಅಷ್ಟೇನು ಪರಿ​ಣಾ​ಮ​ಕಾ​ರಿ​ಯಾ​ಗಿಲ್ಲ ಎಂದು ತಜ್ಞರು ಅಭಿ​ಪ್ರಾ​ಯ​ಪ​ಟ್ಟಿ​ದ್ದಾರೆ. ವಿಶ್ವದ ಇತರ ಲಸಿ​ಕೆ​ಗ​ಳಿಗೆ ಹೋಲಿ​ಸಿ​ದರೆ ಸಿನೋ​ಫಾರ್ಮಾ ಲಸಿಕೆ ಕೋವಿಡ್‌ ವಿರುದ್ಧ ಶೇ.78ರಷ್ಟುಮತ್ತು ಸಿನೋ​ವ್ಯಾಕ್‌ ಕೇವಲ 51ರಷ್ಟುಮಾತ್ರ ಪರಿ​ಣಾ​ಮ​ಕಾರಿ ಆಗಿ​ರು​ವುದು ಈಗ ಕಳ​ವಳಕಾರಿ​ಯಾ​ಗಿ​ದೆ ಎಂದು ತಜ್ಞರು ಹೇಳಿ​ದ್ದಾರೆ.

ಈವರೆಗೆ 90 ದೇಶ​ಗಳು ಚೀನಾದ ಲಸಿ​ಕೆ​ಯನ್ನು ಪಡೆ​ದು​ಕೊಂಡಿವೆ. ಬಹ​ರೇನ್‌ ಮತ್ತು ಯುಎಇ ದೇಶ​ಗಳು ಕ್ಲಿನಿ​ಕಲ್‌ ಪ್ರಯೋ​ಗದ ಅಂತಿಮ ವರ​ದಿಗೂ ಮುನ್ನವೇ ಸಿನೋ​ಫಾರ್ಮಾ ಲಸಿ​ಕೆಗೆ ಅನು​ಮೋ​ದನೆ ನೀಡಿ​ದ್ದವು. ಆದರೆ, ಈ ಎರಡು ದೇಶ​ಗ​ಳಲ್ಲಿ ಲಸಿಕೆ ಪಡೆ​ದ​ವರೂ ಕೂಡ ಕಾಯಿ​ಲೆಗೆ ತುತ್ತಾ​ಗು​ತ್ತಿ​ರುವ ಬಗ್ಗೆ ವರದಿ ಆಗು​ತ್ತಿದೆ.

ಭಾರೀ ಅನುಮಾನ:

ಇನ್ನು ತನ್ನ ದೇಶದಲ್ಲಿ ತನ್ನದೇ ಲಸಿಕೆಯನ್ನು ನೀಡುತ್ತಿರುವ ಚೀನಾ ಸರ್ಕಾರ, ದೇಶದಲ್ಲಿನ ಒಟ್ಟಾರೆ ಸೋಂಕಿತರು ಮತ್ತು ಸಾವಿನ ಸಂಖ್ಯೆಯನ್ನು ಮುಚ್ಚಿಡುತ್ತಲೇ ಬಂದಿದೆ. ಚೀನಾ ಸರ್ಕಾರದ ಅಂಕಿ ಅಂಶಗಳ ಅನ್ವಯ, 140 ಕೋಟಿ ಜನಸಂಖ್ಯೆ ಹೊಂದಿರುವ ಚೀನಾದಲ್ಲಿ ಇದುವರೆಗೆ ಕೇವಲ 91653 ಜನರಲ್ಲಿ ಮಾತ್ರವೇ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, 4636 ಜನರು ಮಾತ್ರವೇ ಸಾವನ್ನಪ್ಪಿದ್ದಾರೆ.