Asianet Suvarna News Asianet Suvarna News

ಕೊರೋನಾ ಸೃಷ್ಟಿಗೆ ಚೀನಾ ಸರ್ಕಾರವೇ ಕಾರಣ, ದಾಖಲೆ ಸಮೇತ ಮಾಹಿತಿ ಬಹಿರಂಗ!

ಕೊರೋನಾ ವೈರಸ್ ಚೀನಾ ಸರ್ಕಾರ ಉದ್ದೇಶ ಪೂರ್ವಕವಾಗಿ ಸೃಷ್ಟಿಸಿದೆ ಎಂಬ ಆರೋಪವಿದೆ. ಆದರೆ ಈ ಆರೋಪಗಳನ್ನು ಚೀನಾ ಸಾರಾಸಗಟಾಗಿ ತಿರಸ್ಕರಿಸಿದೆ. ಇದೀಗ ಚೀನಾದ ವೈರೊಲೊಜಿಸ್ಟ್ ವೈಜ್ಞಾನಿಕ ದಾಖಲೆಗಳೊಂದಿಗೆ ಚೀನಾ ಸರ್ಕಾರದ ಕಳ್ಳಾಟವನ್ನು ಬಟಾ ಬಯಲು ಮಾಡಿದ್ದಾರೆ.

coronavirus was made in a government controlled laboratory in Wuhan Says Chinese virologist
Author
Bengaluru, First Published Sep 14, 2020, 2:33 PM IST
  • Facebook
  • Twitter
  • Whatsapp

ಬಿಜಿಂಗ್(ಸೆ.14): ಕೊರೋನಾ ಚೀನಾ ಉದ್ದೇಶಪೂರ್ವಕವಾಗಿ ಸೃಷ್ಟಿಸಿದ ವೈರಸ್ ಎಂದು ಅಮೆರಿಕ ಸೇರಿದಂತೆ ಹಲವು ದೇಶಗಳು ಬಹಿರಂಗವಾಗಿ ಹೇಳಿದೆ. ಇನ್ನು ಹಲವು ರಾಷ್ಟ್ರಗಳು ಚೀನಾ ಮೇಲೆ ಪರೋಕ್ಷವಾಗಿ ಕಿಡಿಕಾರಿದೆ. ಪ್ರತಿ ಬಾರಿ ಚೀನಾ ಈ ಆರೋಪವನ್ನು ತಿರಸ್ಕರಿಸಿದೆ. ಚೀನಾಗೆ ವಿಶ್ವ ಆರೋಗ್ಯ ಸಂಸ್ಥೆ ಕೂಡ  ಸಾಥ್ ನೀಡಿದೆ. ಆದರೆ ಇದೀಗ ಚೀನಾ ಸರ್ಕಾವೇ ಕೊರೋನಾ ಸೃಷ್ಟಿ ಮಾಡಿದೆ ಎಂದು ಚೈನೀಸ್ ವೈರೊಲೊಜಿಸ್ಟ್ ಬಹಿರಂಗ ಪಡಿಸಿದ್ದಾರೆ.

ಚಳಿ ಬಗ್ಗೆ ಸ್ವಲ್ಪ ಎಚ್ಚರ ತಪ್ಪಿದ್ರೂ ಕೊರೋನಾ ತೆಕ್ಕೆಗೆ ಫಿಕ್ಸ್‌!

ಹಾಂಕ್‌ ಕಾಂಗ್ ಸ್ಕೂಲ್ ಆಫ್  ಪಬ್ಲಿಕ್ ಹೆಲ್ತ್‌ನಲ್ಲಿ ವಿರೊಲೊಜಿಸ್ಟ್ ಆಗಿರುವ ಡಾ.ಲಿ ಮೆಂಗ್ ಈ ಸ್ಫೋಟಕ ಮಾಹಿತಿ ಬಹಿರಂಗ ಪಡಿಸಿದ್ದಾರೆ. ತನಿಖಾಧಾರಿತ ಸಂಶೋಧನೆ ಮಾಡಿರುವ ಡಾಕ್ಟರ್ ಲಿ ಮೆಂಗ್, ಮಹತ್ವದ ಮಾಹಿತಿ ಬಹಿರಂಗಪಡಿಸಿದ್ದಾರೆ. ಚೀನಾ ಸರ್ಕಾರ ನಿಯಂತ್ರಿತ ಲ್ಯಾಬ್‌ಗಳಲ್ಲಿ ಕೊರೋನಾ ವೈರಸ್ ಸೃಷ್ಟಿ ಮಾಡಲಾಗಿದೆ. ಇಷ್ಟೇ ಅಲ್ಲ ಈ ವೈರಸ್ ಮಿಂಚಿನಂತೆ ಹರಡಲಿದೆ ಅನ್ನೋ ಸತ್ಯವೂ ಚೀನಾ ಸರ್ಕಾರಕ್ಕೆ ತಿಳಿದಿದೆ ಎಂದು ಲಿ ಮೆಂಗ್ ಹೇಳಿದ್ದಾರೆ.

ಕೊರೋನಾ ವಿರುದ್ಧ ಗೆದ್ದ ಕೆನಡ; ಸತತ 2ನೇ ದಿನ ಸಾವಿನ ಸಂಖ್ಯೆ ಶೂನ್ಯ!.

ಸಂಶೋದನೆ ಹಾಗೂ ತನಿಖೆಯಿಂದ ಮಹತ್ವದ ಮಾಹಿತಿ ಲಭ್ಯವಾಗಿದೆ. ಕೊರೋನಾ ಸೃಷ್ಟಿ ಮಾಡಿರುವುದು ಚೀನಾ ಎಂದು ಖಚಿತವಾಗಿ ಹೇಳಲು ದಾಖಲೆಗಳಿವೆ. ನನಗೆ ಸ್ಪಷ್ಟವಾಗಿ ತಿಳಿದಿದೆ. ನಾನು ಈ ಮಾಹಿತಿ ಬಹಿರಂಗ ಪಡಿಸಿದರೆ ನನ್ನ ಜೀವಕ್ಕೆ ಅಪಾಯವಿದೆ. ಒಂದು ವೇಳೆ ನಾನು ಮಾಹಿತಿ ಗೌಪ್ಯವಾಗಿಟ್ಟರೆ, ತಪ್ಪಿತಸ್ಥ ಮನಸ್ಥಿತಿ ನನ್ನನ್ನು ಕಾಡಲಿದೆ ಎಂದು ಲಿ ಮೆಂಗ್ ಹೇಳಿದ್ದಾರೆ.

ಸೆಪ್ಟೆಂಬರ್ 11 ರಂದ ರಹಸ್ಯ ಸ್ಥಳದಿಂದ ಬ್ರಿಟಿಷ್ ಟಾಕ್ ಶೋ ಜೊತೆ ಮಾತನಾಡಿದ ಲಿ ಮೆಂಗ್, ಹಲವು ಮಾಹಿತಿ ಬಹಿರಂಗ ಪಡಿಸಿದ್ದಾರೆ. ತನ್ನ ಎಲ್ಲಾ ಮಾತುಗಳಿಗೆ ದಾಖಲೆಗಳಿವೆ ಎಂದಿದ್ದಾರೆ. ಇದು ಚೀನಾ ಸರ್ಕಾರ ಕುತಂತ್ರ ಎಂದು ಲಿ ಮೆಂಗ್ ಹೇಳಿದ್ದಾರೆ.

Follow Us:
Download App:
  • android
  • ios